Composer : Shri Jagannatha dasaru
ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ |ಪ|
ಪ್ರಣತಕಾಮದನೆ ಪ್ರಾರ್ಥಿಸುವೆ ಪ್ರಭುವೆಂದು |ಅ.ಪ|
ಸಕಲ ಜೀವ ಜಡಾತ್ಮಕ ಜಗತ್ತಿನೊಳಗಿದ್ದು
ಅಕಳಂಕ ನಾಮರೂಪದಲಿ ಕರೆಸಿ
ಪ್ರಕಟನಾಗದಲೆ ಮಾಡಿಸಿ ಸರ್ವ ವ್ಯಾಪಾರ
ಸುಖ ದುಃಖಗಳಿಗೆ ಗುರಿಮಾಡಿ ಎಮ್ಮನು ನೋಳ್ಪೆ (೧)
ಏನೆಂಬೆ ನಿನ್ನ ಮಹಿಮೆಗೆ ರಮಾಪತಿ ನಿನ್ನ
ಅಧೀನರಲ್ಲವೆ ತತ್ವಮಾನಿ ಸುರರು
ದಾನವಾಂತಕನೆ ವಿಜ್ಞಾಪನೆಯ ಕೈಗೊಂಡು
ದೀನರುದ್ಧರಿಸುವುದು ದಯದಿಂದ ನಿರುತಾ (೨)
ಬುಧ್ಯಾದಿ ಇಂದ್ರಿಯಗಳೊಳಗೆ ತತ್ಪತಿಗಳೊಳ
ಗಿದ್ದು ಬಹುವಿಧ ಚೇಷ್ಟೆಗಳನೆ ಮಾಳ್ಪೆ
ಬದ್ಧರನ ಮಾಳ್ಪೆ ಭವದೊಳಗೆ ಜೀವರನು ಅನಿ
ರುದ್ಧನೆಂದೆನಿಸಿ ಸರ್ವರೊಳು ವ್ಯಾಪಕನಾಗಿ (೩)
ದಾಶರಥಿ ನೀನೆ ಗತಿಯೆಂದು ಮೊರೆಹೊಕ್ಕೆನೊ
ವಿಭೀಷಣಗೆ ಲಂಕಾಧಿಪತ್ಯವಿತ್ತೇ
ವಾಸವಾನುಜ ಜಗನ್ನಾಥ ವಿಠ್ಠಲ ಭಕ್ತ
ಪೋಷಕನು ನೀನಹುದು ಕಲ್ಪ ಕಲ್ಪಗಳಲ್ಲಿ (೫)
praNava pratipAdya prahlAdavaradA |pa|
praNatakAmadane prArthisuve praBuveMdu |a.pa|
sakala jIva jaDAtmaka jagattinoLagiddu
akaLaMka nAmarUpadali karesi
prakaTanAgadale mADisi sarva vyApAra
suKa duHKagaLige gurimADi emmanu nOLpe (1)
EneMbe ninna mahimege ramApati ninna
adhInarallave tatvamAni suraru
dAnavAMtakane vij~jApaneya kaigoMDu
dInaruddharisuvudu dayadiMda nirutA (2)
budhyAdi iMdriyagaLoLage tatpatigaLoLa
giddu bahuvidha cEShTegaLane mALpe
baddharana mALpe BavadoLage jIvaranu ani
ruddhaneMdenisi sarvaroLu vyApakanAgi (3)
dASarathi nIne gatiyeMdu morehokkeno
viBIShaNage laMkAdhipatyavittE
vAsavAnuja jagannAtha viThThala Bakta
pOShakanu nInahudu kalpa kalpagaLalli (5)
Leave a Reply