Composer : Shri Purandara dasaru
ಸಿಂಹರೂಪನಾದ ಶ್ರೀ ಹರೇ ಓ ನಾಮಗಿರೀಶನೇ ||ಪ||
ಒಮ್ಮನದಿಂದಲಿ ತನ್ನನು ಭಜಿಪರ
ಸಮ್ಮತಿಯಿಂದಲಿ ಕಾಯ್ವೆನೆಂದ ಹರಿ ||ಅ.ಪ||
ತರಳನು ಕರೆಯೆ ಸ್ಥಂಭವು ಬಿರಿಯೇ
ತುಂಬ ಉಗ್ರವ ತೋರಿದನು
ಕರುಳನು ಬಗೆದು ಕೊರಳೊಳಗಿಟ್ಟು
ತರಳನ ಸಲಹಿದ ಶ್ರೀ ನರಸಿಂಹನೆ |೧||
ಭಕ್ತರೆಲ್ಲ ಕೂಡಿ ಬಹು ಆಗಿ ಪಾಡಿ
ಪರಮ ಶಾಂತವನು ಬೇಡಿದರು
ಕರೆ ತಂದು ಸಿರಿಯ ತೊಡೆಯೊಳು ಕುಳಿಸಲು
ಪರಮ ಹರುಷವನು ಪೊಂದಿದ ಶ್ರೀ ಹರಿ ||೨||
ಜಯ ಜಯ ಜಯವೆಂದು ಹೂವನು ತಂದು
ಹರಿ ಹರಿ ಹರಿಯೆಂದು ಸುರರೆಲ್ಲ ಸ್ತುತಿಸೆ
ಭಯ ನಿವಾರಣ ಭಾಗ್ಯ ಸ್ವರೂಪನೇ
ಪರಮ ಪುರುಷ ಶ್ರೀ ಪುರಂದರ ವಿಟ್ಟಲನೆ ||೩||
siMharUpanAda SrI harE O nAmagirISanE ||pa||
ommanadiMdali tannanu Bajipara
sammatiyiMdali kAyveneMda hari ||a.pa||
taraLanu kareye sthaMBavu biriyE
tuMba ugrava tOridanu
karuLanu bagedu koraLoLagiTTu
taraLana salahida SrI narasiMhane |1||
Baktarella kUDi bahu Agi pADi
parama SAMtavanu bEDidaru
kare taMdu siriya toDeyoLu kuLisalu
parama haruShavanu poMdida SrI hari ||2||
jaya jaya jayaveMdu hUvanu taMdu
hari hari hariyeMdu surarella stutise
Baya nivAraNa BAgya svarUpanE
parama puruSha SrI puraMdara viTTalane ||3||
Leave a Reply