Composer : Shri Gurushrisha vittala
ಬಾರೋ ಶ್ರೀ ನರಹರಿಯೇ | ಭವ ಬಂಧ ಮೋಚಕ || ಪ ||
ನಂದ ಗೋಪನ ಕಂದ ಹರಿ ಮುಕುಂದ |
ಸುಂದರ ಮಂದರೋದ್ಧರ |
ಸಿಂಧುಶಯನ ಗೋವಿಂದ ಇಂದಿನ |
ಮಂದಮತಿಗೆ ಸ್ವಾನಂದವೀಯಲು || ಅ.ಪ ||
ಗಾಡಾಂಧಕಾರದೊಳು ನಾ ಬಲು
ಕಿಡಿಗೇಡಿ ಜೀವನನಾಗಲು |
ನೀಡದಂದಲಿಪ್ಪಲಿಂಗದಿ ಆಡುತತಾಡುತ
ದೂಡಿ ಯೆನ್ನನು ಬೇಡಗೊಳಲಿ ಕಾಡೊಳಟ್ಟಿದ |
ನಾಡ ರಕ್ಷಿಪ ಗಾಡಿಕಾರನೇ || ೧ ||
ಏಸು ಜನ್ಮಗಳ್ ಹೋದವೋ
ಈ ವಿಧದಿಂದೇಸು ಜನ್ಮಗಳ್ ಉಳಿದವೋ |
ದಾಸ ನಾನಿಹೆ ಕ್ಲೇಶದಿಂದಲಿ ಘಾಸಿಯಾಗುವೆ
ಮೋಸ ಮಾಡದೆ | ಶ್ರೀಶ ಈ ಭವ
ಪಾಶದಿಂದಲಿ ಪೋಷಿಸಯ್ಯ ವಾಸುದೇವನೇ || ೨ ||
ಪ್ರಾರಬ್ಧವದು ದಾವದೋನಿನ್ನಿಚ್ಛೆಯಿಲ್ಲದೆ |
ಬೇರಿಹುದಲ್ಲಾವುದೊ | ದಾರಿಗಾಣೆನೋ
ದೂರ ನೋಡದೆ ||
ಪಾರು ಮಾಡ್ವದನಂತಮಹಿಮನೆ |
ಸೇರಿಸೆನ್ನ ರಮೇಶ ಪಾದಕೆ |
ಮಾರಪಿತ ಗುರು ಶ್ರೀಶ ವಿಠ್ಠಲ || ೩ ||
bArO SrI narahariyE | Bava baMdha mOcaka || pa ||
naMda gOpana kaMda hari mukuMda |
suMdara maMdarOddhara |
siMdhuSayana gOviMda iMdina |
maMdamatige svAnaMdavIyalu || a.pa ||
gADAMdhakAradoLu nA balu
kiDigEDi jIvananAgalu |
nIDadaMdalippa liMgadi ADutatADuta
dUDi yennanu bEDagoLali kADoLaTTida |
nADa rakShipa gADikAranE || 1 ||
Esu janmagaL hOdavO
I vidhadiMdEsu janmagaL uLidavO |
dAsa nAnihe klESadiMdali GAsiyAguve
mOsa mADade | SrISa I Bava
pASadiMdali pOShisayya vAsudEvanE || 2 ||
prArabdhavadu dAvadO ninnicCeyillade |
bErihudallAvudo | dArigANenO
dUra nODade ||
pAru mADvadanaMta mahimane |
sErisenna ramESa pAdake |
mArapita guru SrISa viThThala || 3 ||
Leave a Reply