Composer : Shri Vijayadasaru
ವ್ಯಾಸಾ ಬದರಿ ನಿವಾಸಾ | ಎನ್ನಯ |
ಕ್ಲೇಶ ನಾಶನಗೈಸು ಮೌನೀಶಾ | ಸಾಸಿರ ಮಹಿಮನೆ |
ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ||ಪ||
ಸತ್ಯವತಿ ವರಸೂನು ಭವತಿಮಿರ ಭಾನು |
ಭೃತ್ಯವರ್ಗದ ಸುರಧೇನು |
ಸತ್ಯಮೂರುತಿಯೆ ನೀನು | ಸ್ತುತಿಪೆ ನಾನು ||
ನಿತ್ಯ ನಿನ್ನಂಘ್ರಿಯರೇಣು | ಉತ್ತಮಾಂಗದಲಿ
ಹೊತ್ತು ಹೊತ್ತಿಗೆ ಸೂಸುತ್ತಿರಲೆನಗದು |
ಅತ್ಯಂತ ಸುಖಕರ | ಸುತ್ತವ ಸುಳಿಯೆಂದೆತ್ತಿ ಕಡೆಗೆಯಿಡು |
ಎತ್ತ ನೋಡಲು ವ್ಯಾಪುತ ಸದಾಗಮ ||೧||
ಲೋಕ ವಿಲಕ್ಷಣ ಋಷಿ | ಗುಣವಾರಿ ರಾಸಿ |
ವೈಕುಂಠ ನಗರನಿವಾಸಿ | ನಾಕಾರಿಗಳ ಕುಲದ್ವೇಷಿ ಚಿತ್ರ ಸನ್ಯಾಸಿ |
ಬೇಕೆಂದು ಭಜಿಪೆ ನಿಲ್ಲಿಸಿ |
ಜೋಕೆ ಮಾಡುವುದ | ನೇಕ ಪರಿಯಿಂದ |
ಆ ಕುರುವಂಶವ ನಿಕರ ತರಿಸದೆ | ಭೂಕಾಂತರು ನೋಡೆ |
ಸಾಕಾರ ದೇವ ಕೃಪಾಕರ ಮುನಿ ದಿವಾಕರ ಭಾಸಾ ||೨||
ಭಜಿಸಿದವರ ಮನೋಭೀಷ್ಟ | ವಾಶಿಷ್ಟ ಕೃಷ್ಣ
ನಿರುತ ಎನ್ನಯ ಅರಿಷ್ಟ |
ಪರಿಹರಿಸುವುದು ಕಷ್ಟಗಳನ್ನು ಉತ್ಕೃಷ್ಟ |
ಮೆರೆವ ಉನ್ನತ ವಿಶಿಷ್ಟ |
ಸುರ ನರ ಉರಗ ಕಿನ್ನರ ಗಂಧರ್ವರ |
ಕರಕಮಲಗಳಿಂದ್ | ವರಪೂಜೆಗೊಂಬ |
ಸಿರಿ ಅರಸನೆ ನಮ್ಮ ವಿಜಯವಿಠ್ಠಲ ಪರಾ |
ಶರಸುತ ಬಲು ವಿಸ್ತರ ಜ್ಞಾನಾಂಬುಧೆ || ೩ ||
vyAsA badari nivAsA | ennaya |
klESa nASanagaisu maunISA | sAsira mahimane |
dOSharahita sura bhUsura paripAla SASvata vEda ||pa||
satyavati varasUnu bhavatimira bhAnu |
bhRutyavargada suradhEnu |
satyamUrutiye nInu | stutipe nAnu ||
nitya ninnaMGriyarENu | uttamAMgadali
hottu hottige sUsuttiralenagadu |
atyaMta suKakara | suttava suLiyeMdetti kaDegeyiDu |
etta nODalu vyAputa sadAgama ||1||
lOka vilakShaNa RuShi | guNavAri rAsi |
vaikuMTha nagaranivAsi | nAkArigaLa kuladvEShi citra sanyAsi |
bEkeMdu bhajipe nillisi |
jOke mADuvuda | nEka pariyiMda |
A kuruvaMSava nikara tarisade | bhUkAMtaru nODe |
sAkAra dEva kRupAkara muni divAkara bhAsA ||2||
bhajisidavara manObhIShTa | vASiShTa kRuShNa
niruta ennaya ariShTa |
pariharisuvudu kaShTagaLannu utkRuShTa |
mereva unnata viSiShTa |
sura nara uraga kinnara gaMdharvara |
karakamalagaLiMd | varapUjegoMba |
siri arasane namma vijayaviThThala parA |
Sarasuta balu vistara j~jAnAMbudhe || 3 ||
Leave a Reply