Composer : Shri Kanakadasaru
ಎನ್ನ ಕಂದ ಹಳ್ಳಿಯ ಹನುಮ ||ಪ||
ಚೆನ್ನಾಗೈದಾರೆ ಲಕ್ಷ್ಮಣ ದೇವರು ||ಅ.ಪ||
ತುಪ್ಪ ಪಂಚಾಮೃತವಂದು ಅಡವಿ ಗಡ್ಡೆಗಳಿಂದು
ಕರ್ಪೂರ ವೀಳ್ಯವಂದು ಕುರುಕು ಇಂದು
ಸುಪ್ಪತ್ತಿಗೆ ಮಂಚವಂದು ಹುಲ್ಲು ಹಾಸಿಗೆಯಿಂದು
ಶ್ರೀಪತಿ ರಾಘವ ಕ್ಷೇಮದಲ್ಲೈದಾರೆ ||೧||
ನವ ವಸ್ತ್ರವಂದು ನಾರ ಸೀರೆಗಳಿಂದು
ಹೂವಿನ ಗಂಟು ಅಂದು ಜಡೆಗಳಿಂದು
ಜವ್ವಾದಿ ಕಸ್ತುರಿಯಂದು ಭಸಿತ ಧೂಳಿಂದು
ಶ್ರೀವರ ರಾಘವ ಕ್ಷೇಮದಲ್ಲೈದಾರೆ ||೨||
ಕನಕ ರಥಗಳಂದು ಕಾಲು ನಡಿಗೆಯಿಂದು
ಘನ ಛತ್ರ ಚಾಮರಂದು ಬಿಸಿಲು ಇಂದು
ಸನಕಾದಿ ಓಲೈಪ ಆದಿಕೇಶವ ನಮ್ಮ
ಹನುಮೇಶ ರಾಘವ ಕ್ಷೇಮದಲ್ಲೈದಾರೆ ||೩||
enna kaMda haLLiya hanuma ||pa||
cennAgaidAre lakShmaNa dEvaru ||a.pa||
tuppa paMcAmRutavaMdu aDavi gaDDegaLiMdu
karpUra vILyavaMdu kuruku iMdu
suppattige maMcavaMdu hullu hAsigeyiMdu
SrIpati rAghava kShEmadallaidAre ||1||
nava vastravaMdu nAra sIregaLiMdu
hUvina gaMTu aMdu jaDegaLiMdu
javvAdi kasturiyaMdu bhasita dhULiMdu
SrIvara rAghava kShEmadallaidAre ||2||
kanaka rathagaLaMdu kAlu naDigeyiMdu
ghana Catra cAmaraMdu bisilu iMdu
sanakAdi Olaipa AdikEshava namma
hanumEsha rAghava kShEmadallaidAre ||3||
Leave a Reply