Gunja narasimha Pahi

Composer : Shri Uragadri vittala dasaru

By Smt.Shubhalakshmi Rao

ಗುಂಜಾ ನರಸಿಂಹಾ ಪಾಹಿ ಮಾಂ ಪಾಹಿ [ಪ]
ಅಜಭವ ಫಣಿ ದ್ವಿಜರಾಜ ಸುಪೂಜಿತ
ತ್ರಿಜಗದೊಡೆಯ ನರಹರಿಯೆ ದುರಿತ ಹರಾ [ಅ.ಪ]

ಪಟುತರ ಭಾಧೆ ಸಂಕಟಪಡುತಲಿ ಸುರ-
ಕಟಕ ನುತಿಸಿ ಕೋಟಿತಟಿತ್ಕಾಯನೆ
ಕೋಟಿ ಖಳರೆದೆ ಕುಟ್ಟಿ ಯಮಪುರ
ಕಟ್ಟಿ ದಿಟ್ಟತನದಲಿ ನಿಶಾಚರನಳುಹಿದೆ (೧)

ಸಿಡಿಲೋಪಮ ಘುಡು ಘುಡಿಸುತ ಕಿಡಿಯ
ಕಡೆಗಣ್ಣಿಂದಲಡಿಗಡಿಗುಗುಳುತ
ಕೂಡಿನಖಗಳ ನೀಡಿ ಶಿರವನ-
ಲ್ಲಾಡಿಸಿ ಜಡಜಂಗಮರ ನಡುಕ ಬಿಡಿಸಿದೆಯೊ (೨)

ಅಡಿಗಡಿಗೆಡರನು ಪಡುತಿಹ ಹುಡುಗನ
ದೃಢತರ ಭಕುತಿಯ ನುಡಿಯುನು ಕೇಳುತ
ನೋಡಿ ಅಭಯವ ನೀಡಿ ನೀ ದಯ
ಮಾಡಿ ಬಿಡುಗಣ್ಣರನು ಬಿಡದೆ ಸಲಹಿದೆ (೩)

ಕಾಳ ರಕ್ಕಸರ ಬಾಧೆಗಳಿಂದ
ಗೋಳಾಡುತ ನಿನ್ನಡಿಗಳ ಸ್ತುತಿಸೆ
ಕೇಳಿ-ಹರುಷವ ತಾಳಿ-ದನುಜರ
ಧೂಳೀ ಪಟಮಾಡಿ ನಲಿದು ನಿಂದಾಡಿದೆ (೪)

ಸಿಂಧುಶಯನ ಭವಬಂಧ ವಿಮೋಚಕ
ಇಂದಿರೆಯರಸ ಶ್ರೀ ವೇಂಕಟೇಶ ನೀ
ಬಂದೂ ಸ್ತಂಭದಿ ನಿಂದೂ ಭಕುತರ
ಬಂಧೂ ಸುರವೃಂದಕೆ ಆನಂದವ ನೀಡಿದೆ (೫)

ಕಡಲುಗಳೇಳಡಿಗಡಿಗುಕ್ಕುತ
ಉಡುಗಡಣಗಳು ಪಥ ತಪ್ಪಿ ಬೀಳುತಲಿರೆ
ದಾಡಿ ಕುಣಿದಾಡೀ ಸ್ಮಶ್ರುಗಳ
ತೀಡಿ ಬಡಬಾನಲಲ್ಲಾಡಿಸಿ ನಿಂದ (೬)

ಪರಿಪರಿ ಸುರರವಯವಗಳನು ಧರಿಸಿ
ಉರುತರ ಕ್ರೀಡೆಯ ಮಾಡಿ ಪ್ರಳಯದಿ
ತೋರಿ ಧಿಕ್ಕರಿಸಿ ತಾಳಿ ಹರುಷದಿ
ಕೇಳಿಯೊಳು ಉರಗಾದ್ರಿವಾಸವಿಠಲ ನೀ ನಿಂದೆಯೊ (೭)


guMjA narasiMhA pAhi mAM pAhi [pa]
ajaBava PaNi dvijarAja supUjita
trijagadoDeya narahariye durita harA [a.pa]

paTutara BAdhe saMkaTapaDutali sura-
kaTaka nutisi kOTitaTitkAyane
kOTi KaLarede kuTTi yamapura
kaTTi diTTatanadali niSAcaranaLuhide (1)

siDilOpama GuDu GuDisuta kiDiya
kaDegaNNiMdalaDigaDiguguLuta
kUDinaKagaLa nIDi Siravana-
llADisi jaDajaMgamara naDuka biDisideyo (2)

aDigaDigeDaranu paDutiha huDugana
dRuDhatara Bakutiya nuDiyunu kELuta
nODi aBayava nIDi nI daya
mADi biDugaNNaranu biDade salahide (3)

kALa rakkasara bAdhegaLiMda
gOLADuta ninnaDigaLa stutise
kELi-haruShava tALi-danujara
dhULI paTamADi nalidu niMdADide (4)

siMdhuSayana BavabaMdha vimOcaka
iMdireyarasa SrI vEMkaTESa nI
baMdU staMBadi niMdU Bakutara
baMdhU suravRuMdake AnaMdava nIDide (5)

kaDalugaLELaDigaDigukkuta
uDugaDaNagaLu patha tappi bILutalire
dADi kuNidADI smaSrugaLa
tIDi baDabAnalallADisi niMda (6)

paripari suraravayavagaLanu dharisi
urutara krIDeya mADi praLayadi
tOri dhikkarisi tALi haruShadi
kELiyoLu uragAdrivAsaviThala nI niMdeyo (7)

Leave a Reply

Your email address will not be published. Required fields are marked *

You might also like

error: Content is protected !!