Composer : Shri Harapanahalli bheemavva
ಸಾಕು ನರಹರಿ ಭವದ ಬವಣೆಯಿಂ
ದ್ಯಾಕೆ ಬಳಲಿಸುತಿರುವೆ ಹರಿ ಹರಿ |
ಶ್ರೀಕಮಲಾಪತಿ ಶರಣ ಜನರೊಳ-
ಗ್ಹಾಕಿ ಪೊರೆಯೆನ್ನ ಹರಿ ಹರಿ [ಪ]
ದೊರೆಯೆ ನೀನಿರಲನ್ಯರಿಗೆ ಬಾಯಿ
ತೆರೆಯಲ್ಯಾಕಿನ್ ಹರಿ ಹರಿ
ಪರಮಾಪ್ತ ನೀನಿರಲು ಕಾಣದೆ
ಪರರಿಗೆ ಆಲ್ಪರಿದೆ ಹರಿ ಹರಿ [೧]
ಪುತ್ಥಳಿ ಮನೆಯಲ್ಲಿರಲು
ಹಿತ್ತಾಳೆ ಬಯಸುವೆನು ಹರಿಹರಿ
ಬಿಟ್ಟು ನಿನ್ನೀಗನ್ಯ ವಿಷಯದಿಂದ್
ಹುಟ್ಟುವುದೆ ಸುಖ ಹರಿ ಹರಿ [೨]
ಬೇಡಿದ್ವರಗಳ್ ಕೊಡುವೊ ಭೀ-
ಮೇಶ ಕೃಷ್ಣ ನೀನಿರಲು ಹರಿಹರಿ
ನೋಡಿ ಸುಖಿಸದೆ ಬಿಟ್ಟು ಕನ್ನಡಿ
ಗೋಡೆಗಡರುವೆನ್ ಹರಿ ಹರಿ [೩]
sAku narahari Bavada bavaNeyiM
dyAke baLalisutiruve hari hari |
SrIkamalApati SaraNa janaroLa-
g~hAki poreyenna hari hari [pa]
doreye nIniralanyarige bAyi
tereyalyAkin hari hari
paramApta nIniralu kANade
pararige Alparide hari hari [1]
putthaLi maneyalliralu
hittALe bayasuvenu harihari
biTTu ninnIganya viShayadiMd
huTTuvude suKa hari hari [2]
bEDidvaragaL koDuvo BI-
mESa kRuShNa nIniralu harihari
nODi suKisade biTTu kannaDi
gODegaDaruven hari hari [3]
Leave a Reply