Swami narasimha

Composer : Shri Prasannavenkata dasaru

By Smt.Shubhalakshmi Rao

ಸ್ವಾಮಿ ನರಸಿಂಹ ಶರಣು ಶರಣು
ಶ್ರೀಮಹಾ ಅಹೋಬಲ ನಿಲಯ ದೇವ ಶರಣು [ಪ]

ಭವನಾಶಿನಿಯ ಕೂಲಭವನ ಭಟಪ್ರತಿಪಾಲ
ಭವಸಹಸ್ರಾಂಬಕರ ಭಯವಿದೂರ
ಭುವನಕದ್ಭುತ ಗಾತ್ರ ಭಜಕ ಜನತಾಪತ್ರ
ಭವಕರ್ದಮ ಶೋಷ ಬುಧರ ಪರಿತೋಷ [೧]

ಅಣುರೇಣು ತೃಣ ವ್ಯಾಪ್ತ ಅಖಿಳರೊಳು ನಿರ್ಲಿಪ್ತ
ದನುಜ ಹಿರಣ್ಯಕಹರ್ತ ದೀನನಾಥ
ಕನಕ ಜಠರನ ಜನಕ ಕರುಣಾಂಕ ಕ್ರೂರಮುಖ
ಪುನೀತ ಶುಭಚಾರಿತ್ರ ಪ್ರಹ್ಲಾದಮಿತ್ರ [೨]

ಪದುಮದೇವಿಯ ರಮಣ ಪ್ರದ್ವಿಷಾನ್ವಯದ ಮನ
ಮುದ ಶಾಂತ ಪರಿಪೂರ್ಣ ಮೂರ್ತಿ ಪುಣ್ಯ
ಪ್ರದನಾಮ ನವರೂಪ ಪತಂಗಾನಂತ ಪ್ರದೀಪ ನಿನ್ನ
ಪದವೆ ಗತಿ ಹೊರೆಯೆನ್ನ ಪ್ರಸನ್ವೆಂಕಟರನ್ನ [೩]


svAmi narasiMha SaraNu SaraNu
SrImahA ahObala nilaya dEva SaraNu [pa]

BavanASiniya kUlaBavana BaTapratipAla
BavasahasrAMbakara BayavidUra
BuvanakadButa gAtra Bajaka janatApatra
Bavakardama SOSha budhara paritOSha [1]

aNurENu tRuNa vyApta aKiLaroLu nirlipta
danuja hiraNyakaharta dInanAtha
kanaka jaTharana janaka karuNAMka krUramuKa
punIta SuBacAritra prahlAdamitra [2]

padumadEviya ramaNa pradviShAnvayada mana
muda SAMta paripUrNa mUrti puNya
pradanAma navarUpa pataMgAnaMta pradIpa ninna
padave gati horeyenna prasanveMkaTaranna [3]

Leave a Reply

Your email address will not be published. Required fields are marked *

You might also like

error: Content is protected !!