Composer : Shri Purandara dasaru
ನಾರಸಿಂಹನೆಂಬೊ ದೇವನು |
ನಂಬಿದಂಥ ನರರಿಗೆಲ್ಲ ವರವ ಕೊಡುವನು |ಪ|
ಆದಿಯಲ್ಲಿ ಲಕ್ಷ್ಮೀಸಹಿತದಿ | ಮಲಗಿರಲು
ಬಂದರಲ್ಲಿ ಸನತ್ಕುಮಾರರು |
ಆಗ ದ್ವಾರಪಾಲಕರು ತಡೆಯಲಾಗ ಕೋಪದಿಂದ
ಮೂರು ಜನ್ಮದಲ್ಲಿ ಅಸುರರಾಗಿ ಪುಟ್ಟಿರೆಂದರು | ೧ |
ದಿತೀಯ ಗರ್ಭದಲ್ಲಿ ಜನಿಸಿದ | ಹಿರಣ್ಯಾಕ್ಷ
ಹಿರಣ್ಯಕಶಿಪುರೆಂಬ ಭ್ರಾತ್ರರು |
ಪೃಥ್ವಿಯನ್ನು ಮುಳುಗಿಸಿದ ಕಾರಣದಿ ಶ್ರೀಹರಿಯು
ತೃತೀಯ ರೂಪದಿಂದ ಖಳನ ಕೊಂದು ಧರೆಯನುಳಿಸಿದನು | ೨ |
ಅನುಜನಾದ ಹಿರಣ್ಯಾಕ್ಷನ | ಮರಣವನ್ನು
ಕೇಳಿ ನಡೆದ ತಪಸ್ಸಿಗೆ |
ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿ
ಬ್ರಹ್ಮನಿಂದ ವರಗಳನ್ನು ಪಡೆದುಕೊಂಡು ಬಂದನಾಗ | ೩ |
ಇಂದ್ರಲೋಕ ಸೂರೆ ಮಾಡಿದ | ಅಸುರ ತಾನು ಮೂರು
ಲೋಕಕ್ಕೆ ಭಯವ ತೋರಿದ |
ಗರ್ಭಿಣಿ ಕಯಾದುವನ್ನು ಬ್ರಹ್ಮಪುತ್ರ ಬಂದು ಆಗ
ದೈತ್ಯನಾದ ಹಿರಣ್ಯಕಶಿಪುವಿಗೆ ಒಪ್ಪಿಸಿದನು | ೪ |
ನವಮಾಸ ತುಂಬಲು | ಕಯಾದು ಆಗ
ಪುತ್ರರತ್ನವನ್ನು ಪಡೆದಳು |
ನಾಮಕರಣವನ್ನು ಮಾಡಿ ವಿಪ್ರರನ್ನು ಕರೆಸಿ ಬೇಗ
ದೈತ್ಯ ತನ್ನ ಸುತಗೆ ಪ್ರಹ್ಲಾದನೆಂದು ಕರೆಸಿದನು | ೫ |
ಬಾಲ ಚಂದ್ರನಂತೆ ಹೊಳೆಯುತಾ | ಇರುತಿರಲು
ಐದು ವರ್ಷ ತುಂಬಿದಾಗಲೆ |
ಗುರುಗಳನ್ನು ಕರೆಸಿ ಬೇಗ ಸಕಲವಿದ್ಯೆ ಕಲಿಸಿರೆಂದು
ಗುರುಗಳಿಗೆ ಮಗನನ್ನು ಒಪ್ಪಿಸಿದ ದೈತ್ಯ ತಾನು | ೬ |
ಓಂ ನಮಃ ಶಿವಾಯ ಎನುತಲಿ | ಅಸುರ ತನ್ನ
ಸುತನ ಬರೆದು ತೋರು ಎಂದಾಗ
ನರಹರಿಯ ನಾಮವನ್ನು ನಗುನಗುತಲೆ ಬರೆಯುತಿರಲು
ಎಡತೊಡೆಯ ಮೇಲಿದ್ದ ಶಿಶುವ ಧರೆಗೆ ನೂಕಿದನು | ೭ |
ಸುತ್ತ ಜನರ ಕರೆಸಿ ಬೇಗದಿ |ಅಸುರ ತನ್ನ
ಸುತನ ಕೊಲ್ಲಿಸಬೇಕು ಎಂದಾಗ |
ಅಟ್ಟ ಅಡವಿಯೊಳು ವಿಷವನಿಟ್ಟು ಭೋಜನಂಗಳ ಮಾಡಿ
ಹರಿಯ ಸ್ಮರಣೆ ಮಾಡುತಲೆ ಭುಂಜಿಸಿದ ಝಟ್ಟಿಹಾಂಗೆ | ೮ |
ಅಂಬುಧಿಯೊಳು ಮಗನ ಮಲಗಿಸಿ |
ಮೇಲೆ ದೊಡ್ಡ ಬೆಟ್ಟವನ್ನು ಇಟ್ಟು ಬನ್ನಿರೋ |
ಹರಿಯ ಕೃಪೆಗೆ ವಶನಾದ ತರಳನೆಂದು ವರುಣದೇವ
ಮರಣ ಇಲ್ಲದ್ಹಾಂಗೆ ಮಾಡಿ ಮನೆಗೆ ಕಳುಹಿ ಕೊಟ್ಟಾನಾಗ | ೯ |
ಬೆಟ್ಟದಿಂದ ಕಟ್ಟಿ ಉರುಳಿಸಿ | ಅಸುರ ತನ್ನ
ಪಟ್ಟದಾನೆ ಇಂದ ತುಳಿಸಿ |
ಹುಲಿಯ ಬೋನಿನಲ್ಲಿ ಇಟ್ಟು ಹರಿವ ವೊಲೆಯ ಮಾಡಿ ಸುಟ್ಟು
ಯತ್ನವಿಲ್ಲದೆ ಸುತನ ಕೊಲ್ಲಲ್ಲು ಶಕ್ತನಲ್ಲದೆ ಪೋದ |೧೦ |
ನಿನ್ನ ದೇವ ಇದ್ದ ಎಡೆಯನು | ತೋರು ಎಂದು
ಪಿತನು ತನ್ನ ಸುತನ ಕೋರಲು |
ಎನ್ನ ದೇವ ಇಲ್ಲದಂಥ ಎಡೆಗಳುಂಟೆ ಲೋಕದಲ್ಲಿ
ಕಂಬದಲ್ಲೂ ಇರುವನೆಂದು ಕೈಯ ಮುಗಿದು ತೋರ್ದನಾಗ | ೧೧ |
ವರಕಂಬವನ್ನು ಒದೆಯಲು ನರಹರಿಯು
ಉಗ್ರ ರೂಪವನ್ನು ತಾಳಿ |
ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದ ಪಿಡಿದು ಒತ್ತಿ
ಕರುಳ ಬಗೆದು ಮಾಲೆ ಹಾಕಿ ಕಂದ ಭಕ್ತನಪ್ಪಿಕೊಂಡ | ೧೨ |
ಅಂತರಿಕ್ಷದಲ್ಲಿ ಅಮರರು | ನೋಡಿ ಆಗ
ಪುಷ್ಪ ವೃಷ್ಟಿಯನ್ನೆ ಕರೆದರು |
ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತಿರಲು
ಅಮರಪತಿಯರೆಲ್ಲರು ನೋಡಿ ಅಂಜ ಬೇಡೆಂದಭಯವಿತ್ತ | ೧೩ |
ಲಕ್ಷ್ಮೀನಾರಸಿಂಹನ ಚರಿತೆಯ | ಉದಯಕಾಲ
ಪಠಿಸುವಂತ ನರರಿಗೆಲ್ಲ |
ಪುತ್ರಸಂತಾನಂಗಳಿತ್ತು ಮತ್ತೆ ಬೇಡಿದ್ಹಾಂಗ ಕೊಟ್ಟು
ಭಕ್ತವತ್ಸಲ ಮುಕ್ತಿಕೊಡುವ ಪುರಂದರವಿಠಲ ರಾಯ | ೧೪ |
nArasiMhaneMbo dEvanu |
naMbidaMtha nararigella varava koDuvanu |pa|
Adiyalli lakShmIsahitadi | malagiralu
baMdaralli sanatkumAraru |
Aga dvArapAlakaru taDeyalAga kOpadiMda
mUru janmadalli asurarAgi puTTireMdaru | 1 |
ditIya garBadalli janisida | hiraNyAkSha
hiraNyakaSipureMba BrAtraru |
pRuthviyannu muLugisida kAraNadi SrIhariyu
tRutIya rUpadiMda KaLana koMdu dhareyanuLisidanu | 2 |
anujanAda hiraNyAkShana | maraNavannu
kELi naDeda tapassige |
hariya mEle siTTiniMda ugratapassannu mADi
brahmaniMda varagaLannu paDedukoMDu baMdanAga | 3 |
iMdralOka sUre mADida | asura tAnu mUru
lOkakke Bayava tOrida |
garBiNi kayAduvannu brahmaputra baMdu Aga
daityanAda hiraNyakaSipuvige oppisidanu | 4 |
navamAsa tuMbalu | kayAdu Aga
putraratnavannu paDedaLu |
nAmakaraNavannu mADi viprarannu karesi bEga
daitya tanna sutage prahlAdaneMdu karesidanu | 5 |
bAla caMdranaMte hoLeyutA | irutiralu
aidu varSha tuMbidAgale |
gurugaLannu karesi bEga sakalavidye kalisireMdu
gurugaLige maganannu oppisida daitya tAnu | 6 |
OM namaH SivAya enutali | asura tanna
sutana baredu tOru eMdAga
narahariya nAmavannu nagunagutale bareyutiralu
eDatoDeya mElidda SiSuva dharege nUkidanu | 7 |
sutta janara karesi bEgadi |asura tanna
sutana kollisabEku eMdAga |
aTTa aDaviyoLu viShavaniTTu BOjanaMgaLa mADi
hariya smaraNe mADutale bhuMjisida jhaTTihAMge | 8 |
aMbudhiyoLu magana malagisi |
mEle doDDa beTTavannu iTTu bannirO |
hariya kRupege vaSanAda taraLaneMdu varuNadEva
maraNa illad~hAMge mADi manege kaLuhi koTTAnAga | 9 |
beTTadiMda kaTTi uruLisi | asura tanna
paTTadAne iMda tuLisi |
huliya bOninalli iTTu hariva voleya mADi suTTu
yatnavillade sutana kollallu Saktanallade pOda |10 |
ninna dEva idda eDeyanu | tOru eMdu
pitanu tanna sutana kOralu |
enna dEva illadaMtha eDegaLuMTe lOkadalli
kaMbadallU iruvaneMdu kaiya mugidu tOrdanAga | 11 |
varakaMbavannu odeyalu narahariyu
ugra rUpavannu tALi |
kaTakaTeMba dhvaniya mADi naKagaLiMda piDidu otti
karuLa bagedu mAle hAki kaMda BaktanappikoMDa | 12 |
aMtarikShadalli amararu | nODi Aga
puShpa vRuShTiyanne karedaru |
ajana paDeda dEvi baMdu toDeya mEle kuLitiralu
amarapatiyarellaru nODi aMja bEDeMdaBayavitta | 13 |
lakShmInArasiMhana cariteya | udayakAla
paThisuvaMta nararigella |
putrasaMtAnaMgaLittu matte bEDid~hAMga koTTu
Baktavatsala muktikoDuva puraMdaraviThala rAya | 14 |
Leave a Reply