Composer : Shri Purandara dasaru
ಹನುಮ ನಮ್ಮ ತಾಯಿ ತಂದೆ
ಭೀಮ ನಮ್ಮ ಬಂಧು ಬಳಗ
ಆನಂದ ತೀರ್ಥರೆ ನಮ್ಮ ಗತಿಗೋತ್ರ ರೈಯ್ಯ |ಪ|
ತಾಯಿತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ
ಆಯಾಸವಿಲ್ಲದೆ ಸಂಜೀವನವ ತಂದೆ
ಘಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆದ
ರಘುರಾಮನಂಗ್ರಿಯುಗಳೇ ಸಾಕ್ಷಿ ತ್ರೇತಾಯುಗದಿ [೧]
ಬಂಧುಬಳಗದಂತೆ ಆಪದ್ಭಾಂದವನಾಗಿ ಪಾರ್ಥನೀಗೆ
ಬಂದ ಬಂದ ದುರಿತಂಗಳ ಪರಿಹರಿಸೀ
ಅಂಧಕಾಜಾತರ ಕೊಂದು ನಂದಕಂದಾರ್ಪಣೆಂದಾ
ಗೋವಿಂದನಂಘ್ರಿಯುಗಳೇ ಸಾಕ್ಷಿ ದ್ವಾಪರ ಯುಗದಿ [೨]
ಗತಿಗೋತ್ರರಂತೆ ಸಾಧು ತತಿಗಳಿಗೆ ಗತಿಯನಿತ್ತು
ಮತಿಕೆಟ್ಟ ಇಪ್ಪತ್ತೊಂದು ಮತವ ಖಂಡಿಸಿ
ಗತಿಕೆಟ್ಟ ವೈಷ್ಣವರಿಗೆ ಸದ್ಗತಿ ತೋರಿದ ಪರಮಾಪ್ತ
ಗತಿ ಗುರುಪುರಂದರ ವಿಠಲನೆ ಸಾಕ್ಷಿ ಕಲಿಯುಗದಲ್ಲಿ [೩]
hanuma namma tAyi taMde
BIma namma baMdhu baLaga
AnaMda tIrthare namma gatigOtra raiyya |pa|
tAyitaMde hasuLegAgi sahAya mADi sAkuvaMte
AyAsavillade saMjIvanava taMde
GAyagoMDa kapigaLannu sAyadaMte poreda
raGurAmanaMgriyugaLE sAkShi trEtAyugadi [1]
baMdhubaLagadaMte ApadBAMdavanAgi pArthanIge
baMda baMda duritaMgaLa pariharisI
aMdhakAjAtara koMdu naMdakaMdArpaNeMdA
gOviMdanaMGriyugaLE sAkShi dvApara yugadi [2]
gatigOtraraMte sAdhu tatigaLige gatiyanittu
matikeTTa ippattoMdu matava KaMDisi
gatikeTTa vaiShNavarige sadgati tOrida paramApta
gati gurupuraMdara viThalane sAkShi kaliyugadalli [3]
Leave a Reply