Composer : Shri Vishwendra Tirtharu
ವೇದವ್ಯಾಸ ಮೂರುತೀ ಬದರಿಯೊಳಗಿರುತಿ
ಮೇದಿನಿಯೊಳ್ ನಿನ್ನ ಕೀರುತಿ ಪಸರಿಸುತಿರುತಿ [ಪ]
ಮಧ್ವಮುನಿಗಾನಂದದಿ ವೇದ ಶಾಸ್ತ್ರಾಂಬುಧಿಯೊಳು
ಇಂದಿಗಾಯ್ತೊಂಭತ್ತು ಶತವು ಚಂದದಿಂ ವತ್ಸರಗಳು [೧]
ಕೀಟದಿಂದ ರಾಜ್ಯಭಾರ-ವಾಟದಂತೆ ನಡೆಸಿದಿ |
ಪುಟ್ಟತನದಿ ಮಾತೆಗೊಲಿದು ಶ್ರೇಷ್ಠ ನೀನೆಂದೆನಿಸಿದಿ [೨]
ರಾಜ ಧರ್ಮತನಯನಿಂದ ರಾಜಸೂಯ ನಡೆಸಿದಿ |
ರಾಜನಾಥ ಹಯಮುಖ ನೀ ಮೂಜಗದಿ ಮೆರೆಯುತಿ [೩]
vEdavyAsa mUrutI badariyoLagiruti
mEdiniyoL ninna kIruti pasarisutiruti [pa]
madhvamunigAnaMdadi vEda SAstrAMbudhiyoLu
iMdigAytoMBattu Satavu caMdadiM vatsaragaLu [1]
kITadiMda rAjyaBAra-vATadaMte naDesidi |
puTTatanadi mAtegolidu SrEShTha nIneMdenisidi [2]
rAja dharmatanayaniMda rAjasUya naDesidi |
rAjanAtha hayamuKa nI mUjagadi mereyuti [3]
Leave a Reply