Composer : Shri Jayesha vittala
ಎಲ್ಲಿ ಇರುವೆಯೋ ಗೊಲ್ಲಶ್ರೇಷ್ಟನೇ |
ನಿಲ್ಲಲಾಗದೋ ನಿನ್ನ ಕಾಣದೇ | ಪ |
ಹುಲ್ಲು ಭೋಗವಾ ಒಲ್ಲೆ ಒಲ್ಲೆನೋ |
ಸೊಲ್ಲು ಪಾಲಿಸು ಮಲ್ಲಮರ್ಧನಾ | ೧ |
ತಂದೆ ತಾಯಿ ನೀ ಬಂಧು ಬಳಗನೋ |
ಬಂಧ ನಾಶನಾ ಇಂದಿರಾಪತಿ | ೨ |
ವಿದ್ಯೆ ಬುದ್ಧಿಯೂ ಹೃದ್ಯ ಲಾಭವೂ |
ಚೈದ್ಯಸೂದನಾಭೇದ್ಯ ನೀನೆಲೋ | ೩ |
ಧಾಮ ಸತಿಸುತ ಆಲಾಮ ಸುಖಗಳು |
ಸ್ವಾಮಿ ನೀಸೆಯೋ ಕಾಮಧೇನುವೇ | ೪ |
ಶ್ಯಾಮಸುಂದರಾ ಶಂಕರಾರ್ಚಿತಾ |
ಶ್ರೀಮನೋಹರಾ ಸೋಮವಕ್ತ್ರನೇ | ೫ |
ಮೋಸ ಬ್ಯಾಡವೋ ಕ್ಲೇಶ ಪಟ್ಟೆನೋ |
ಭಾಷೆ ಕಾರನೇ ತೋಷಿಸೆನ್ನನೋ | ೬ |
ದಾಸವರ್ಯರಾ ಆವಾಸ ನೆನಿಸಿದಾ |
ವಾಸುದೇವನೇ ವಿಶ್ವ ವ್ಯಾಪಕಾ | ೭ |
ನಿನ್ನ ಕಾಣದೇ ಖಿನ್ನನಾಗಿಹೇ |
ಕಣ್ಣುಗಾಣದಾ ಕುರುಡನಂದದಿ | ೮ |
ಭಕ್ತಿ ಇಲ್ಲವೋ ಶಕ್ತಿ ಇಲ್ಲವೋ |
ಉಕ್ತಿ ನಂಬಿಹೇ ಕೀರ್ತಿಪೂರ್ಣನೇ | ೯ |
ಲೋಕ ಮಂಗಳಾ ದಿವ್ಯ ಕಂಗಳಾ |
ಕೊಟ್ಟು ಕರುಣಿಸು ನಿನ್ನ ನೋಡಲು | ೧೦ |
ಗೋಕುಲಾಧಿಪಾ ಯಾಕೆ ನಿಷ್ಕೃಪಾ |
ಅಭಯ ನೀಡಿದಾ ಜಯೇಶವಿಠ್ಠಲಾ| ೧೧ |
elli iruveyO gollaSrEShTanE |
nillalAgadO ninna kANadE | pa |
hullu BOgavA olle ollenO |
sollu pAlisu mallamardhanA | 1 |
taMde tAyi nI baMdhu baLaganO |
baMdha nASanA iMdirApati | 2 |
vidye buddhiyU hRudya lABavU |
caidyasUdanABEdya nInelO | 3 |
dhAma satisuta AlAma suKagaLu |
svAmi nIseyO kAmadhEnuvE | 4 |
SyAmasuMdarA SaMkarArcitA |
SrImanOharA sOmavaktranE | 5 |
mOsa byADavO klESa paTTenO |
BAShe kAranE tOShisennanO | 6 |
dAsavaryarA AvAsa nenisidA |
vAsudEvanE viSva vyApakA | 7 |
ninna kANadE KinnanAgihE |
kaNNugANadA kuruDanaMdadi | 8 |
Bakti illavO Sakti illavO |
ukti naMbihE kIrtipUrNanE | 9 |
lOka maMgaLA divya kaMgaLA |
koTTu karuNisu ninna nODalu | 10 |
gOkulAdhipA yAke niShkRupA |
aBaya nIDidA jayESaviThThalA| 11 |
Leave a Reply