Hanuma bheema madhwamuniye

Composer : Shri Jayesha vittala

By Smt.Shubhalakshmi Rao

ಹನುಮಾ ಭೀಮಾ ಮಧ್ವ ಮುನಿಯೆ ಪ್ರಣತ ಪಾಲಕಾ | ಪ |
ಜನುಮಾ ಜನುಮಾದಲ್ಲಿ ಸಲಹೋ ಪ್ರಣಯ ಪೂರ್ವಕಾ | ಅ ಪ |

ಭಾರತೀಶಾ ಶೌರಿ ದಾಸ ನಿನ್ನ ಶ್ರೀಪಾದಾ |
ವಾರೀಜಾವೇ ಗತಿಯೋ ಎನಗೇ ಭೂರೀಪ್ರಮೋದಾ |
ಹಾರೈಸೂವೇ ಹರಿಯಾ ಸಾಕ್ಷಿ ನಿನ್ನ ಪ್ರಸಾದಾ |
ಬ್ಯಾರೇವಲ್ಲೆ ಬಯಲೂಬೇಡಾ ಧೀರ ಸುಭೋಧಾ | ೧ |

ವಾಸುದೇವ ದೋಷದೂರ ಈಶ ಸರ್ವೇಶಾ |
ಈ ಸಮಸ್ತ ಜಗಕೇ ಎಂದೂ ಸೂಸಿ ಉಲ್ಲಾಸಾ |
ರಾಶಿ ವೇದ ಸಮ್ಮತಿ ತೋರಿ ಮಾಸದರುಷಾ |
ದಾಸವರ್ಗಕ್ಕಿತ್ತು ಕರುಣಾ ರಾಶೀ ದೀನೇಶಾ | ೨ |

ಈಶ ಗರುಡಾ ಶೇಷಾದ್ಯಾರಾ ಈಶಾಗುರುವೇ |
ಆಸೆ ನಿನ್ನ ಕರುಣಾ ಕವಚ ಬಯಸೂವೇ ಪ್ರಭುವೇ |
ಶ್ರೀಶನಲ್ಲಿ ವಿಶೇಷಗುಣ ರಾಶಿ ತೋರುವೇ |
ಆ ಸೌಭಾಗ್ಯ ಮೀಸಲು ಮಾಡಿ ದಾಸರಿಗುಣಿಸೂವೇ | ೩ |

ಲಕ್ಷ್ಮಿಪುತ್ರ ಲಕ್ಷಣ ಪೂರ್ಣಾಧ್ಯಕ್ಷ ಹರಿ ದೀಕ್ಷಾ |
ರಕ್ಷಿಸೆನ್ನನು ರುಕ್ಮಿಣಿ ನಾಥನ ಇತ್ತು ಅಪರೋಕ್ಷಾ |
ಅಕ್ಷಿಗೆ ಗೋಚರನಾಗೋ ಸ್ವಾಮಿ ಮೋಕ್ಷದ ಸುರವೃಕ್ಷಾ |
ನಿಕ್ಷೇಪನು ನೀ ಸುಜ್ಞಾನಿಗೆಂದೂ ಉಪೇಕ್ಷಿಸದಿರುಭಿಕ್ಷಾ | ೪ |

ವೇದೋಕ್ತಾದ ಗುರುವೇ ಪೂರ್ಣಬೋಧಾ ಮುನಿರಾಯಾ |
ಬಾದರಾಯಣ ಜಯೇಶವಿಠ್ಠಲ ಪಾದಾ ಮಧುಕರಾ |
ಪ್ರಾದುರ್ಭಾವ ಮಾಡೋ ತವ ಪ್ರಸಾದ ಪ್ರಚುರ |
ಹೇ ದಯಾಬ್ಧಿ ಕರುಣ ನೀಡು ಭಕ್ತಿ ಸಾಗರಾ | ೫ |


hanumA BImA madhva muniye praNata pAlakA | pa |
janumA janumAdalli salahO praNaya pUrvakA | a pa |

BAratISA Sauri dAsa ninna SrIpAdA |
vArIjAvE gatiyO enagE BUrIpramOdA |
hAraisUvE hariyA sAkShi ninna prasAdA |
byArEvalle bayalUbEDA dhIra suBOdhA | 1 |

vAsudEva dOShadUra ISa sarvESA |
I samasta jagakE eMdU sUsi ullAsA |
rASi vEda sammati tOri mAsadaruShA |
dAsavargakkittu karuNA rASI dInESA | 2 |

ISa garuDA SEShAdyArA ISAguruvE |
Ase ninna karuNA kavaca bayasUvE praBuvE |
SrISanalli viSEShaguNa rASi tOruvE |
A sauBAgya mIsalu mADi dAsariguNisUvE | 3 |

lakShmiputra lakShaNa pUrNAdhyakSha hari dIkShA |
rakShisennanu rukmiNi nAthana ittu aparOkShA |
akShige gOcaranAgO svAmi mOkShada suravRukShA |
nikShEpanu nI suj~jAnigeMdU upEkShisadiruBikShA | 4 |

vEdOktAda guruvE pUrNabOdhA munirAyA |
bAdarAyaNa jayESaviThThala pAdA madhukarA |
prAdurBAva mADO tava prasAda pracura |
hE dayAbdhi karuNa nIDu Bakti sAgarA | 5 |

Leave a Reply

Your email address will not be published. Required fields are marked *

You might also like

error: Content is protected !!