Composer : Shri Jayesha vittala
ಜೀವಕರ್ತೃತ್ವದಾ ಭ್ರಾಂತಿ ಬಿಡಿಸೋ |
ಜೀವೇಶನೊಡೆಯ ಶ್ರೀವೇಣುಗೋಪಾಲ ಹರಿ |ಅ.ಪ|
ಮಿಥ್ಯವೆಂಬುದು ಬಲ್ಲೆ ಕರ್ತೃತ್ವ ನಮಗಿಲ್ಲ |
ಪ್ರತ್ಯಕ್ಷಕಪವಾದದಲ್ಲಿ ಬಾಳ್ವೇ |
ವ್ಯರ್ಥ ಧಾವಂತಿ ಪಡುವೆ ಸರ್ವಕರ್ತನ ಮರೆದು |
ಎತ್ತನಕೆ ವಶವಿಲ್ಲ ಮಿಥ್ಯ ಭಾವವು ಬಿಡಲು |೧|
ವಿಷಯ ವಿಷವದು ಬಲ್ಲೆ ತಲ್ಲೋಭ ಬಿಡಲರಿಯೆ |
ವಿಷಮಗತಿ ಪ್ರವಹದಲಿ ಅವಶನಾಗಿ |
ಪುಶಿ ನಂಬಿ ತೆರಳುತಿಹೆ ಹರುಷ ಕಾಣದೆ ನಿಜದಿ |
ಕೃಶನಾದೆ ಹರಿಯೆನ್ನ ಕೈಪಿಡಿದು ಉದ್ಧರಿಸೋ |೨|
ಗುಣವಿಲ್ಲ ದೋಷಿಲ್ಲದೆಡೆಯಿಲ್ಲ ಎನ್ನಲ್ಲಿ |
ದನುಜಾರಿ ನಿನ್ನವರ ಕರುಣ ಉಂಟೋ |
ಪ್ರಣತಾರ್ಥಿಹರ ಶ್ರೀಜಯೇಶವಿಠ್ಠಲನಲ್ಲಿ |
ಮನವಿತ್ತು ಅದು ನೋಡಿ ಸುಮ್ಮಗೊಲಿ ಶೃತಿವಿನುತ |೩|
jIvakartRutvadA bhrAMti biDisO |
jIvEshanoDeya shrIvENugOpAla hari |a.pa|
mithyaveMbudu balle kartRutva namagilla |
pratyakShakapavAdadalli bALvE |
vyartha dhAvaMti paDuve sarvakartana maredu |
ettanake vashavilla mithya bhAvavu biDalu |1|
viShaya viShavadu balle tallObha biDalariye |
viShamagati pravahadali avashanAgi |
pushi naMbi teraLutihe haruSha kANade nijadi |
kRushanAde hariyenna kaipiDidu uddharisO |2|
guNavilla dOShilladeDeyilla ennalli |
danujAri ninnavara karuNa uMTO |
praNatArthihara shrIjayEshaviThThalanalli |
manavittu adu nODi summagoli shRutivinuta |3|
Leave a Reply