Composer : Shri Jayesha vittala
ವೇದವೇದ್ಯ ವೆಂಕಟಾಚಲ ವಾಸ ಶ್ರೀಶ |
ಹೇದಯಾಬ್ಧಿ ದೀನವತ್ಸಲಾ || ಪ ||
ಸಾಧು ಭಕ್ತರಾ ದರಕ್ಕೆ ಕಾದು ಇರುವ ಕರುಣ ನಿಧಿಯೆ |
ವೇದವತಿಯಧವನೆ ನಿನ್ನ ಹಾದಿನೋಡುವೆ ಬಾರೋ ಬೊಮ್ಮಾ || ಅ ಪ ||
ಮೋಹನ ನಿನ್ನ ಮಂಗಳ ದರುಶನಾವಾಗಿ ಕಾಲ |
ಬಹಳವಾಯ್ತು ವಿಹಗಸೇಂಧನಾ ||
ಮಹಿತ ಮಹೋನ್ನತದ ಕೀರ್ತಿ ವಹಿಸಿದಂತೆ ವಿಧಿಯ ತಾತ |
ಮಹಾನುಭಾವ ಅಮಿತ ಮಮತೆ ದೋಹನ ಮಾಡಿ ದರ್ಶನ ನೀಡೋ || ೧ ||
ಮಂಗಳಾತ್ಮ ತಿಂಗಳಾನನಾ ತಿರುಮಲೇಶ |
ತುಂಗ ನಿನ್ನ ಸಂಗ ದರುಶನಾ ||
ಕಂಗಳೀಗೆ ಕೊಟ್ಟು ಪಾದ ಭೃಂಗನೆನಿಸು ಭಕ್ತ ಬಂಧು |
ಹೀಂಗೆ ಕಾಲ ಕಳೆಯೆಲಾರೆ ರಂಗ ಕೃಪಾಪಾಂಗ ಬಾರೋ || ೨ ||
ತಾಳ ತಂಬೂರಿ ದಾಸರಾದರಾ ಮ್ಯಾಳವನ್ನು |
ಮೌಳಿ ತೂಗುತ ಕೇಳ್ವ ಶ್ರೀಧರಾ ||
ಆಳುಗಳನು ಪಾಲಿಸಾಲು ಪಾಲುಗಡಲ ಮನೆಯಬಿಟ್ಟು |
ಶೈಲ ಸೇರಿದಂಥ ಕರುಣಾಲವಾಲ ಬೇಗ ಒಲಿಯೋ || ೩ ||
ಅಜನ ಕರಾಕಂಜ ಪೂಜಿತಾ ಪಾದಕಂಜ |
ಭಜನೆ ಮಾಳ್ಪ ಒದಗೋ ಸಾಂಪ್ರತಾ ||
ವಿಜಯದಾಸರಿಂದ ಅಮಿತ ಭಜನೆಗೊಂಡ ದೇವ ಅವರ |
ಭಜಕರಂಘ್ರಿ ರಜವ ಭಜಿಪ ದ್ವಿಜನು ನಾನು ದೇವ ಧೇನು || ೪ ||
ಸ್ವಾಮಿ ಪುಷ್ಕರ ತೀರ ಮಂದಿರಾ ಎನ್ನ ಹೃದಯ |
ಧಾಮಕ್ಕೊದಗೋ ಶ್ಯಾಮಸುಂದರಾ ||
ರಾಮನಾಮ ರತೀಪ್ರಿಯ ವ್ಯೋಮಕೇಶ ವಂದ್ಯ ಇಭ |
ರಾಮಪುರೀಶ ಹೃದಯವಾಸ ಸ್ವಾಮಿ ಜಯೇಶವಿಠ್ಠಲನೋಳ್ಪೆ || ೫ ||
vEdavEdya veMkaTAchala vAsa SrISa |
hEdayAbdhi dInavatsalA || pa ||
sAdhu BaktarA darakke kAdu iruva karuNa nidhiye |
vEdavatiyadhavane ninna hAdinODuve bArO bommA || a pa ||
mOhana ninna maMgaLa daruSanAvAgi kAla |
bahaLavAytu vihagasEMdhanA ||
mahita mahOnnatada kIrti vahisidaMte vidhiya tAta |
mahAnuBAva amita mamate dOhana mADi darSana nIDO || 1 ||
maMgaLAtma tiMgaLAnanA tirumalESa |
tuMga ninna saMga daruSanA ||
kaMgaLIge koTTu pAda BRuMganenisu Bakta baMdhu |
hIMge kAla kaLeyelAre raMga kRupApAMga bArO || 2 ||
tALa taMbUri dAsarAdarA myALavannu |
mauLi tUguta kELva SrIdharA ||
ALugaLanu pAlisAlu pAlugaDala maneyabiTTu |
Saila sEridaMtha karuNAlavAla bEga oliyO || 3 ||
ajana karAkaMja pUjitA pAdakaMja |
Bajane mALpa odagO sAMpratA ||
vijayadAsariMda amita BajanegoMDa dEva avara |
BajakaraMGri rajava Bajipa dvijanu nAnu dEva dhEnu || 4 ||
svAmi puShkara tIra maMdirA enna hRudaya |
dhAmakkodagO SyAmasuMdarA ||
rAmanAma ratIpriya vyOmakESa vaMdya iBa |
rAmapurISa hRudayavAsa svAmi jayESaviThThalanOLpe || 5 ||
Leave a Reply