Srinivasa kalyana – Striyarellaru bannire

Composer : Shri Vadirajaru

By Smt.Shubhalakshmi Rao

ಶ್ರೀ ವಾದಿರಾಜ ತೀರ್ಥ ವಿರಚಿತ ಶ್ರೀ ಶ್ರೀನಿವಾಸ ಕಲ್ಯಾಣ ||

ಸ್ತ್ರೀಯರೆಲ್ಲರೂ ಬನ್ನೀರೇ , ಶ್ರೀನಿವಾಸನ ಪಾಡಿರೇ
ಜ್ಞಾನಗುರುಗಳಿಗೊಂದಿಸಿ , ಮುಂದೆ ಕಥೆಯ ಪೇಳುವೆ ||ಪ||

ಗಂಗಾತೀರದಿ ಋಷಿಗಳು , ಅಂದು ಯಾಗವ ಮಾಡ್ದರು
ಬಂದು ನಾರದ ನಿಂತುಕೊಂಡು ಯಾರಿಗೆಂದು, ಕೇಳಲು
ಅರಿತು ಬರಬೇಕು ಎಂದು , ಆ ಮುನಿಯು ತೆರಳಿದ,
ಭೃಗುಮುನಿಯು ತೆರಳಿದ
ನಂದಗೋಪನ ಮಗನ ಕಂದನ ,
ಮಂದಿರಕ್ಕಾಗೆ ಬಂದನು

ವೇದಗಳನೆ ಓದುತಾ , ಹರಿಯನೂ ಕೊಂಡಾಡುತಾ
ಇರುವ ಬೊಮ್ಮನ ನೋಡಿದ , ಕೈಲಾಸಕ್ಕೆ ಬಂದನು
ಕಂಬುಕಂಠನು ಪಾರ್ವತಿಯೂ , ಕಲೆತಿರುವುದ ಕಂಡನು
ಸೃಷ್ಟಿಯೊಳಗೆ ನಿನ್ನ ಲಿಂಗ ಶೇಷ್ಠವಾಗಲೆಂದನು
ವೈಕುಂಠಕ್ಕೆ ಬಂದನು , ವಾರಿಜಾಕ್ಷನ ಕಂಡನು

ಕೆಟ್ಟಕೋಪದಿಂದ ಒದ್ದರೆ , ಎಷ್ಟುನೊಂದಿತೆಂದನು
ಥಟ್ಟನೆ ಬಿಸಿನೀರಿನಿಂದ , ನೆಟ್ಟಗೆ ಪಾದ ತೊಳೆದನು
ಬಂದ ಕಾರ್ಯ ಆಯಿತೆಂದು , ಅಂದು ಮುನಿಯು ತೆರಳಿದ
ಬಂದು ನಿಂದು ಸಭೆಯೊಳಗೆ , ಇಂದಿರೇಶನ ಹೊಗಳಿದ

ಪತಿಯ ಕೂಡೆ ಕಲಹ ಮಾಡಿ , ಕೊಲ್ಹಾಪುರಕ್ಕೆ ಹೋದಳು
ಸತಿಯು ಪೋಗೆ ಪತಿಯು ಹೊರಟು , ಗಿರಿಗೆ ಬಂದು ಸೇರಿದ
ಹುತ್ತದಲ್ಲೇ ಹತ್ತುಸಾವಿರ ವರುಷ ಗುಪ್ತವಾಗಿದ್ದ
ಬ್ರಹ್ಮ ಧೇನುವಾದನು , ರುದ್ರವತ್ಸನಾದನು

ಧೇನು ಮುಂದೆ ಮಾಡಿಕೊಂಡು , ಗೋಪಿ ಹಿಂದೆ ಬಂದಳು
ಕೋಟಿ ಹೊನ್ನು ಬಾಳುವೋದು , ಕೊಡದ ಹಾಲು ಕರೆವುದು
ಪ್ರೀತಿಯಿಂದಲಿ ತನ್ನ ಮನೆಗೆ , ತಂದುಕೊಂಡನು ಚೋಳನು

ಒಂದು ದಿವಸ ಕಂದಗ್ ಹಾಲು ಚಂದದಿಂದಲ್ಲಿ ಕೊಡಲಿಲ್ಲ
ಅಂದು ರಾಯನ ಮಡದಿ ಕೋಪಿಸಿ , ಬಂದು ಗೋಪನ ಹೊಡೆದಳು
ಧೇನು ಮುಂದೆ ಮಾಡಿಕೊಂಡು , ಗೋಪ ಹಿಂದೆ ನಡೆದನು
ಕಾಮಧೇನು ಕರೆದ ಹಾಲು , ಹರಿಯ ಶಿರಕೆ ಬಿದ್ದಿತು

ಇಷ್ಟು ಕಷ್ಟ ಬಂದಿತೆಂದು , ಪೆಟ್ಟು ಬಡಿಯೆ ಹೋದನು
ಕೃಷ್ಣ ತನ್ನ ಮನದಲ್ಲ್ಯೋಚಿಸಿ , ಕೊಟ್ಟ ತನ್ನ ಶಿರವನು
ಏಳು ತಾಳೆಮರದ ಉದ್ದ , ಏಕವಾಗಿ ಹರಿಯಿತು
ರಕ್ತವನ್ನು ನೋಡಿ ಗೋಪ , ಮತ್ತೆ ಸ್ವರ್ಗಕ್ಕೇರಿದ

ಕಷ್ಟವನ್ನು ನೋಡಿ ಗೋವು , ಅಷ್ಟು ಬಂದ್ ಹೇಳಿತು
ಥಟ್ಟನೆ ರಾಯ ಎದ್ದು ಗಿರಿಗೆ , ಬಂದು ಬೇಗ ಸೇರಿದ
ಏನು ಕಷ್ಟ ಇಲ್ಲಿ ಹೀಗೆ , ಯಾವ ಪಾಪಿ ಮಾಡಿದ,
ಇಷ್ಟು ಕಷ್ಟ ಕೊಟ್ಟವಾಗೆ , ಭ್ರಷ್ಟಪಿಶಾಚಿಯಾಗೆಂದ

ಪೆಟ್ಟು ವೇದನೆ ತಾಳಲಾರದೆ , ಬೃಹಸ್ಪತಿಯ ಕರೆಸಿದ
ಅರುಣ ಉದಯದಲ್ಲೆದ್ದು , ಔಷಧಕ್ಕೆ ಪೋದನು
ಕ್ರೋಢರೂಪಿಯ ಕಂಡನು , ಕೂಡಿ ಮಾತನಾಡಿದನು
ಇರುವುದಕ್ಕೆ ಸ್ಥಳವು ಎನಗೆ , ಏರ್ಪಾಡಾಗಬೇಕೆಂದ

ನೂರುಪಾದ ಭೂಮಿ ಕೊಟ್ಟರೆ , ಮೊದಲು ಪೂಜೆ ನಿಮಗೆಂದ
ಪಾಕಪಕ್ವ ಮಾಡುವುದಕ್ಕೆ , ಆಕೆ ಬಕುಳೆ ಬಂದಳು
ಭಾನುಕೋಟಿತೇಜನೀಗ , ಬೇಟೆಯಾಡ ಹೊರಟನು
ಮಂಡೆ ಬಾಚಿ ದೊಂಡೆ ಹಾಕಿ , ದುಂಡುಮಲ್ಲಿಗೆ ಮುಡಿದನು

ಹಾರಪದಕ ಕೊರಳಲ್ ಹಾಕಿ , ಫಣೆಗೆ ತಿಲಕವಿಟ್ಟನು
ಅಂಗುಲಿಗೆ ಉಂಗುರ , ರಂಗಶೃಂಗಾರವಾದವು
ಪಟ್ಟೆನುಟ್ಟು ಕಚ್ಚೆ ಕಟ್ಟಿ , ಪೀತಾಂಬರವ ಹೊದ್ದನು
ಢಾಳು ಕತ್ತಿ ಉಡಿಯಲ್ ಸಿಕ್ಕಿ , ಜೋಡೂ ಕಾಲಲ್ಲಿ ಮೆಟ್ಟಿದ

ಕರದಿ ವೀಳ್ಯವನ್ನೇ ಪಿಡಿದು , ಕನ್ನಡೀಯ ನೋಡಿದ
ಕನಕಭೂಷಣವಾದ ತೊಡೆಗೆ , ಕಮಲನಾಭ ತೊಟ್ಟನು
ಕನಕಭೂಷಣವಾದ ಕುದುರೆ , ಕಮಲನಾಭ ಏರಿದ
ಕರಿಯ ಹಿಂದೆ ಹರಿಯು ಬರಲು , ಕಾಂತರೆಲ್ಲ ಕಂಡರು

ಯಾರು ಇಲ್ಲಿ ಬರುವರೆಂದು? ದೂರ ಪೋಗಿರೆಂದರು
ನಾರಿಯರಿರುವ ಸ್ಥಳಕ್ಕೆ , ಯಾವ ಪುರುಷ ಬರುವನು?
ಏಷ್ಟು ಹೇಳೆ ಕೇಳ ಕೃಷ್ಣ , ಕುದುರೆ ಮುಂದೆ ಬಿಟ್ಟನು
ಅಷ್ಟೂ ಮಂದಿರೆಲ್ಲ ಸೇರಿ , ಪೆಟ್ಟುಗಳನು ಹೊಡೆದರು

ಕಲ್ಲುಮಳೆಯ ಕರೆದರಾಗ , ಕುದುರೆ ಕೆಳಗೆ ಬಿದ್ದಿತು
ಕೇಶ ಬಿಚ್ಚಿ ವಾಸುದೇವ , ಶೇಷಗಿರಿಗೆ ಬಂದನು
ಪರಮಾನ್ನ ಮಾಡಿದ್ದೇನೆ , ಉಣ್ಣು ಬೇಗ ಎಂದಳು
ಅಮ್ಮ ಎನಗೆ ಅನ್ನ ಬೇಡ , ಎನ್ನ ಮಗನ ವೈರಿಯೇ

ಕಣ್ಣಿಲ್ಲಾದ ದೈವ ಅವಳ , ನಿರ್ಮಾಣವ ಮಾಡಿದ
ಯಾವ ದೇಶ ಯಾವೋಳಾಕೆ , ಎನಗೆ ಪೇಳು ಎಂದಳು
ನಾರಾಯಣನ ಪುರಕೆ ಪೋಗಿ , ರಾಮಕೃಷ್ಣರ ಪೂಜಿಸಿ
ಕುಂಜಮಣಿಯ ಕೊರಳಲ್ ಹಾಕಿ , ಕೂಸಿನ್ ಕೊಂಕಳದೆತ್ತಿದಾ

ಧರಣಿದೇವಿಗೆ ಕಣಿಯ ಕೇಳಿ , ಗಿರಿಗೆ ಬಂದು ಸೇರಿದ
ಕಾಂತರೆಲ್ಲ ಕೂಡಿಕೊಂಡು , ಆಗ ಬಕುಳೆ ಬಂದಳು
ಬನ್ನಿರಮ್ಮ ಸದನಕೆನುತ , ಬಹಳ ಮಾತನಾಡಿದರು
ತಂದೆತಾಯಿ ಬಂಧುಬಳಗ , ಹೊನ್ನು ಹಣ ಉಂಟೆಂದರು

ಇಷ್ಟು ಪರಿಯಲ್ಲಿದ್ದವಗೆ , ಕನ್ಯೆ ಯಾಕೆ ದೊರಕಿಲ್ಲಾ
ದೊಡ್ಡವಳಿಗೆ ಮಕ್ಕಳಿಲ್ಲ , ಮತ್ತೆ ಮದುವೆ ಮಾಡ್ವೆವು
ಬೃಹಸ್ಪತೀಯ ಕರೆಸಿದ , ಲಗ್ನಪತ್ರಿಕೆ ಬರೆಸಿದ
ಶುಕಾಚಾರ್ಯರ ಕರೆಸಿದ , ಮದುವೆ ಓಲೆ ಬರೆಸಿದ

ವಲ್ಲಭೇನ ಕರೆವುದಕ್ಕೆ , ಕೊಲ್ಹಾಪುರಕ್ಕೆ ಪೋದರು
ಗರುಡನ್ ಹೆಗಲನೇರಿಕೊಂಡು , ಬೇಗ ಹೊರಟುಬಂದರು
ಅಷ್ಟವರ್ಗವನ್ನು ಮಾಡಿ , ಇಷ್ಟ ದೇವರ ಪೂಜಿಸಿ
ಲಕ್ಷ್ಮೀಸಹಿತ ಆಕಾಶರಾಜನ , ಪಟ್ಟಣಕ್ಕೆ ಬಂದರು

ಕನಕಭೂಷಣವಾದ ತೊಡುಗೆ , ಕಮಲನಾಭ ತೊಟ್ಟನು
ಕನಕಭೂಷಣವಾದ ಮಂಟಪ , ಕಮಲನಾಭ ಏರಿದ
ಕಮಲನಾಭಗೆ ಕಾಂತಿಮಣಿಯ , ಕನ್ಯಾದಾನವ ಮಾಡಿದ
ಕಮಲನಾಭ ಕಾಂತೆ ಕೈಗೆ , ಕಂಕಣವನ್ನೇ ಕಟ್ಟಿದ

ಶ್ರೀನಿವಾಸ ಪದ್ಮಾವತಿಗೆ , ಮಾಂಗಲ್ಯವನೆ ಕಟ್ಟಿದ
ಶ್ರೀನಿವಾಸನ ಮದುವೆ ನೋಡೆ , ಸ್ತ್ರೀಯರೆಲ್ಲರು ಬನ್ನಿರೇ
ಪದ್ಮಾವತಿಯ ಮದುವೆ ನೋಡೆ , ಮುದ್ದು ಬಾಲೆಯರ್ ಬನ್ನಿರೇ
ಶಂಕೆಯಿಲ್ಲದೆ ಹಣವ ಸುರಿದು , ವೇಂಕಟೇಶನ ಕಳುಹಿದ

ಲಕ್ಷತಪ್ಪು ಎನ್ನಲ್ಲುಂಟು , ಪಕ್ಷಿವಾಹನ ಸಲಹೆನ್ನ
ಕೋಟಿತಪ್ಪು ಎನ್ನಲ್ಲುಂಟು , ಕುಸುಮನಾಭ ಸಲಹೆನ್ನ
ಶಂಕೆ ಇಲ್ಲದೆ ವರವ ಕೊಡುವ , ವೇಂಕಟೇಶ ಸಲಹೆನ್ನ
ಭಕ್ತಿಯಿಂದಲಿ ಹೇಳ್ ಕೇಳ್ದವರಿಗೆ , ಮುಕ್ತಿ ಕೊಡುವ ಹಯವದನ ||

ಜಯ ಜಯ ಶ್ರೀನಿವಾಸನಿಗೆ , ಜಯ ಜಯ ಪದ್ಮಾವತಿಗೆ
ಒಲಿದಂತಹ ಶ್ರೀಹರಿಗೆ , ನಿತ್ಯ ಶುಭಮಂಗಳ
ಶೇಷಾದ್ರಿಗಿರಿವಾಸ , ಶ್ರೀದೇವಿ ಅರಸಗೆ
ಕಲ್ಯಾಣಮೂರ್ತಿಗೆ , ನಿತ್ಯಜಯಮಂಗಳ ||

ಶ್ರೀ ಕೃಷ್ಣಾರ್ಪಣಮಸ್ತು ||


shrI vAdirAja tIrtha virachita shrI shrInivAsa kalyANa ||

strIyarellarU bannIrE , shrInivAsana pADirE
j~jAnagurugaLigoMdisi , muMde katheya pELuve ||pa||

gaMgAtIradi RuShigaLu , aMdu yAgava mADdaru
baMdu nArada niMtukoMDu yArigeMdu, kELalu
aritu barabEku eMdu , A muniyu teraLida,
bhRugumuniyu teraLida
naMdagOpana magana kaMdana ,
maMdirakkAge baMdanu

vEdagaLane OdutA , hariyanU koMDADutA
iruva bommana nODida , kailAsakke baMdanu
kaMbukaMThanu pArvatiyU , kaletiruvuda kaMDanu
sRuShTiyoLage ninna liMga shREShThavAgaleMdanu
vaikuMThakke baMdanu , vArijAkShana kaMDanu

keTTakOpadiMda oddare , eShTunoMditeMdanu
thaTTane bisinIriniMda , neTTage pAda toLedanu
baMda kArya AyiteMdu , aMdu muniyu teraLida
baMdu niMdu sabheyoLage , iMdirEshana hogaLida

patiya kUDe kalaha mADi , kolhApurakke hOdaLu
satiyu pOge patiyu horaTu , girige baMdu sErida
huttadallE hattusAvira varuSha guptavAgidda
brahma dhEnuvAdanu , rudravatsanAdanu

dhEnu muMde mADikoMDu , gOpi hiMde baMdaLu
kOTi honnu bALuvOdu , koDada hAlu karevudu
prItiyiMdali tanna manege , taMdukoMDanu chOLanu

oMdu divasa kaMdag hAlu chaMdadiMdalli koDalilla
aMdu rAyana maDadi kOpisi , baMdu gOpana hoDedaLu
dhEnu muMde mADikoMDu , gOpa hiMde naDedanu
kAmadhEnu kareda hAlu , hariya shirake bidditu

iShTu kaShTa baMditeMdu , peTTu baDiye hOdanu
kRuShNa tanna manadallyOchisi , koTTa tanna shiravanu
ELu tALemarada udda , EkavAgi hariyitu
raktavannu nODi gOpa , matte svargakkErida

kaShTavannu nODi gOvu , aShTu baMd hELitu
thaTTane rAya eddu girige , baMdu bEga sErida
Enu kaShTa illi hIge , yAva pApi mADida,
iShTu kaShTa koTTavAge , bhraShTapishAchiyAgeMda

peTTu vEdane tALalArade , bRuhaspatiya karesida
aruNa udayadalleddu , ouShadhakke pOdanu
krODharUpiya kaMDanu , kUDi mAtanADidanu
iruvudakke sthaLavu enage , ErpADAgabEkeMda

nUrupAda bhUmi koTTare , modalu pUje nimageMda
pAkapakva mADuvudakke , Ake bakuLe baMdaLu
bhAnukOTitEjanIga , bETeyADa horaTanu
maMDe bAchi doMDe hAki , duMDumallige muDidanu

hArapadaka koraLal hAki , phaNege tilakaviTTanu
aMgulige uMgura , raMgashRuMgAravAdavu
paTTenuTTu kacche kaTTi , pItAMbarava hoddanu
DhALu katti uDiyal sikki , jODU kAlalli meTTida

karadi vILyavannE piDidu , kannaDIya nODida
kanakabhUShaNavAda toDege , kamalanAbha toTTanu
kanakabhUShaNavAda kudure , kamalanAbha Erida
kariya hiMde hariyu baralu , kAMtarella kaMDaru

yAru illi baruvareMdu? dUra pOgireMdaru
nAriyariruva sthaLakke , yAva puruSha baruvanu?
EShTu hELe kELa kRuShNa , kudure muMde biTTanu
aShTU maMdirella sEri , peTTugaLanu hoDedaru

kallumaLeya karedarAga , kudure keLage bidditu
kEsha bicchi vAsudEva , shEShagirige baMdanu
paramAnna mADiddEne , uNNu bEga eMdaLu
amma enage anna bEDa , enna magana vairiyE

kaNNillAda daiva avaLa , nirmANava mADida
yAva dEsha yAvOLAke , enage pELu eMdaLu
nArAyaNana purake pOgi , rAmakRuShNara pUjisi
kuMjamaNiya koraLal hAki , kUsin koMkaLadettidA

dharaNidEvige kaNiya kELi , girige baMdu sErida
kAMtarella kUDikoMDu , Aga bakuLe baMdaLu
banniramma sadanakenuta , bahaLa mAtanADidaru
taMdetAyi baMdhubaLaga , honnu haNa uMTeMdaru

iShTu pariyalliddavage , kanye yAke dorakillA
doDDavaLige makkaLilla , matte maduve mADvevu
bRuhaspatIya karesida , lagnapatrike baresida
shukAchAryara karesida , maduve Ole baresida

vallabhEna karevudakke , kolhApurakke pOdaru
garuDan hegalanErikoMDu , bEga horaTubaMdaru
aShTavargavannu mADi , iShTa dEvara pUjisi
lakShmIsahita AkAsharAjana , paTTaNakke baMdaru

kanakabhUShaNavAda toDuge , kamalanAbha toTTanu
kanakabhUShaNavAda maMTapa , kamalanAbha Erida
kamalanABage kAMtimaNiya , kanyAdAnava mADida
kamalanAbha kAMte kaige , kaMkaNavannE kaTTida

shrInivAsa padmAvatige , mAMgalyavane kaTTida
shrInivAsana maduve nODe , strIyarellaru bannirE
padmAvatiya maduve nODe , muddu bAleyar bannirE
shaMkeyillade haNava suridu , vEMkaTEshana kaLuhida

lakShatappu ennalluMTu , pakShivAhana salahenna
kOTitappu ennalluMTu , kusumanAbha salahenna
shaMke illade varava koDuva , vEMkaTEsha salahenna
bhaktiyiMdali hEL kELdavarige , mukti koDuva hayavadana ||

jaya jaya shrInivAsanige , jaya jaya padmAvatige
olidaMtaha shrIharige , nitya shubhamaMgaLa
shEShAdrigirivAsa , shrIdEvi arasage
kalyANamUrtige , nityajayamaMgaLa ||

shrI kRuShNArpaNamastu ||

Leave a Reply

Your email address will not be published. Required fields are marked *

You might also like

error: Content is protected !!