Kayo Shri Narasimha

Composer : Shri Gopala dasaru

By Smt.Shubhalakshmi Rao

ಕಾಯೋ ಶ್ರೀ ನಾರಸಿಂಹ ಕಾಯೋ ಜಯ ನಾರಸಿಂಹ ಕಾಯೊ…|ಪ|
ಕಾಯೋ ಶ್ರೀ ನಾರಸಿಂಹ ತ್ರಯಂ-ಬಕಾದ್ಯಮರೇಶ
ಭಯಾಂಧ-ತಿಮಿರ-ಮಾರ್ತಾಂಡ ಶ್ರೀನಾರಸಿಂಹ ಕಾಯೊ |ಅ ಪ|

ಘೋರ ಅಕಾಲಮೃತ್ಯು ಮೀರಿ ಬರಲು ಕಂಡು
ಧೀರ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ಕಾಯೊ |೧|

ಧೀಷಣನೆ ಸು-ಭದ್ರ ದೋಷ ಮೃತ್ಯುಗೆ ಮೃತ್ಯು
ಸುಷುಮ್ನ ನಾಡಿಸ್ಥಿತ ವಿಭುವೆ ಶ್ರೀ ನಾರಸಿಂಹ ಕಾಯೊ | ೨ |

ಜ್ಞಾನ ಶೂನ್ಯನನಾಗಿ ನಾ ನಿನ್ನ ಮರೆತರೆ
ನೀನೂ ಮರೆತದೇಕೊ ಪೇಳೋ ಶ್ರೀ ನಾರಸಿಂಹ ಕಾಯೊ | ೩ |

ಪ್ರಬಲೋತ್ತಮನೆನಿಸಿ ಅಬಲರ ಕಾಯದಿರಲು
ಸುಬಲರು ಕಂಡು ಮೆಚ್ಚುವರೇನೊ ನಾರಸಿಂಹ ಕಾಯೊ | ೪ |

ಪಾಲಮುನ್ನೀರಾಗರ ಪದುಮೇ ಮನೋಹರ
ಗೋಪಾಲ ವಿಠ್ಠಲ ಜಗತ್ಪಾಲ ಶ್ರೀ ನಾರಸಿಂಹ ಕಾಯೊ |೫|


kAyO SrI nArasiMha kAyO jaya nArasiMha kAyo…|pa|
kAyO SrI nArasiMha trayaM-bakAdyamarESa
BayAMdha-timira-mArtAMDa SrInArasiMha kAyo |a pa|

GOra akAlamRutyu mIri baralu kaMDu
dhIra nI biDisadinyArO SrI nArasiMha kAyo |1|

dhIShaNane su-Badra dOSha mRutyuge mRutyu
suShumna nADisthita viBuve SrI nArasiMha kAyo | 2 |

j~jAna shUnyananAgi nA ninna maretare
nInU maretadEko pELO SrI nArasiMha kAyo | 3 |

prabalOttamanenisi abalara kAyadiralu
subalaru kaMDu meccuvarEno nArasiMha kAyo | 4 |

pAlamunnIrAgara padumE manOhara
gOpAla viThThala jagatpAla SrI nArasiMha kAyo |5|

Leave a Reply

Your email address will not be published. Required fields are marked *

You might also like

error: Content is protected !!