Composer : Shri Gonavarada Ramadasaru [Bade Saheb]
Shri Rama ankita Bade Sahebaru – Shri Rama dasaru
1882 – Jolada Hedagi of Devadurga Taluk, Raichur District.
ನರಹರಿ ಶರಣರ ಸುರತರು ಶ್ರೀಕರ ಹರಿ ನಿಮ್ಮ
ಪಾದ ಸ್ಮರಣೆ ಮರೆಯಲಾರೆನೆಂದೆಂದು [ಪ]
ಹರಿ ನೀನೆ ಗತಿಯೆಂದು ಮೊರೆಯಿಟ್ಟು ಸ್ಮರಿಪರ
ಅರಲವ ಬಿಡದವರ ಸ್ಮರಣೆಯೋಲ್ ನೆಲೆಗೊಂಡು
ತೆರೆದು ಕರುಣ ಚಕ್ಷು ಪೊರೆವೆ ಎವೆಯಿಕ್ಕದೆ [೧]
ವೇದವೇದಾದಿ ನಮಿತ ಸಾಧು ಸಜ್ಜನ ವಿನುತ
ಪಾದದಾಸರ ಭವಬಾಧೆಗೆಲಿಸಿ ಸು ಹಾದಿ
ತೋರಿಸಿ ಬಹು ಮೋದದಿಂ ಸಲಹುವಿ [೨]
ನೀ ಮಾಡಿದುಪಕಾರ ನಾ ಮರೆಯಲಾರೆ ದೇವ
ಸ್ವಾಮಿ ಶ್ರೀರಾಮ ನಿನ್ನ ನಾಮ ಕರುಣಿಸಿ ಎನ್ನ
ಈ ಮಹಭವದು:ಖ ಕ್ಷೇಮದಿಂ ಗೆಲಿಸಿದಿ [೩]
narahari SaraNara surataru SrIkara hari nimma
pAda smaraNe mareyalAreneMdeMdu [pa]
hari nIne gatiyeMdu moreyiTTu smaripara
aralava biDadavara smaraNeyOl nelegoMDu
teredu karuNa cakShu poreve eveyikkade [1]
vEdavEdAdi namita sAdhu sajjana vinuta
pAdadAsara BavabAdhegelisi su hAdi
tOrisi bahu mOdadiM salahuvi [2]
nI mADidupakAra nA mareyalAre dEva
svAmi SrIrAma ninna nAma karuNisi enna
I mahaBavadu:Ka kShEmadiM gelisidi [3]
Leave a Reply