Shri Narasimha chitsukhamaya

Composer : Shri Jagannatha dasaru

By Smt.Shubhalakshmi Rao

ಶ್ರೀ ನಾರಸಿಂಹ ಚಿತ್ಸುಖಮಯ ಕಾಯ [ಪ]
ದಾನವಾರಣ್ಯಪಾವಕ ವೀತಶೋಕ [ಅ.ಪ.]

ಆನತೇಷ್ಟ ಪ್ರದಾಯಕ ನಮಿಸುವೆನು ಸದಾ
ಮೈನಾಕಿಧರ ಬಿಂಬ ಸುರಮುನಿಕದಂಬ
ಧ್ಯಾನಗಮ್ಯನೆ ಭಕ್ತರಾಪತ್ತು ಕಳೆ ಶಕ್ತಾ
ನೀನೆ ಗತಿಯೆಂಬೆ ಮುನಿಮನ ವನಜ ತುಂಬೆ [೧]

ಶ್ರವಣ ಮಂಗಳ ನಾಮಧೇಯ ನಿರ್ಜಿತಕಾಮ
ಸವನ ದ್ವಿತಿಯರೂಪ ವಿಗತಕೋಪ
ಸ್ವವಶ ಸ್ವಾತಂತ್ರ್ಯ ವಿಖನಸ ಪೂಜ್ಯ ವಜ್ರನಖ
ಪವಿ ದಂಷ್ಟ್ರದರ್ಶ ಭಾರ್ಗವಿ ರಮಣಗಶನಾ [೨]

ಆದಿದೇವಾನಂತ ಮಹಿಮನೇ ನಿಶ್ಚಿಂತಾ
ಕಾದುಕೋ ನಿನ್ನವರ ವಿಬುಧ ಪ್ರವರಾ
ಮೋದಮಯ ಶ್ರೀ ಜಗನ್ನಾಥವಿಠಲರೇಯ
ವೈದಿಕವ ನುಡಿಸು ಲೌಕಿಕ ಮಾರ್ಗವ ಬಿಡಿಸು [೩]


SrI nArasiMha citsuKamaya kAya [pa]
dAnavAraNyapAvaka vItaSOka [a.pa.]

AnatEShTa pradAyaka namisuvenu sadA
mainAkidhara biMba suramunikadaMba
dhyAnagamyane BaktarApattu kaLe SaktA
nIne gatiyeMbe munimana vanaja tuMbe [1]

SravaNa maMgaLa nAmadhEya nirjitakAma
savana dvitiyarUpa vigatakOpa
svavaSa svAtaMtrya viKanasa pUjya vajranaKa
pavi daMShTradarSa BArgavi ramaNagaSanA [2]

AdidEvAnaMta mahimanE niSciMtA
kAdukO ninnavara vibudha pravarA
mOdamaya SrI jagannAthaviThalarEya
vaidikava nuDisu laukika mArgava biDisu [3]

Leave a Reply

Your email address will not be published. Required fields are marked *

You might also like

error: Content is protected !!