Composer : Shri Gurugovinda dasaru
ಅಪಮೃತ್ಯು ಪರಿಹರಿಸೊ ನಾರಸಿಂಹ
ಕೃಪಣ ವತ್ಸಲ ಹರಿಯೆ ಬಿನ್ನವಿಪೆ ನಿನಗೇ [ಪ]
ಅನ್ಯರಿಗೆ ಮೊರೆ ಇಡೆನೊ | ನಿನ್ಹೊರತು ಇನ್ನಿಲ್ಲ
ಮನ್ಯು ಸೂಕ್ತೋದಿತನೆ | ಎನ್ನ ಶಿಷ್ಯನಿಗೇ ಬನ್ನ
ಬಡಿಸುವ ರೋಗ | ವನ್ನು ಮೋಚಿಪುದಯ್ಯ
ಅನ್ನಂತ ಮಹಿಮ ಹರಿ | ನಿನ್ನ ಕೃಪೆ ತೋರೋ [೧]
ತಂದೆ ತಾಯಿಯು ನೀನೇ | ಬಂಧು ಬಳಗವು ನೀನೇ
ಇಂದು ಅಂದಿಗು ನೀನೇ | ಎಂದೆಂದು ನೀನೇ |
ಕಂದನನು ಸಲಹೆಂದು | ಸಿಂಧು ಶಯನನೆ
ಬೇಡ್ವೆ ಇಂದಿರಾಪತಿ ಗುರು | ಗೋವಿಂದ ವಿಠ್ಠಲಾ [೨]
apamRutyu parihariso nArasiMha
kRupaNa vatsala hariye binnavipe ninagE [pa]
anyarige more iDeno | ninhoratu innilla
manyu sUktOditane | enna SiShyanigE banna
baDisuva rOga | vannu mOcipudayya
annaMta mahima hari | ninna kRupe tOrO [1]
taMde tAyiyu nInE | baMdhu baLagavu nInE
iMdu aMdigu nInE | eMdeMdu nInE |
kaMdananu salaheMdu | siMdhu Sayanane
bEDve iMdirApati guru | gOviMda viThThalA [2]
Leave a Reply