Composer : Shri Jagannatha dasaru
ಬಾ ವೆಂಕಟ ಶೈಲಾಧಿಪ ಮನ್ಮನಕೆ
ತಡಮಾಡುವುದ್ಯಾಕೆ
ಶ್ರೀ ವಲ್ಲಭನಾ ನಿನ್ನಂಘ್ರಿ ಕಮಲಕೆ
ನಮಿಸುವೆ ಪ್ರತಿ ಕ್ಷಣಕೆ [ಪ]
ನೀ ಒಲಿದೆನ್ನ ದಯಾವಲೋಕನದಿ
ಪಾವನಮಾಡಲು ದೇವವರೇಣ್ಯ [ಅ.ಪ.]
ವೈಕುಂಠಾಧೀಶ ವಿಗತಕ್ಲೇಶ
ಚಿತ್ಸುಖಮಯವಪುಷ
ಆಕಾಶವತ್ ಸರ್ವತ್ರಾವಕಾಶ ಶ್ರೀ ವೆಂಕಟೇಶ
ಶ್ರೀ ಕಮಲಜ ಭವ ಪಾಕಹ ಮದನ ದಿ
ವಾಕರ ಪ್ರಮುಖ ದಿವೌಕಸ ವರದ [೧]
ದಯದಿಂದ ನೋಡೊ ದೀನೋದ್ಧಾರ ಸದ್ಗುಣ ಗಂಭೀರಾ
ಪ್ರಿಯ ನೀನೇ ಎನಗೆ ಲೋಕೋದ್ಧಾರ ಸೌಂದರ್ಯ ಸಾರಾ
ಹಯಮುಖ ಲೋಕತ್ರಯೀ ಪತ್ರಯೀಮಯಿ
ನಿಗಮಗಮ್ಯ ನಾ ಬಯಸುವೆ ನಿನ್ನ [೨]
ದಾತಾ ನೀನಲ್ಲದೆ ಅನ್ಯರನರಿಯೇ ಕಂಡವರನು ಕರಿಯೇ
ಪ್ರೀತ ನೀನಾಗೆನ್ನೊಳು ಶ್ರೀ ಹರಿಯೇ ಮೂರ್ಲೋಕದ ದೊರೆಯೇ
ಶ್ರೀ ತರುಣಿಯಗೂಡೀ ತನು ಸದನಕೆ ನೀ ತ್ವ
ರಿತದಿ ಬಾರೊ ಜಗನ್ನಾಥ ವಿಠ್ಠಲ [೩]
bA veMkaTa SailAdhipa manmanake
taDamADuvudyAke
SrI vallaBanA ninnaMGri kamalake
namisuve prati kShaNake [pa]
nI olidenna dayAvalOkanadi
pAvanamADalu dEvavarENya [a.pa.]
vaikuMThAdhISa vigataklESa
citsuKamayavapuSha
AkASavat sarvatrAvakASa SrI veMkaTESa
SrI kamalaja Bava pAkaha madana di
vAkara pramuKa divaukasa varada [1]
dayadiMda nODo dInOddhAra sadguNa gaMBIrA
priya nInE enage lOkOddhAra sauMdarya sArA
hayamuKa lOkatrayI patrayImayi
nigamagamya nA bayasuve ninna [2]
dAtA nInallade anyaranariyE kaMDavaranu kariyE
prIta neenAgennoLu SrI hariyE mUrlOkada doreyE
SrI taruNiyagooDI tanu sadanake nI tva
ritadi baaro jagannAtha viThThala [3]
Leave a Reply