Composer : Shri Shyamasundara dasaru
ಇಂದು ಪವಮಾನ ಪಿಡಿ ಎನ್ನಕೈಯ್ಯಾ ನಿನ್ನ ನಾ
ಪೊಂದಿ ಪ್ರಾರ್ಥಪೆನಯ್ಯಾ [ಪ]
ಬಂಧನದೊಳು ನೊಂದೆನಯ್ಯ
ಮುಂದೆ ಸನ್ಮಾರ್ಗತೋರಿಸು ಜೀಯಾ | ಎನ್ನ
ಕುಂದುಗಳೆಣಿಸದಿರಯ್ಯಾ , ಗುರು
ಗಂಧವಾಹನ ವಜ್ರಕಾಯಾ [ಅ.ಪ]
ನಾನು ನನ್ನದು ಎಂಬ ಮದ ಬಿಡಿಸೊ
ಜ್ಞಾನ ಭಕ್ತಿ ವಿರಕ್ತಿ ಕರುಣಿಸೊ
ಜಾನಕಿಪತಿ ಪದದಿ ಮನ ನಿಲಿಸೊ
ಸಾನುರಾಗದಿ ಸತತ ಉದ್ಧರಿಸೊ [೧]
ನಿನ್ನ ದಯದಿಂ ರವಿಜ ಭಯ ಕಳೆದಾ
ನಿನ್ನ ಒಲುಮೆಲಿ ಪಾರ್ಥ ಜಯ ಪಡೆದಾ
ನಿನ್ನ ದ್ವೇಷಿಸಿ ರಾವಣನು ಅಳಿದ
ನಿನ್ನ ದೂಷಿಸಿ ಕುರುಪ ತಾ ಮಡಿದಾ [೨]
ಶ್ರೀಮದಾನಂದತೀರ್ಥ ಮಧ್ವೇಶಾ
ಶ್ಯಾಮಸುಂದರ ಸ್ವಾಮಿ ನಿಜದಾಸಾ
ಈ ಮಹೀಯೊಳು ಕೊರವಿ ಪುರವಾಸ
ಕಾಮಿತಾರ್ಥವ ಕೊಟ್ಟು ಪೊರೆ ಅನಿಶಾ [೩]
iMdu pavamAna piDi ennakaiyyA ninna nA
poMdi prArthapenayyA [pa]
baMdhanadoLu noMdenayya
muMde sanmArgatOrisu jIyA | enna
kuMdugaLeNisadirayyA , guru
gaMdhavAhana vajrakAyA [a.pa]
nAnu nannadu eMba mada biDiso
j~jAna Bakti virakti karuNiso
jAnakipati padadi mana niliso
sAnurAgadi satata uddhariso [1]
ninna dayadiM ravija Baya kaLedA
ninna olumeli pArtha jaya paDedA
ninna dvEShisi rAvaNanu aLida
ninna dUShisi kurupa tA maDidA [2]
SrImadAnaMdatIrtha madhvESA
shyAmasuMdara svAmi nijadAsA
I mahIyoLu koravi puravAsa
kAmitArthava koTTu pore aniSA [3]
Leave a Reply