Narasimhana bhajisi

Composer : Shri Prasannavenkata dasaru

By Smt.Shubhalakshmi Rao

ನಾರಸಿಂಹನ ಭಜಿಸಿ ಭವ ಭೀತರು |
ತೋರುವಡಗುವ ವಿಭವ ಸುಖಕೆ ನಡುಗೀ (ಪ)

ದಾವ ಭವ ವಾರಿಧೀಯೊಳುಂಡುಟ್ಟು ಸತಿ ಸುತರು |
ಜೀವದೊಲ್ಲಭರೆಂದು ಕೆಡುವರೊ ಕಣಾ |
ದಾವ ನೀರಟ್ಟಿಸಲದೆ ಮಡುವಿಲಿಹ ಜಲ ಚ –
ರಾವಳಿಯ ಬಳಲಿಕಿಯ ನೋಡಿ ನಡುಗೀ [೧]

ಘೋರಾಟವಿಗೆ ಸಮವಸಾರ ಸಂಸಾರದೊಳು |
ಭೂರಿ ಸುಖವೆಂದು ಮೂರ್ಖರು ಕೆಡುವರು |
ಕ್ರೂರ ಹುಲಿ ಚೋರ ನಿಭ ತನು ಸಂಬಂಧಿಗಳ ಧರ್ಮ |
ಸೂರಿಗಾರರ ಸುಲಿಗಿ ಗಂಜಿ ನಡುಗೀ [೨]

ಸ್ವಚ್ಛೋದಕದ ಥೆರೆ ಮರೀಚಕಾ ಜಲಕೆ ಸಮ
ಕುಚ್ಛಿತ ಶೃತಿಯ ನಂಬಿದವ ಪಾಮರಾ |
ನಿಚ್ಚ ನೀರಿಡಿಸೋಡಿ ಪ್ರಸನ್ನ ವೇಂಕಟ ಪತಿಯ |
ಸುಚ್ಛಾಯ ಬಿಟ್ಟೊರಲುವನಿಗೆ ನಡುಗೀ [೩]


nArasiMhana Bajisi Bava BItaru |
tOruvaDaguva viBava suKake naDugI (pa)

dAva Bava vAridhIyoLuMDuTTu sati sutaru |
jIvadollaBareMdu keDuvaro kaNA |
dAva nIraTTisalade maDuviliha jala ca –
rAvaLiya baLalikiya nODi naDugI [1]

GOrATavige samavasAra saMsAradoLu |
BUri suKaveMdu mUrKaru keDuvaru |
krUra huli cOra niBa tanu saMbaMdhigaLa dharma |
sUrigArara suligi gaMji naDugI [2]

svacChOdakada there marIcakA jalake sama
kucCita SRutiya naMbidava pAmarA |
nicca nIriDisODi prasanna vEMkaTa patiya |
sucCAya biTToraluvanige naDugI [3]

Leave a Reply

Your email address will not be published. Required fields are marked *

You might also like

error: Content is protected !!