Composer : Shri Gurugovinda dasaru
ವೇದವ್ಯಾಸಾ ಶ್ರೀ ಹರೇ | ನಿನ್ನ ಶ್ರೀಪಾದ ಉದಕೇಜ – ತೋರಿಸೋ [ಪ]
ವೇದೋದ್ಧರಣ ಪ್ರಭೇದ ರಚನ –
ವಿವಾದ ಹರಣ ಪ್ರಬೋಧ ಮುದ್ರಾಂಕನ [ಅ.ಪ.]
ಹೇಮಲೋಚನ ಕಾಲ | ಸಕಲ ಸದ್ಗುಣಧಾಮ –
ಶ್ರೀ ಭೂಮಿ ದುರ್ಗೆ ಲೋಲ ||
ಧೃತ – ಕಾಮ ಜನಕ ನಿಸ್ಸೀಮ ಮಹಿಮ –
ತ್ರಿಧಾಮದಲಿ ಭಕ್ತಸ್ತೋಮ ವಿರಿಸಿದೆ –
ಶ್ರೀರಾಮಾ – ಸುಧಾಮ – ರಿಪು ಭೀಮಾ |
ಸುರಸಾರ್ವಭೌಮ [೧]
ಆತ್ರಿಜ ದತ್ತಾತ್ರೇಯ | ಕೈಲಾಸ ವಾಸಮಿತ್ರ
ಸುಮನ ಮುಖಗೇಯ ||
ಧೃತ – ಅತ್ರಿ ಪ್ರಮುಖ ವಿಧಿ ಪುತ್ರಾನ್ವಿತ-
ಗೋತ್ರಾರಿ ಪ್ರಿಯ ಸತ್ಯಾವಲ್ಲಭಚಿತ್ರಾ –
ಸುವಿಚಿತ್ರಾ – ಸಮಗಾತ್ರಾ | ತೋರಿಸುತವಗಾತ್ರ [೨]
ಚಿನುಮಯಗುಣ ವಪುಷಾ | ಅನಂತ ಶೀರ್ಷಾ
ಅನಿಲ ಹೃದಯಾಂತರ್ಗತ ||
ಧೃತ – ಮನಸಿಜ ಪಿತ ಗುರುಗೋವಿಂದ ವಿಠಲನೆ
ತನುಮನಧನವೆಲ್ಲ ನಿನದಾಗಿರುವುದೊ
ಮುನಿವಂದ್ಯಾ – ಮುಕುಂದ – ಗೋವಿಂದ |
ಕೊಡು ಎನಗಾನಂದ [೩]
vEdavyAsA SrI harE | ninna SrIpAda udakEja – tOrisO [pa]
vEdOddharaNa praBEda racana –
vivAda haraNa prabOdha mudrAMkana [a.pa.]
hEmalOcana kAla | sakala sadguNadhAma –
SrI BUmi durge lOla ||
dhRuta – kAma janaka nissIma mahima –
tridhAmadali BaktastOma viriside –
SrIrAmA – sudhAma – ripu BImA | surasArvaBauma [1]
Atrija dattAtrEya | kailAsa vAsamitra
sumana muKagEya ||
dhRuta – atri pramuKa vidhi putrAnvita-
gOtrAri priya satyAvallaBacitrA –
suvicitrA – samagAtrA | tOrisutavagAtra [2]
cinumayaguNa vapuShA | anaMta SIrShA
anila hRudayAMtargata ||
dhRuta – manasija pita gurugOviMda
viThalane tanumanadhanavella ninadAgiruvudo
munivaMdyA – mukuMda – gOviMda |
koDu enagAnaMda [3]
Leave a Reply