Composer : Shri Indiresha
ಕರುಣದಿಂದ ಕರವ ಪಿಡಿಯೊ ತೊರವಿ ನರಹರೆ
ಆಹಾ ತೊರವಿ ನರಹರೆ (ಪ)
ಶರಣಾಗತರಮಲ ತೋರುವ ಕರುಣ ವಾರಿಧೆ (ಅ.ಪ.)
ಸ್ತಂಭಜಾತ ನಂಬಿ ನಿನ್ನ ಅಂಬುಜಾತನೆ
ಬಿಂಬದಂತೆ ಪಾಲಿಸೆನ್ನ ಸಾಂಬವಿನುತನೆ [೧]
ಛಟಿಛಟೆಂದು ಒಡೆದು ಕಂಬ ಪುಟಿದು ಸಭೆಯೊಳು
ಕಟಿಯ ತಟದೊಳಿಟ್ಟು ರಿಪುವ ಒಡಲ ಬಗೆದೆಯೊ [೨]
ಇಂದಿರೇಶ ಎನ್ನ ಹೃದಯ ಮಂದಿರದೊಳು
ಬಂದು ತೋರೆ ಮುಖವ ನಿನ್ನ ವಂದಿಸುವೆನು [೩]
karuNadiMda karava piDiyo toravi narahare
AhA toravi narahare (pa)
SaraNAgataramala tOruva karuNa vAridhe (a.pa.)
staMBajAta naMbi ninna aMbujAtane
biMbadaMte pAlisenna sAMbavinutane [1]
CaTiCaTeMdu oDedu kaMba puTidu saBeyoLu
kaTiya taTadoLiTTu ripuva oDala bagedeyo [2]
iMdirESa enna hRudaya maMdiradoLu
baMdu tOre muKava ninna vaMdisuvenu [3]
Leave a Reply