Composer : Shri Jayesha vittala
Shri Ibharamapura appavaru
Period – 1789-1869
Janma nama – Ibharamapura Krishnacharyaru
Upadesha Gurugalu – Rayaru (Svapna)
Place – Ibharamapura near Mantralaya
Punya Tithi – Shravana Shudda Triteeya
hanumantaarchakam soumyam raaGavEndrO gurO: priyam |
appEti naamnaa viKyaatam kRuShNaachaarya gurum bhajE |
ಜಯ ಜಯತು ಕೃಷ್ಣಾರ್ಯ | ಜಯ ಜಯತು ಸಜ್ಜನ ಅಭಯ |
ಜಯತು ಕೈವಲ್ಯದನೆ ಜಯತು ಗುರುವೆ || ಪ ||
|| ಜಯತು ಜಯತು ||
ರವಿಯಂತೆ ಜಗದೊಳಗೆ ಉದ್ಭವಿಸಿ ಸುಜನಕ್ಕೆ |
ಕವಿದ ಕತ್ತಲೆ ಕಳೆದು ಪವನಮತ ತೋರಿ ||
ವಿವಿಧ ವೈಭವದಿಂದ ಅವನಿಯೊಳು ಸಂಚರಿಸಿ |
ಭವ ಬಿಡಿಸಿ ಪಾಲಿಸಿದೆ ತವ ಜನರ ಪ್ರಭುವೇ || ೧ ||
ಆರ್ತರಿಗೆ ಪೀಯೂಷ ಅರ್ಥಿಯಿಂದಲಿ ಇತ್ತು |
ಧೂರ್ತರನು ಕೆಡಿಸಿದೆಯೊ ಕರ್ತ ಸರ್ವತ್ರ ||
ಪಾರ್ಥಸಾರಥಿ ಸುಗುಣಕೀರ್ತಿ ಭೂ ಪ್ರಭುವರನೆ |
ವ್ಯರ್ಥ ಇಹವೆಂದೆಮಗೆ ಸ್ವಾರ್ಥ ತೋರ್ದೆ || ೨ ||
ಭಾರತೀಶನ ಭಜನೆ ಬಹುಭಾಗ್ಯವೆಂದರುಹಿ |
ಆರಾಧಿಸುತ ಹರಿಯ ಪೊರೆದೆ ಎಮ್ಮಾ ||
ಕೀರುತಿ ಗಭೀರನೆ ಸುಚಾರುಚರಣಕೆ ನಮೋ |
ದೂರಿಡದೆ ಸೇರಿಸೋ ಭಾರಕರ್ತ || ೩ ||
ಅಡಗಿಸೀ ಕಲಿಯನ್ನು ನಡುಗಿಸುತ ದುರ್ಜನರ |
ಪೊಡವಿಯನು ಸಂಚರಿಸಿ ಸುಜನಕ್ಕೆ ||
ದೃಢ ಪಡಿಸಿ ಸನ್ಮತಿಯ ಒಡಲಲ್ಲಿ ಶ್ರೀಹರಿಯ |
ಒಡೆಯ ತೋರಿದಿ ಸ್ವಾತ್ಮ ಕರುಣಕಡಲಾ || ೪ ||
ಬಡವನಾನೊಬ್ಬ ಕಡುಮೂರ್ಖನಾಗಿಹೆನು |
ನಡುಗುತಿದೆ ಭವದಲ್ಲಿ ಮುಂದೋರದೆ ||
ದೃಢ ಭಕುತರಲಿ ಎನ್ನ ಬಿಡದೆ ಪಾಲಿಪೆಯೆಂದೆ |
ಮೃಡನೊಡೆಯ ಶ್ರೀಹರಿಯ ವೈಭವವ ತೋರಿ || ೫ ||
ಅಂದಿನಿಂದಲಿ ನಾನು ಮಂದಮತಿಯಲಿ ಅಲೆದು |
ನೊಂದ ಪರಿ ನೀಬಲ್ಲಿ ಆರ್ತಹರನೇ ||
ಕುಂದುಗಳ ಅಳಿದು ಒಂದುಕ್ಷಣ ಅಗಲದಲೆ |
ಇಂದು ಮುಂದೆ ಒಳಹೊರಗೆ ಪೊಂದಿ ಪೊರೆಯೋ || ೬ ||
ಇನ್ನು ಮುಂದಾದರೂ ನಿನ್ನವರ ಒಳಗಿಟ್ಟು |
ಧನ್ಯನಾ ಮಾಡೆನ್ನ ಪುಣ್ಯಮೂರ್ತೇ ||
ಎನ್ನ ಗುರುಗಳ ದೈವ ನಿನ್ನ ಬಿಟ್ಟಿರಲಾರೆ |
ಅನ್ಯಥಾ ಇಡಬೇಡ ನೋಡೊ ಎನ್ನ || ೭ ||
ತನುವು ಭಾರವು ಎನಗೆ ಮನಕೊಂದು ಬೇಕಿಲ್ಲ |
ದಿನದಿನದ ವೃತ್ತಿಗಳು ನಿನ್ನ ಆಜ್ಞಾ ||
ಕನಸಿಲಾದರು ಒಮ್ಮೆ ಅನ್ನನಾ ಕಾಣದಿರೆ |
ಪೂರ್ಣಕಾರುಣ್ಯ ಮಾಡೆನ್ನ ತಂದೆ || ೮ ||
ಹೃದಯ ಶುದ್ಧಿಯ ಮಾಡು ಮದನ ಜನಕನ ಬೀಡು |
ಸದಯ ಮನ ಬದಿಗೈದು ಭಕ್ತಿ ಪ್ರವಹದಿ ||
ಮುದದಿ ಮಜ್ಜನಗೈಸಿ ಜಯೇಶ ವಿಠ್ಠಲನ |
ಬದಿಯಲ್ಲಿ ನಿಲಿಸೆನ್ನ ಒಡನಿದ್ದು ನೀನು || ೯ ||
jaya jayatu kRuShNArya | jaya jayatu sajjana aBaya |
jayatu kaivalyadane jayatu guruve || pa ||
|| jayatu jayatu ||
raviyaMte jagadoLage udBavisi sujanakke |
kavida kattale kaLedu pavanamata tOri ||
vividha vaiBavadiMda avaniyoLu saMcarisi |
Bava biDisi pAliside tava janara praBuvE || 1 ||
Artarige pIyUSha arthiyiMdali ittu |
dhUrtaranu keDisideyo karta sarvatra ||
pArthasArathi suguNakIrti BU praBuvarane |
vyartha ihaveMdemage svArtha tOrde || 2 ||
BAratISana Bajane bahuBAgyaveMdaruhi |
ArAdhisuta hariya porede emmA ||
kIruti gaBIrane sucArucaraNake namO |
dUriDade sErisO BArakarta || 3 ||
aDagisI kaliyannu naDugisuta durjanara |
poDaviyanu saMcarisi sujanakke ||
dRuDha paDisi sanmatiya oDalalli SrIhariya |
oDeya tOridi svAtma karuNakaDalA || 4 ||
baDavanAnobba kaDumUrKanAgihenu |
naDugutide Bavadalli muMdOrade ||
dRuDha Bakutarali enna biDade pAlipeyeMde |
mRuDanoDeya SrIhariya vaiBavava tOri || 5 ||
aMdiniMdali nAnu maMdamatiyali aledu |
noMda pari nIballi ArtaharanE ||
kuMdugaLa aLidu oMdukShaNa agaladale |
iMdu muMde oLahorage poMdi poreyO || 6 ||
innu muMdAdarU ninnavara oLagiTTu |
dhanyanA mADenna puNyamUrtE ||
enna gurugaLa daiva ninna biTTiralAre |
anyathA iDabEDa nODo enna || 7 ||
tanuvu BAravu enage manakoMdu bEkilla |
dinadinada vRuttigaLu ninna Aj~jA ||
kanasilAdaru omme annanA kANadire |
pUrNakAruNya mADenna taMde || 8 ||
hRudaya Suddhiya mADu madana janakana bIDu |
sadaya mana badigaidu Bakti pravahadi ||
mudadi majjanagaisi jayESa viThThalana |
badiyalli nilisenna oDaniddu nInu || 9 ||
Leave a Reply