Composer : Shri Prasannavenkata dasaru
| ಶ್ರೀ ಪ್ರಸನ್ನ ವೇಂಕಟ ದಾಸ ವಿರಚಿತ
ಶ್ರೀನಿವಾಸ ಕಳ್ಯಾಣ ||
೧. ಸರಸ್ವತಿ ಸ್ತುತಿ
ನಲಿದಾಡೇ ವಾಣಿ ಎನ್ನ ನಾಲಿಗೆ ಮೇಲೇ ||
ಏನೆಂದರಿಯದ ಅಜ್ಞಾನಿಯೇ ನಾನು
ಬಲು ಮೂಢನೇ ನಾನು ಎನ್ನ ಮಂಕುಮತಿಯನ್ನ
ಬಿಡಿಸಿ ಜ್ಞಾನ ಬುದ್ಧಿ ಕೊಟ್ಟು ||
ಎಷ್ಟು ವಿದ್ಯಕಭಿಮಾನಿಯೆ ನೀನು
ಬಲು ಜ್ಞಾನಿಯೇ ನಿನ್ನ ಬೇಡಿ
ಕೊಂಬೆನೆ ಬೇಗದಿಂದಲಿ ಬಂದು ||
ಪ್ರಸನ್ನ ವೇಂಕಟೇಶನ ಜಗದೀಶನ
ಮಹಿಮೆ ಪೇಳುವುದಕ್ಕೆ ಎನಗೀಗ
ವಾಕ್ ಶುದ್ಧಿಯನಿತ್ತು ||(ನಲಿದಾಡೆ)
——————————————————
೨. ಕೇಳಿ ಶೌನಕಾದಿಗಳೇ ಕೇಶವನ ಮಹಿಮೆ
ವಿವರಿಸಿ ಪೇಳುವೇನು ವಿಚಿತ್ರದ ಕಥೆಯ ||
ಒಂದು ದಿವಸ ಭೃಗು ಮುನಿಯು ಯೋಚಿಸಿದ
ಹರಿಯ ನೋಡಬೇಕೆಂದು ಆಗಲೆ ಹೊರಟ ||
ಪೊಗಳುತ ಬಂದನು ಭೃಗುಮುನಿ ತಾನು
ವೈಕುಂಠದಲಿ ಕಂಡ ವಾಸುದೇವನನ್ನು ||
ಶೇಷನ ಹಾಸಿಗೆ ಮೇಲೇ ಶ್ರೀಹರಿಯು
ಶ್ರೀದೇವಿ ಸಹಿತದಲಿ ಪವಡಿಸಿ ಇರಲು ||
ಕಂಡು ಕೋಪದಿ ಹರಿ ಹೃದಯದೋಳ್ ಒದಿಯೇ
ಬಿದ್ದ ಹರಿ ತಾನು ಎದ್ದು ಉಪಚರಿಸುತಲಿ ||
ಕೋಪಿಸಿ ಕೊಲ್ಹಾಪುರಕ್ಕೆ ತಾ ಬೇಗ
ಸತಿಯು ಪೋಗಲು ಹರಿ ಉದ್ದಕ್ಕೆ ಬಂದನು ||
ಹತ್ತು ಸಾವಿರ ವರುಷ ಹರಿ ಹುತ್ತದೊಳಿರಲು
ಉತ್ತಮವಾದ ಗೋವು ಕ್ಷೀರವನು ಕೊಡಲು ||
ಕಂಡು ಕೋಪದಿ ಗೊಲ್ಲ ಗೋವನ್ನ ಹೊಡಿಯೆ
ಆಗ ಯೋಚಿಸಿ ಹರಿ ಕೊಟ್ಟ ತನ್ ಶಿರವ ||
ಹರಿಯ ಶಿರದಿ ಕೋಲು ತಾಕಿ ಘಾಯ ರಕ್ತವು
ಸುರಿಯೇ ನೋಡಿದ ಗೊಲ್ಲ ಮೂರ್ಚಿತನಾದ ||
ಬಂದ ಚೋಳಗೆ ಶಾಪ ಕೊಟ್ಟು ಪ್ರಸನ್ನ
ವೇಂಕಟ ವಿಠಲ ತಾನು ಆಗ ಯೋಚಿಸಿದ ||೧|| ಕೇಳಿ…
—————————————————–
೩. ಯೋಚಿಸಿದನು ಹರಿ ತನ್ನ ತಲೆ ಘಾಯಕೌಷದವ
ಮಾಡ ಬೇಕೆನುತಲಿ ಕರಿಸಿದ ಬೃಹಸ್ಪತಿಯ ||
ತಲೆಘಾಯ ತಾಳಾಲಾರದೆ ತಕ್ಕ ಔಷದ ಹೇಳಿರೆಂದ
ಅಂದ ಮಾತನು ಕೇಳಿ ಗುರುದೇವ ಪೇಳುವನು ||
ಅರುಣ ಉದಯಕ್ಕೆದ್ದು ಹೋಗಿ ಅತ್ತಿ ಹಾಲನ್ನೆ ತಂದು
ತಲೆ ಘಾಯಕ್ ಹಾಕಲು ತಕ್ಕ ಔಷದವೆಂದ ||
ಅಂದ ಮಾತನು ಕೇಳಿ ಪ್ರಸನ್ನ ವೇಂಕಟ ವಿಠಲ ತಾನು
ಅಶ್ವಾ ರೂಢನಾಗಿ ಔಷದಕ್ ಹೊರಟನು ||೨||
—————————————————-
೪. ಬಂದನು ಶ್ರೀ ಹರಿಯು ನಾರಾಯಣ ಪುರಕ್ಕೆ
ಕಂಡನು ಕಾನನದಲ್ಲಿ ಕುಳ್ಳಿರುವಂಥ
ವರಾಹ ದೇವರ ಕಂಡು ದೊರೆ ವೇಂಕಟೇಶ ಪೇಳ್ವ ||
ಇರುವುದಕ್ಕಾಗಿ ಮೂರು ಹೆಜ್ಜೆಯ ಸ್ಥಳ
ಕೊಟ್ಟರೆ ನಿಮಗೆ ಮೊದಲು ಪೂಜೆಯು ಆಗಲೆಂದ ||
ಹರಿಯ ಸೇವೆಯ ಮಾಡಲು ಬಕುಳೆ ದೇವಿಯು ಬರಲು
ಪ್ರಸನ್ನ ವೇಂಕಟ ವಿಠಲ ಗಿರಿಗೆ ತಾನರಸನಾದ ||೩||
—————————————————
೫. ಬಂದ ಶ್ರೀ ವೇಂಕಟೇಶ ಬೇಟೆ ಮಾರ್ಗದಿಂದ
ಕಂಡನು ಪದ್ಮಾವತಿಯ ಕಾಮಿತ ವನದಲ್ಲಿ ||
ಚೋಳನು ಮಾಡಿದ ಘಾಯಕ್ಕೆ ಔಷದವ
ನೋಡಿ ಬರುವೆನೆಂದು ಯೋಚಿಸಿದನು ಹರಿಯು ||
ಅರುಣ ಉದಯಕ್ಕೆದ್ದು ಅಲಂಕಾರ ಮಾಡಿಕೊಂಡು
ಅಶ್ವರೂಢನಾಗಿ ಹೊರಟ್ಟನು ವೇಂಕ್ಟೇಶ ||
ಕರಿಯನಟ್ಟಿಸಿ ಕೊಂಡು ಹರಿಯು ತಾನ್ ಬರಲು
ಅಲ್ಲಿತಾ ಕಂಡನು ಅಂಗನೇ ಮಣಿಗಳ ||
ನಿಂತು ನೋಡಿದ ಶ್ರೀಶ ಮಂದಗಮನೆರಂಥವರ
ಹೀಗೆಂದು ಮನದಲ್ಲಿ ಪ್ರೇಮಿಸಿದ ಪದ್ಮಾವತಿಯ ||
ಶ್ರೀಶ ಪ್ರಸನ್ ವೇಂಕಟೇಶನು ಹರುಷದಲಿ
ಅವರಲ್ಲಿ ಬರುವದು ಅರಿತಳು ಪದ್ಮಾವತಿಯು ||೪||
——————————————————-
೬. ಬಾರೆ ಸಖಿ ನೋಡೆ ಇಲ್ಲಿ ಯಾರೆ ಬರುವನು
ಬಾರೆ ಇವನು ಯಾರೆ ಅನ್ಯ ಪುರುಷನು ಬರುವನು ||
ಅಂದ ಮಾತು ಕೇಳಿ ಮುದ್ದು ಮುಖದ ಬಾಲೆಯು
ಹರಿಯ ಎದುರಲ್ಲಿ ನಿಂತು ಯಾರೆನುತ ಕೇಳಿದರು ||
ಯಾರಯ್ಯ ನೀವು ರಾವುತರೆ ಇಲ್ಲಿ ಬಂದಿರಿ
ಇಲ್ಲಿ ಬಂದು ನಿಲ್ಲುವದಕ್ಕೆ ಏನು ಕಾರಣವೇನು ||
ಅರಸನ ಮಗಳು ಇರುವ ರಹಸ್ಯ ಸ್ಥಳದಲಿ
ಅನ್ಯ ಪುರುಷರು ನೀವು ಬರುವುದು ಉಚಿತವಲ್ಲ ||
ಅಂದ ಮಾತು ಕೇಳಿ ಹರಿಯು ಆಗ ಪೇಳುವ
ಬಾರೆ ಸಖಿ ನಿನ್ನ ಅರಸಿ ಯಾರು ಎನಗೆ ತೋರೆಂದನು ||
ಅಂದ ಮಾತು ಕೇಳಿ ಮುದ್ದು ಮುಖದ ಬಾಲೆಯು
ಬಂದು ನಿಂತು ಮಾತಾಡುವಳ್ ಪ್ರಸನ್ನ ವೇಂಕಟೇಶನಲ್ಲಿ ||೫||
——————————————————–
೭. ಎತ್ತ ಪೋಗುವಿರಿ ನೀವು ಇತ್ತ ಬಂದೆನ್ನೊಡನೆ
ಮಾತುಗಳಡುವುದು ನ್ಯಾಯವ ||
ಮಾತನಾಡುವವನು ಅಲ್ಲ ನಿಮ್ಮ ಕುಲದ ವಿವರವೆಲ್ಲ
ತಿಳಿಸು ನಿಮ್ಮ ಕುಲವು ಎನಗೆ ಪೇಲ್ವೆನು ಎನ್ನ ವಿವರವ ||
ಆಕಾಶ ರಾಯನ ಮಗಳು ನಾನು ಎನ್ನ ಹೆಸರು ಪದ್ಮಾವತಿಯು
ತಿಳಿಸು ನಿಮ್ಮ ಕುಲವು ಎನಗೆ ಪೇಳ್ವೆನು ಎನ್ನ ವಿವರವ ||
ಯಾದವ ಕುಲವು ನಾನು ಎನ್ನ ಹೆಸರು ವೇಂಕಟೇಶ
ತಂದೆ ವಸುದೇವ ತಾಯಿ ದೇವಕಿ ದೇವಿ
ಎನ್ನ ವಿವರವ ತಿಳಿದುಕೊ ||
ನಿಮ್ಮ ಕುಲವೇ ನಮ್ಮ ಕುಲವು ಇಂದಿಗೆ ಸರಿಹೊಂದಿತು
ಎನ್ನ ನೀನು ಮದುವೆಯನ್ನು ಮಾಡಿಕೊಳ್ಳೇ ಎಂದನು ||
ಅಂದ ಮಾತು ಕೇಳಿ ಮುದ್ದು ಮುಖದ ಬಾಲೆಯರೆಲ್ಲರು
ಬಹಳ ಭಯದಿ ಪ್ರಸನ್ನ ವೇಂಕಟೇಶನ ಹರಿಸುವರು ||೬||
———————————————————
೮. ಏನ್ ಹೇಳಲಿ ನಾನು ಅಂಗನೆ ಮಣಿಗಳಿಗೆ
ಬಂದ ಕೋಪಾವೆಷವ ||
ಹರಿಯೆಂದು ಅರಿಯದ್ ಹಾಂಗೆ ಅಂಗನೆಯರೆಲ್ಲರು
ಕಲ್ಲುಗಳೀಡಾಡಿದರು ಕೆಳಗೆ ಕುದುರೆ ಬಿದ್ದಿತು ||
ಅಶ್ವವು ಬಿದ್ದ ಕ್ಷಣದಿ ಹರಿಯು ಮಾಯವಾದನೆ
ಅಂಗನೆ ಮಣಿಯರು ಸೇರಿದರಂತಪುರವ ||
ಹರಿಯ ಶೋಕ ಸುಳಿವು ಕಂಡು ಬಕುಳೆ ಬಹಳ ಪ್ರೀತಿಯಲಿ
ಯಾಕೋ ಮಲಗಿದಿಯೋ ಪ್ರಸನ್ನ ವೇಂಕಟೇಶ ಪೇಳೆಲೋ ||೮||
——————————————————-
೯. ಯಾಕೋ ಇಷ್ಟು ಮಲಗಿದಿಯೋ
ಏಳೋ ಎನ್ನ ಸ್ವಾಮಿಯೇ ನೀ
ಯಾವ ವನಕ್ಕೇ ಪೋದಿಯೋ ನೀ
ಯಾರ ಕಂಡು ಮೋಹಿಸಿದಿಯೋ ||
ಕಾಡು ಹುಲಿಯು ಕರಡಿ ಮೃಗವು
ಬೇಟೆಯಾಡಿ ಬಳಳಿದಿಯೋ
ಬಿಸಿಲು ಘಾಳಿಯಿಂದ ನೀನು
ಬೆದರಿ ಮಲಗಿದಿಯೋ ||
ಅರುಣ ಉದಯಕ್ಕೆದ್ದು ನೀನು
ಯಾವ ವನಕ್ಕೆ ಪೋದಿಯೋ
ಯಾವ ನಾರಿ ಘಾಳಿ ಸೋಕಿ
ಯಾರ ಕಂಡು ಮೋಹಿಸಿದಿಯೋ ||
ಬಹಳ ಪ್ರೀತಿ ಬಣ್ಣಿಸುವ
ಬಕುಳೆ ಪಾದಕ್ಕೆರಗಿದ
ಕೇಳು ತಾಯಿ ಪೇಳ್ವೆನೆಂದ
ಪ್ರಸನ್ನ ವೇಂಕಟೇಶ ತಾನು ||
—————————————-
೧೦. ಕಂಡೇನಾ ಕಾಮಿನಿಯಾ ಕಾನನದಿ ||
ಅರುಣ ಉದಯಕ್ಕೆದ್ದು ನಾನು ಔಶದಕ್ಕೆ ಹೋದೆನು
ಅಲ್ಲಿ ಕಂಡೆ ಒಂದು ಕನ್ಯಾ ರತ್ನವನು ||
ಅಂಗನೇ ಮಣಿ ತನ್ನ ಸಂಗಾತರೊಡ ಕೂಡಿ
ಪುಷ್ಪ ವನದಲ್ಲಿ ಪುಷ್ಪವ ಕೊಯ್ದಿರಲು ||
ಅವಳ ಅಂದವನು ವರ್ಣಿಸಲಾರೆನಾ
ಹೇಗೆ ಪೇಳುವೆನೆಂದ ಪ್ರಸನ್ನ ವೇಂಕಟ ವಿಠಲ ||೧೦||
——————————————————–
೧೧. ಕಂಡೇನೇ ಕಾನನದಿ ಕಾಮಿನಿ ಮಣಿ ಸೌಂದರ್ಯ
ಅವಳ ತಂದು ಎನಗೆ ನೀ ಮದುವೆ ಮಾಡಿಸಬೇಕು ||
ನಾರಾಯಣಪುರ ದೊರೆ ಆಕಾಶರಾಯನಂತೆ
ಅವನ ಮಗಳು ಪದ್ಮಾವತಿಯ ಕಂಡೆ ನಾನು ||
ಪದ್ಮದಲುದಿಸಿದ ಪದ್ಮಾವತಿಯ ನಾನು ನೋಡಿ
ಬರುವುದಕ್ಕೆ ಒಂದು ಉಪಾಯ ಹೇಳುವೆ ನಾನು ||
ಏನು ಪೇಳೂವೆ ನಾನು ಅವಳ ಚೆಲುವಿಕೆಯ
ಹೇಳೀಥರವಲ್ಲ ವೆಂದ ಪ್ರಸನ್ನ ವೇಂಕಟ ವಿಠಲ ||
—————————————–
೧೨. ಕೇಳಮ್ಮ ಪೇಳುವೆನು ಮನದ ಅಭಿಪ್ರಾಯವ
ಆಕಾಶರಾಯನ ಮಗಳು ಪದ್ಮಾವತಿಯು
ಅವಳ ತಂದು ಎನಗೆ ಮದುವೆ ಮಾಡಿಸೆಂದನು ||
ನಿನ್ನ ಹೊರೆತು ಎನಗೆ ಅನ್ಯರೊಬ್ಬರಿಲ್ಲವೆ
ನಿನ್ನಿಂದಲಾಗಬೇಕು ಈಕಾರ್ಯವು ಎಂದನು ||
ಇತ್ತ ಬಾರೆಂಬೊ ಜನ ಸುತ್ತಿ ನೋಡಿದರಿಲ್ಲ
ಅನಾಥನು ನಾನು ಎನ್ನ ಆದರಿಸೆಂದನೂ ||
ಅಶ್ವವನ್ನು ತರಿಸಿದ ಮಾತೆಗೆ ಕೊಡಿಸಿದ
ಈಗಲೆ ಪೋಗಿ ನೀನು ಬೇಗ ಬಾ ಎಂದನು ||
ಅಂದ ಮಾತನು ಕೇಳಿ ಬಕುಳೆ ತಾನ್ ಪೋದಳು
ಆಗ ಪ್ರಸನ್ನ ವೇಂಕಟೇಶ ತಾನು ಯೋಚಿಸಿದ ||
——————————————————–
೧೩. ಪೋಗಿ ಬರುವೆ ನಾನು ನಾರಾಯಣ ಪುರಕ್ಕೇ
ಪೋಗಿ ಬರುವೆ ನಾನು ತಾಮಸ ಮಾಡದೇ
ಪದ್ಮಾವತಿಯ ಈಗ ನೋಡಿ ಬರುವುದಕ್ಕೆ ||
ಬ್ರಹ್ಮನ ಬರಹೇಳಿ ಶಿಶುವಾಗಿ ಆಗೆಂದು
ಆಲೋಚನೆಯ ಮಾಡಿ ತನ್ನ ಅಭಿಪ್ರಾಯ ಹೇಳಿ ||
ಮಾಯಾ ವೇಷದಿ ಪೋಗಿ ಮಾನಿನಿ ಮನಸನ್ನು ತಿಳಿದು
ಬರುವೇನೆಂದ ಪ್ರಸನ್ನ ವೇಂಕಟೇಶ ವಿಠಲ ||
———————————————-
೧೪. ಕೊರವಿ ವೇಷವ ಕೊಂಡನಾಗ, ಕೋಮಳಾಂಗ ವೇಂಕಟೇಶ
ಮುದ್ದು ಪದ್ಮಾವತಿಯ ಮದುವೆ ಮಾಡಿಕೊಳ್ಳ ಬೇಕುನುತ ||
ಪಟವಾಳಿ ಸೀರೆಯನುಟ್ಟು, ಕೂರೆ ಚೋಳಿಯನ್ನೆ ತೊಟ್ಟು
ಹವಳ ಸರವ ಕೊರಳಲ್ ಹಾಕಿ , ಕರದಿ ಬುಟ್ಟಿ ಕೋಲ ಕೊಂಡು ||
ಬ್ರಹ್ಮ ದೇವರ ಶಿಶು ಮಾಡಿ , ನಗುತ ವೇಂಕಟೇಶ ತಾನು
ಬೆನ್ನಿನೊಳಗೆ ಕಟ್ಟಿ ಕೊಂಡು, ನಡೆದ ನಾರಾಯಣ ಪುರಕ್ಕೆ ||
ಆಕಾಶನ ಮನೆಯ ಮುಂದೆ , ಅಲ್ಲಿ ಇಲ್ಲಿ ತಿತುಗುತಲಿ ಕೂಗೆ
ಕೊರವಿ ಕೂಗುವ ಧ್ವನಿ ಕೇಳಿ, ಧರಣಿ ಬಂದು ನೋಡೆ ||
ಬಾರೇ ಕೊರವಿ ಭಾಗ್ಯವತಿಯೇ, ಬಾರೇ ಎನ್ನ ಮಂದಿರಕ್ಕೆ
ಬಂದು ಎನ್ನ ಮಗಳ ನೋಡಿ , ವ್ಯಾಧಿ ಗುರಿಯ ತಿಳುಹಿಸಮ್ಮ ||
ಅಂದ ಮಾತನ ಕೇಳಿ ಕೊರವಿ ಪ್ರಸನ್ನ ವೇಂಕಟೇಶ
ನಗುತ ಬಂದು
ಧರಣಿ ದೇವಿ ಮಂದಿರದಲ್ಲಿ ಕುಳಿತ
ಶ್ರೀ ಪ್ರಸನ್ನ ವೇಂಕಟೇಶ ||೧೪||
———————————————————
೧೫. ಕರೆದು ತಾರೆಲೆ ಧರಣಿ ನಿನ್ನಯ ಮಗಳ
ಕರೆದು ತಾರೆಲೆ ಧರಣಿ ನಿನ್ನ ಮಗಳ ಕರವ ನೋಡಿ
ರೇಖೆ ಗುರಿಗಳಿಂದ ಪೇಳುವೆ ನಿಜಮುನ್ನ ||
ತಟ್ಟೆಯೊಳಗೆ ಆಣಿಮುತ್ತು ರತ್ನ ತಂದಿಡೆ
ಎನ್ನ ಕಂದಗೆ ಕ್ಷೀರ ಅನ್ನವ ನೀ ಕೊಡಿಸೆ ||
ನಿನ್ನ ಮಗಳ ಕರೆದು ತಂದು ಎನ್ನೆದುರಲಿ
ಕುಳ್ಳಿರಿಸೆಂದ ಪ್ರಸನ್ನ ವೇಂಕಟ ವಿಠಲ ||೧೫||
—————————————————
೧೬. ಕೇಳೆ ಧರಣಿ ನಿನ್ನ ಮಗಳಿಗೆ ಪೇಳ್ವೆ ಕುರಿಯನ್ನು
ತಂದು ನೀಡೇ ಎನಗೇ ನೀನು ಕಾಣಿಕೆಯನ್ನು ||
ಒಂದು ದಿವಸ ನಿನ್ನ ಮಗಳು ಹೂವಿನ ವನದಲ್ಲಿ ಇರಲು
ಹರಿಯು ಬರಲು ಕಂಡು ಆಗ ಕಾಂತೆ ಭಯದಲಿ ||
ಹರಿಯೆಂದರಿಯದೆ ನಿನ್ನ ಮಗಳು ಕಲ್ಲುಮಳೆ ಸುರಿದಳು
ಕುದುರೆ ಕೆಳಗೆ ಬೀಳಲವನು ಮಾಯವಾದನು ||
ಅಂದು ಮೊದಲು ಇವಳು ಹೀಗೆ ಕೃಷವು ಆದಳೇ
ಇದು ನಿಜವೇನೋ ಎಂದು ಕೇಳೇ ನಿನ್ನ ಮಗಳನೀಗಲೆ ||
ಅವನು ಶೆಷಗಿರಿಯವಾಸ ಲಕ್ಷ್ಮೀ ಪ್ರಿಯನೇ
ಇವಳ ಕೋರಿ ಬರುವ ನಾಳೆ ನಿನಗೆ ಅಳಿಯನಾಗುವ ||
ಹುಸಿಯಲ್ಲವೆ ಕೊರವಿ ಮಾತು ಸತ್ಯ ಕೇಳೆಲೆ
ಪ್ರಸನ್ನ ವೇಂಕಟೇಶಗಿವಳು ಸತಿಯು ಆವಳು ||೧೬||
—————————————————-
೧೭. ಸರಿಯೇನೆ ನಾ ಪೇಳ್ವದು ಸೌಂದರ್ಯ ಮಣಿಸಾರಲೇ
ಕಮಲದಲ್ ಉದಿಸಿದ ಕಾಮಿನಿಯೇ ನಿನ್ನ
ಕರದ ರೇಖೇಗಳನ್ನು ನೋಡುವೆನೆ
ಅಂದಿನ ದಿನದಲ್ಲಿ ಹೂವಿನ ವನದಲ್ಲಿ
ನಿಂತಿದ್ದು ನಿಜವಲ್ಲವೆ ಪದ್ಮಾವತಿ ||
ಉನ್ನತ ಪುರುಷನು ತೇಜಿನೇರಿ
ನಿನ್ನಲಿ ಬರಲು ನೀ ಭಯದಿಂದಲಿ
ಕಲ್ಮಳೆ ಸುರಿಯಲು ಕುದುರೆಯು ಕೆಳಗೆ
ಬಿದ್ದಿದ್ದು ನಿಜವಲ್ಲವೆ ಪದ್ಮಾವತಿ ||
ಆತನ ಮೇಲೆ ನೀ ಪ್ರೀತಿಯಿಂದ
ಈಥರ ಕ್ಲೇಷವಾಗಿ ಬಿದ್ದಿರುವಿ
ಆತನು ನಿನಗೀಗ ಪತಿಯಾಗುವನು
ಹುಸಿಯಲ್ಲ ಎನ್ನ ಮಾತು ಸೌಂದರ್ಯಮಣಿ ||
ಆತನು ನಿನ್ನ ಮೇಲ್ ಆಶೆಯಿಂದ
ನಿನ್ನನ್ನು ಕೋರಿ ಬರುವನೀಗಾ
ಯೋಚಿಸ ಬೇಡ ಕೊರವಿ ಹೇಲಿದ ಮಾತು
ನಿಜವೆಂದು ನಂಬು ನೀನು ಪದ್ಮಾವತಿ ||
ಕೊರವಿಯ ಮಾತನ್ನು ಕೇಳಿದಳು
ಕೊರವಿಗೆ ವಂದನೆ ಮಾಡಿದಳು
ಪ್ರಸನ್ನ ವೇಂಕಟ ವಿಠಲನ ತಾನು
ಮನದಲಿ ಧ್ಯಾನಿಸುವಳು ಪದ್ಮಾವತಿ ||೧೭||
—————————————————-
೧೮. ವೇಂಕಟೇಶ ಸರಿಯಾರು ಪದ್ಮಿನಿ ಕೇಳೇ
ಈ ಜಗದಲ್ಲಿ ಇನ್ಯಾರನ್ನು ನಾಕಾಣೆ ||
ದೇವಕಿ ವಸುದೇವರ ಕಂದ
ರಾಮಚಂದ್ರ ನಾಮದ ಸರ್ವೇಶ
ಬಂದನು ಬೇಟೆ ಮಾರ್ಗದಿಂದ
ನಿನ್ನ ಕಂಡನು ಕಾಮಿತ ವನದಲ್ಲಿ ||
ಅಂದು ಮೊದಲು ನಿನ್ನ ಮೇಲೇ ಬಹಳ
ಆಶೆಯಿಂದ ಇರುವನು ಕೇಳೇ
ಮೋಸ ವಲ್ಲವೆ ಎನ್ನ ಮಾತು
ನಿಜವೆಂದು ನಂಬು ನೀನು ||
ಶೆಷಾದ್ರಿ ಗಿರಿಯೊಳಗೆ ವಾಸ
ತನ್ನ ನಂಬಿದ ಬಕ್ತರಿಗವ ದಾಸ
ಬೇಡಿದ ವರವ ಕೊಡುವ ಶ್ರೀಶ
ಬೆಟ್ಟದೊಡೆಯ ಪ್ರಸನ್ನ ವೇಂಕಟೇಷ ||೧೮||
———————————————————
೧೯. ಪೋಗಿ ಬರುವೆ ನಾನು ಪದ್ಮಾವತಿಯೇ
ಪೋಗಿ ಬರುವೆ ನಾನು
ಪೋಗಿ ಬೇಗನೆ ಶೇಷಗಿರಿಯ ಸೇರಿ ಹರಿಗೆ ನಿನ್ನ
ಸುದ್ದಿಯನೆಲ್ಲ ತಿಳಿದು ಪೇಳುವೆನಲ್ಲಿ ||
ಅಂಗನೆಮಣಿ ನಿನ್ನ ಮನದಲ್ಲಿ ಇರುವಂಥ
ಅಂತರಂಗದ ರಹಸ್ಯ ತಿಳಿದು ಪೇಲಿದ್ದಕ್ಕಾಗಿ
ನಿನ್ನ ಕೊರಳಲ್ಲಿರುವ ಚಂದ್ರ ಹಾರವ ಕೊಟ್ಟು
ಕಳುಹಿಸು ಹೊತ್ತಾಯಿತು ಯೋಚಿಸ ಬೇಡ ನೀನು ||
ನಿನ್ನ ಮೊಗದ ಸೊಗಸು ನೋಡೆ ಕಳ್ಯಾಣ ವೇಳೆ
ಕೂಡಿ ಬಂದಿರುವಂತೆ ತೋರುವದೆನಗೀಗ
ಎರಡನೆ ಶುಕ್ರವಾರ ದಶಮಿಯು ನಿನಗೆ ಲಗ್ನ
ವಾಗೋದು ಕೇಳೇ ಹುಸಿಯಲ್ಲ ಎನ್ನ ಮಾತು ||
ನನ್ನ ಕಂದನ ಆಣೆ ಎನುತ ಭಾಷ್ಯವ ಕೊಟ್ಟು
ಪ್ರಸನ್ನ ವೇಂಕಟವಿಠಲ ಶೇಷಗಿರಿಗೆ ಹೊರಟಾ ||೧೯||
—————————————————-
೨೦. ಪೋಗಿ ಬರುವೆ ಧರಣಿ ಅಪ್ಪಣೆ ಕೊಡು ತಾಯೇ
ಪೋಗಿ ಬರುವೆ ನಾನು ಹೇಳಿದ ಕುರಿಯೆಲ್ಲ
ನಿಜವೆಂದು ತಿಳಿದುಕೊಳ್ಳೆ
ಇನ್ನೊಂದು ರಹಸ್ಯ ಪೇಳುವೆ ||
ಹೊಟ್ಟೆಯಿಂದಲಿ ಈ ಬಾಲೇ
ಹುಟ್ಟಿ ಬಂದವಳು ಅಲ್ಲ
ಸೃಷ್ಟಿ ಮೇಲೆ ದೊರಕಿದಳೆ ||
ಇವಳ ಹರಿಗರ್ಪಿಸಿ ಅಂದು ಬಂದ ಕೇಶವಗೆ
ಮಗಳ ಕೊಡದಿದ್ದರೆ
ಇವಳ ಪ್ರಾಣ ಉಳಿಯಲಾರದು ||
ಎಂದೆನುತ ಹೇಳಿ ಪ್ರಸನ್ನ ವೇಂಕಟ ವಿಠಲ ಸೇರಿದನು
ಶೇಷಗಿರಿಗೆ ಆಸಮಯದಲಿ ||
———————————————————
೨೧. ಬಂದಳು ಬಕುಳೆಯು ಆಕಾಶ ರಾಜನ ಮಂದಿರಕ್ಕೆ
ಕಂಡಳು ಧರಣಿ ದೇವಿ ಬಣ್ಣಿಸಿ ಕರೆವಳು ||
ಕುಂದಣದ ಪೀಠವನಿರಿಸಿ ಕುಳ್ಳಿರಿಸಿದಳು
ಕುಶಲ ಪ್ರಶ್ನೆಗಳಿಂದ
ಕೇಳ್ವಳು ಧರಣಿಯು ಯಾವೂರು ಯಾವದೇಶ
ಏನು ಕಾರ್ಯವು ಇಲ್ಲಿ ||
ಬಹಳ ಪರವಶದಿಂದ ಬಂದಿರಿ ಎಂದಳು
ಅಂದ ಮಾತನು ಕೇಳಿ ಬಕುಳೆ ತಾ
ಹರುಷದಲಿ ಅವಳ ಕುಲ ಗೋತ್ರವೆಲ್ಲ
ವಿವರಿಸಿ ಹೇಳಿದಳು ||
ಬಕುಳೆ ಮಾತನ್ನು ಕೇಳಿ ಧರಣಿ ತಾ
ಹರುಷದಿಂದ ಪ್ರಸನ್ನ ವೇಂಕಟೇಶ ವಿಠಲನ ಚರಿತ್ರೆಯ ಕೇಳ್ವಳು ||೨೧||
—————————————————
೨೨. ಪೇಳುವೆನು ಕೇಳೇ ಧರಣಿ ವಿವರಿಸಿ ನಾನು
ತಂದೆ ವಸುದೇವನಂತೆ ತಾಯಿ ದೇವಕಿಯಂತೆ
ಬಂದು ಪಾಂಡವರಂತೆ ಭಗಿನಿ
ಸುಬದ್ರೆ ಬಲರಾಮನಂತೆ ||
ಯಾದವ ಕುಲದವನು ಗೋತ್ರ ವಶಿಷ್ಟವಂತೆ
ಹತ್ತು ಮೂರ್ಲೋಕವನ್ನು ಉದರದೊಳಿಟ್ಟು ರಕ್ಷಿಸುವನು ||
ಅವನ ಹೃದಯದಲ್ಲಿ ಶ್ರೀಲಕ್ಷ್ಮೀ ವಾಸವಂತೆ
ಪ್ರಸನ್ನ ವೇಂಕಟ ವಿಠಲನ್ನ ನಿನ್ನ ಸುತೆ ಒಪ್ಪಿದಳು ||೨೨||
—————————————————-
೨೩. ಅಂದ ಮಾತನು ಕೇಳಿ ಮಂದಗಮನೆ ಧರಣೀ
ಪತಿ ಗಗನರಾಯನಿಗೆ ಪೇಳ್ವಳು ||
ಅಂದು ಕೊರವಿ ಬಂದು ಹೇಳಿದ ಕುರಿಯೆಲ್ಲ
ಇಂದಿಗೆ ನಿಜವಾಯಿತು ಕೇಳಿರೆನ್ನ ಮಾತನು
ಮುದ್ದು ಪದ್ಮಾವತಿ ಕಾನನದಲಿ ಕಂಡ
ಕಲಿಯುಗ ಪುರುಷನಿಗೆ ಮಗಳ ಕೊಡಬೇಕೆಂದು ||
ಆತನ ತಾಯಿ ಬಂದಿರುವಳು ನಾತ ವರುಷ ಇಪ್ಪತ್ತೈದು
ಗೋತ್ರವು ವಶಿಷ್ಟವಂತೆ ಸಿರಿದೇವಿ ಅರಸನಂತೆ
ಹೆಸರು ಪ್ರಸನ್ನ ವೇಂಕಟನಂತೆ ತಂದೆ ವಸುದೇವನಂತೆ
ತಾಯಿ ದೇವಕಿಯಂತೆ ಯಾದವ ಕುಲವಂತೆ ||
ವಾಸ ಶೇಷಗಿರಿಯಂತೆ ಪದ್ಮಾವತಿಯ ವರ
ಒಪ್ಪಿದನಂತೆ ನಾತ ||
————————————————–
೨೪. ಮಾನಿನಿ ಮಾತನು ಕೇಳಿದ – ಆಕಾಶರಾಯ ||
ಮಾನಿನಿ ಮಾತನು ಕೇಳಿ ಮನದಿ ಸಂತೋಷದಿ
ಮಗಳಭಿಪ್ರಾಯವಾ ತಿಳಿದು ಪೇಳುವೆನೆಂದಾ ||
ಮುದ್ದು ಪದ್ಮಾವಯತಿಯನೆತ್ತಿ ತೊಡೆಯಲಿಟ್ಟು
ಕಾಂತಾಮಣಿ ನಿನಗೆ ಯಾರು ಪತಿಯಾಗ ಬೇಕೆಂದು ಕೇಳಿದ ||
ಈರೇಳು ಲೋಕವ ಹೃದಯದೊಳಗೆ ಇಟ್ಟು
ಆದರಿಸುವ ಹರಿ ನಿನ್ನ ಅಪೇಕ್ಷಿಸಿರುವನಂತೆ ||
ಮುದ್ದು ಕೂಸಮ್ಮ ನಿನ್ನನು ಸೃಷ್ಟಿಗೊಡೇಯನಿಗೆ
ಕನ್ಯಾದಾನವ ಮಾಡಿ ಧನ್ಯನಾಗುವೆನೆಂದ ||
ಮುದ್ದು ಪದ್ಮಾವತಿಯು ತಂದೆ ಮಾತನು ಕೇಳಿ
ಪ್ರಸನ್ನ ವೇಂಕಟೇಶನಿಗೆ ಅರ್ಪಿತ ಮಾಡಿಸೇಂದಳು ||೨೪||
————————————————–
೨೫. ಬೇಗ ಕರಿಸಿದ ಗುರುಗಳ ಆಕಾಶರಾಯ ||
ಬೇಗ ಕರಿಸಿ ಗುರುಗಳ ಲಗ್ನ ಪತ್ರಿಕೆಯನು ಬರಿಸಿ
ಬಕುಳೆ ಕೈಯಲಿ ಕೊಡಿಸಿ ಉಪಚರಿಸಿ ಕಳುಹಿಸಿದ ||
ಕೊಟ್ಟ ಪತ್ರಿಕೆ ಕೊಂಡು ಬಕುಳೆ ತಾ ಬೇಗ ಹೊರಟು
ಶೇಷಗಿರಿಗೆ ಬಂದು ಹರಿಗೆ ಸಮರ್ಪಿಸಿದಳು ||
ಬಕುಳೆ ತಂದ ಪತ್ರಿಕೆಯ ನೋಡಿ ಓದಿ ಕೊಂಡ ಹರಿಯು
ಪ್ರಸನ್ನ ವೇಂಕಟವಿಠ್ಠಲ ಆಗತಾನು ಯೋಚಿಸಿದನು ||೨೫||
—————————————————
೨೬. ಮಾತೆಯೊಡನೆ ಹರಿ ಪ್ರೀತಿಯಿಂದಲಿ ಕುಳಿತು
ಆಲೊಚನೆಯ ಮಾಡಿದ
ಅಮ್ಮಾ ಕೇಳೆ ಎನ್ನೊಡಲನುಬ್ಬುಸವ
ಉಸುರುವದಕ್ಕೆ ಎನಗೆ ಒಬ್ಬರಿಲ್ಲವೇ ಮಾತೆ ||
ಕೈಯಲ್ಲಿ ಕಾಸಿಲ್ಲ ಸಾಲ ಕೊಡುವರಿಲ್ಲ
ಅನಾಥ ನಾನೆನುತ ಆದರಿಸುವರಿಲ್ಲ
ಪ್ರೀತಿಯ ಲಕ್ಷ್ಮೀಯು ಎನ್ನ ಮೇಲೇ ಕೋಪದಿ
ಕೊಲ್ಹಾಪುರಕ್ಕೆ ತಾ ಪೋಗಿರುವಳಮ್ಮ ||
ಗಗನ ರಾಯನ ಮಗಳ ಮದಿವೆಯು ನಡೆಯುವದು
ಬಹಳ ಕಷ್ಟವು ಕೇಳೇ
ಮುಂದೊಂದು ಯೋಚನೆ ಮಾಡದೆ ನಾನೀಗ
ಹೇಸಿಗೆಯಾಯಿತು ಬದುಕು ಯೋಚಿಸಿ ಫಲವೇನು ||
ಬಹಳ ಚಿಂತೆಯಿಂದ ಮಾತನಾಡಿದನಾಗ
ಬಹಳ ಚಿಂತೆಯಿಂದ ಮಾತನಾಡಿದನಾಗ
ಕೊಲ್ಹಾಪುರಕ್ ಹೋಗಿ ಲಕ್ಷ್ಮಿಯ ಕರೆತಂದರೆ
ಸಫಲವಾಗುವದೆಂದ ಪ್ರಸನ್ನ ವೇಂಕಟ ವಿಠಲ ||೨೬||
—————————————————
೨೭. ಸಾರಿ ಬಂದನು ಹರನು ಪತ್ರಿಕೆ ನೋಡಿ
ಹಾರಿ ಬಂದನು ಬ್ರಹ್ಮನು ||
ಬರೆದ ಪತ್ರಿಕೆಯ ನೋಡಿ ಬ್ರಹ್ಮ ರುದ್ರರು
ಹರುಷದಿಂದ ಅಷ್ಟ ದಿಕ್ಕಿಳುಲ್ಲ ಜನರಾ
ವಿಸಿಷ್ಟ ಬಾಂಧವರ ಕರೆದು ಕೊಂಡು ||
ಹಿಂಡು ಹಿಂಡಾಗಿ ಜನರು
ಬರುವದು ಕಂಡು ಹರಿತಾ
ಹರುಷದಿಂದ ಬಂದವರ
ಎದುರುಕೊಂಡು ಉಪಚರಿಸಿದನು ||
ಬಿಣ್ಣಾಣ ಮಾತುಗಳಿಂದ ಕೇಳಿರೆನ್ನ ಅಭಿಪ್ರಾಯ
ಪೇಳುವೆನೆಂದ ಹರಿಯು
ಎನ್ನ ಮೇಲೇ ಕೋಪದಿ ಲಕ್ಷ್ಮೀ
ಕೊಲ್ಹಾಪುರಕ್ಕೆ ಪೋದಳಮ್ಮಾ
ಪೋಗಿ ಶಾಂತ ಮಾಡಿ ಕರೆದು
ತರುವರ್ ಯಾರಿಲ್ಲವೇ ||
ಗಗನ ರಾಯನ ಮಗಳ ಮೇಲೇ ಪ್ರೀತಿಯಿಂದಲಿ
ಲಗ್ನ ಇಚ್ಚೆಯನು ಕೊಂಡೆ ನಾನು
ಕೈಯಲ್ಲಿ ಕಾಸಿಲ್ಲ ಸಾಲ ಕೊಡುವರಿಲ್ಲ
ಅನಾಥ ನಾನೆಂದು ಆದರಿಸುವರಿಲ್ಲ ||
ಅಂದ ಮತನ್ನೆ ಕೇಳಿ ಬ್ರಹ್ಮ ರುದ್ರ ದೇವರು
ಎಲ್ಲ ಆಗಲೆ ಪೇಳ್ವರು
ಎಷ್ಟು ಜಾಲಗಾರನು ಎಷ್ಟು ಬಿಣ್ಣಾಣನು
ಕಪಟ ನಾಟಕ ಸ್ವಾಮಿ ಪ್ರಸನ್ನ ವೇಂಕಟ ವಿಠಲ ||೨೭||
—————————————————-
೨೮. ಏನ್ ಹೇಳಲಿ ಇನ್ನು ಆನಂದ ರೂಪ ನಾಡಿದ ಮಾತಿಗೆ
ಹದಿನಾಲ್ಕು ಲೋಕವನ್ನು ಆಳುವಂಥ ದೇವ
ಅನಾಥನೆಂಬುವದು ಏನು ಆಶ್ಚರ್ಯವೊ
ಕುಕ್ಷಿಯೊಳಗೆ ಜಗವ ಬಚ್ಚಿಟ್ಟವ ನೀನು
ಅನಾಥನೆಂಬುವದು ಕೇಳಲಾಸ್ಚರ್ಯವೊ
ಭಾನುವನ್ನು ಕಳುಹಿಸಿ ಲಕ್ಷ್ಮಿಯ ಕರೆತಂದು
ಪ್ರಸನ್ನ ವೇಂಕಟೇಶ ತಾನು ಪಯಣವಾದನು ||೨೮||
——————————————-
೨೯. ಬಂದಾನು ಶ್ರೀ ಹರಿಯು ನಾರಾಯಣ ಪುರಕ್ಕೆ
ಬಂದಾನು ಶ್ರೀ ಹರಿಯು
ಬಂದಾನು ಶ್ರೀ ಹರಿ ಇಂದಿರೆ ಸಹಿತವಾಗಿ
ಬ್ರಹ್ಮ ರುದ್ರರು ಸೂರ್ಯ ಚಂದ್ರರಿಂದೊಡಗೂಡಿ
ಬಂದ ಹರಿಯು ಕಂಡು ಗಗನ ರಾಯನು ಬೇಗ
ಧರಣಿ ದೇವಿಯ ಸಹಿತ ಬಂದು ಎದುರು ಗೊಂಡಾ
ತಾಳ ಮೇಳವ ದಿವ್ಯ ನಾದಸ್ವರಗಳಿಂಡ – ಪಾದ
ಪೂಜೆಯ ಮಾಡೀ ಮನೆಗೆ ಕರೆದು ತಂದ ||
ಹೊಳೆವ ಸಿಂಹಾಸನದಿ ಹರಿಯ ಕುಳ್ಳಿರಿಸಿ
ಹರಿದ್ರಾ ಕುಂಕುಮ ಗಂಧದಿಂದ ಪೂಜಿಸುವನು
ಮಾಣಿಕ್ಯ ಮಕುಟವು ರತ್ನದ ಆಭರಣವು ಶಾಲಗ್ರಾಮದ ಸರ
ಹರಿಗೆ ಸಮರ್ಪಿಸಿದ ವರ ಪೂಜೆಯನ್ನು ಮಾಡಿ
ಪರಮ ಸಂತೋಷದಿ ಪದ್ಮವತಿಯ ಕನ್ಯಾ ದಾನವ ಮಾಡುವೆನೆಂದ ||
————————————————
೩೦. ಬೇಗ ಹೊರಟಾ ಯೋಗಿ ವೇಷದಿಂದ ಶ್ರೀ ಹರಿ
ಕಾಶಿಯಾತ್ರೆಯನ್ನು ಮಾಡಿ ಬರುವೆನೆಂದನು ಶ್ರೀ ಹರಿ ||
ಕಾವಿ ವಸ್ತ್ರ ಉಟ್ಟು ಕರದಿ ಕೋಲ ಪಿಡಿದನೇ
ಕರ್ಣ ಕುಂಡಲ ಹೊಳೆವ ಪಾದ ರಕ್ಷೆ ಧರಿಸಿದಾ
ಅಡಿಗಡಿಗೆ ಬಿಡಿಮಲ್ಲಿಗೆ ಉದುರಿ ಬೀಳುತ್ತಾ
ನಡೆದನು ನಾರಾಯಣ ಪುರದ ರಾಜಬೀದಿಯಲಿ ||
ಕಂಡು ಗಗನರಾಯ ಧರಣಿದೇವಿ ಸಹಿತಲಿ
ಬಂದು ಹರಿಯ ಪಾದಕ್ಕೆರಗಿ ಬೇಡಿಕೊಂಡರೂ
ಮುದ್ದು ಪದ್ಮಾವತಿಯ ಕೊಟ್ಟು ಮದುವೆ ನಡಿಸುವೆ
ಕರೆದು ತಂದರಾಗ ಪ್ರಸನ್ನ ವೇಂಕಟೇಶನನು ||೩೦||
———————————————–
೩೧. ನಗುತ ನಗುತ ವೇಂಕಟೇಶ ಪದ್ಮಾವತಿಗೆ
ಮಾಂಗಲ್ಯವ ಕಟ್ಟಿದನೇ ||
ನಗುತ ನಗುತ ವೇಂಕಟೇಶ ಮಾಂಗಲ್ಯವ ಕಟ್ಟಿದನೆ
ವೇಂಕಟೇಶ ಪದ್ಮಾವತಿಗೆ ಹಾಸ್ಯದಿಂದ ಹೇಳುವನು ||
ಮುದ್ದು ಪದ್ಮಾವತಿಯೇ ನೀನು ಸಖಿಯರೊಡನೆ ಕೂಡಿಕೊಂಡು
ಕಾನನದಲ್ಲಿ ನನ್ನ ಕಂಡು ಕಲ್ಲು ಬಚ್ಚಿಟ್ಟು ಬಡಿದಿಯಲ್ಲೇ ||
ಕಲ್ಲು ಬೀಸಿ ನಿನ್ನ ಕರವು ಬಹಳ ನೊಂದಿತೇನೆ ಎಂದ
ಕಲ್ಲು ಪೆಟ್ಟು ತಿಂದ ಕಳ್ಳ ನಿನ್ನ ಕರದಿ ಕಂಕಣ ಕಟ್ಟಿದೆ ||
ಬಹಳ ಚಾತುರ್ಯದಿ ನೀನು ಬಂದವನ ಕೋರಿದಿ
ಮಾಯ ಕೊರವಿ ಮಾತ ಕೇಳಿ ಮೋಸ ಹೋದಿಯಲ್ಲೆ ನೀನು ||
ರಾಯನ ಮಗಳು ಎಂಬೋ ಗರ್ವದಿಂದ ನೀನು ಎನ್ನ
ವಿವರ್ತನೆಯನ್ನು ಮಾಡಿ ಎನ್ನ ಅಶ್ವವ ತಡದಿಯಲ್ಲೆ
ಬೇಡ ಎಂದು ಅಡ್ಡಬಿದ್ದರು ಮುಂದೆ ನಾನು
ಬಂದು ನಿನಗೆ ಮಾಂಗಲ್ಯವ ಕಟ್ಟಿದೆನೆಂದ
ಪ್ರಸನ್ನ ವೇಂಕಟೇಶ ನಗುತ ||
———————————————–
೩೨. ಬೇಡ ಸ್ವಾಮಿ ಎನ್ನ ಮೇಲೇ ಬಹಳ ಕೋಪವು
ನಾ ಮಾಡಿದ ತಪ್ಪುಗಳನು ಮನ್ನಿಸೆಂದಳು ||
ಮಚ್ಚ ಕೂರ್ಮ ವರಹ ಸಿಂಹ ಮಹಿಮೆ ಅರಿಯದೆ
ತುಚ್ಚ ಬುದ್ಧಿಯಿಂದ ನಾನು ಹುಚ್ಚಳಾದೆನು
ವರಹನಾಗಿ ಧರಣಿಯನ್ನು ತಂದ ಹರಿಯೇ ನಾ
ಅರಿಯದ್ ಹಾಂಗೆ ಮಾಡಿದ್ದನ್ನು ಕ್ಷಮಿಸು ಎಂದಳು ||
ಕಂದ ಕರಿಯೆ ಕಂಬದಿಂದ ಬಂದು ಸಲಹಿದಿ
ಬಲಿಯ ವಂಚಿಸಿ ದಾನ ಬೇಡಿ ಪಾತಾಳಕೊತ್ತಿ ನೀ
ಪಿತನ ವಾಕ್ಯ ಕೇಳಿ ಮಾತೆ ಶಿರವ ತರಿದಿಯೋ
ನಾರಿ ಚೋರನ ಕೊಂದು ಜಗದಿ ಪ್ರಖ್ಯಾತಿ ಪಡದಿಯೋ ||
ಮಾನಿನೀಯ ಮೊರೆಯ ಕೇಳಿ ಮಾನ ಕಾಯ್ದಿಯೋ
ಉತ್ತಮಾಂಗನೇಯ ವ್ರತವ ಭಂಗ ಮಾಡ್ದಿಯೋ
ಕಲ್ಕಿ ಕರುಣ ಸಲಹಬೇಕು ನಿನ್ನ ನಂಬಿದೆ
ಎನ್ನ ಪೊರೆಯಬೇಕು ಪ್ರಸನ್ನ ವೇಂಕಟೇಶನೇ ||
——————————————–
೩೩. ಏನು ಧನ್ಯಳೇ ನಾನು ಎಷ್ಟು ಪುಣ್ಯ ನಾ ಮಾಡಿದೇ
ಸೃಷ್ಟಿಗೊಡೆಯ ವೇಂಕಟೇಶ ಎನಗೆ ಅಳಿಯನಾದನೇ ||
ಮಗಳಲ್ಲವೆ ಇವಳು ಮಹಾಲಕ್ಷ್ಮೀ ದೇವಿಯೇ ಎನ್ನ
ಕುಲವನು ಇವಳು ಪವಿತ್ರ ಮಾಡಿದಲಮ್ಮ ||
ಎಷ್ಟು ತಪಸ್ ಮಾಡಿದರು ಹರಿಯ ದರುಶನ ದೊರಕದು
ನಮ್ಮ ಸುದತಿಗೋಸ್ಕರದಿಂದ ಸುಲಭದಿಂದಲಿ ನಮಗೊಲಿದ ||
ಮುದ್ದು ಪದ್ಮಾವತಿಗೂ ಪ್ರಸನ್ನ ವೇಂಕಟೇಶನಿಗೂ
ಮುತ್ತಿನಾರತಿ ಎತ್ತಿ ಜಯ ಜಯ ಎಂದು ಪಾಡಿದರು ||
—————————————————-
೩೪. ಜಯ ಜಯ ಜಯ ವೇಂಕಟೇಶ ಜಯತು ಪದ್ಮಾವತಿಗೆ
ಒಲಿದಂಥ ಶ್ರೀ ಹರಿಗೆ ನಿತ್ಯ ಜಯ ಮಂಗಳಮ್ ||
ಕಂತೆಯ ಕರದಲ್ಲಿ ಕಲ್ಲು ಪೆಟ್ಟು ತಿಂದವಗೆ
ಲಜ್ಜೆ ಇಲ್ಲದವಗೆ ಮೂರ್ಜಗದೊಡೆಯ ಶ್ರೀ ಹರಿಗೆ ||
ಸೃಷ್ಟಿಗೊಡೆಯ ವೇಂಕಟೇಶಗೆ ಸಿರಿದೇವಿ ಅರಸಗೆ
ಕಳ್ಯಾಣ ಮೂರುತಿಗೆ ನಿತ್ಯ ಜಯ ಮಂಗಳಮ್ ||
ಕಲಿಯುಗದಲಿ ಧರಣಿ ಕನ್ಯೆ ಕಾಂತೆಗೆ ಒಲಿದವಗೆ
ಪ್ರಖ್ಯಾತಿವಂತೆಗೆ ಪ್ರಸನ್ನ ವೇಂಕಟೇಷನಿಗೆ ||
——————————————–
|| shree prasanna vEMkaTa dAsa virachita
shreenivAsa kaLyANa ||
1. saraswati stuti
nalidADE vANi enna nAlige mElE ||
EneMdariyada aj~jAniyE nAnu
balu mooDhanE nAnu enna maMkumatiyanna
biDisi j~jAna buddhi koTTu ||
eShTu vidyakabhimAniye neenu
balu j~jAniyE ninna bEDi
koMbene bEgadiMdali baMdu ||
prasanna vEMkaTEshana jagadeeshana
mahime pELuvudakke enageega
vaak shuddhiyanittu ||(nalidADe)
——————————————————
2. kELi shounakAdigaLE kEshavana mahime
vivarisi pELuvEnu vichitrada katheya ||
oMdu divasa bhRugu muniyu yOchisida
hariya nODabEkeMdu Agale horaTa ||
pogaLuta baMdanu bhRugumuni tAnu
vaikuMThadali kaMDa vAsudEvanannu ||
shEShana hAsige mElE shreehariyu
shreedEvi sahitadali pavaDisi iralu ||
kaMDu kOpadi hari hRudayadOL odiyE
bidda hari tAnu eddu upacharisutali ||
kOpisi kolhApurakke tA bEga
satiyu pOgalu hari uddakke baMdanu ||
hattu sAvira varuSha hari huttadoLiralu
uttamavaada gOvu kSheeravanu koDalu ||
kaMDu kOpadi golla gOvanna hoDiye
Aga yOchisi hari koTTa tan shirava ||
hariya shiradi kOlu tAki ghAya raktavu
suriyE nODida golla moorchitanaada ||
baMda chOLage shApa koTTu prasanna
vEMkaTa viThala tAnu Aga yOchisida ||1|| kELi…
—————————————————–
3. yOchisidanu hari tanna tale ghaayakouShadava
mADa bEkenutali karisida bRuhaspatiya ||
taleghAya tALAlArade takka ouShada hELireMda
aMda mAtanu kELi gurudEva pELuvanu ||
aruNa udayakkeddu hOgi atti hAlanne taMdu
tale ghAyak hAkalu takka ouShadaveMda ||
aMda mAtanu kELi prasanna vEMkaTa viThala tAnu
ashvA rUDhanAgi ouShadak horaTanu ||2||
—————————————————-
4. baMdanu shree hariyu nArAyaNa purakke
kaMDanu kAnanadalli kuLLiruvaMtha
varAha dEvara kaMDu dore vEMkaTEsha pELva ||
iruvudakkAgi mooru hejjeya sthaLa
koTTare nimage modalu poojeyu AgaleMda ||
hariya sEveya mADalu bakuLe dEviyu baralu
prasanna vEMkaTa viThala girige tAnarasanAda ||3||
—————————————————
5. baMda shree vEMkaTEsha bETe mArgadiMda
kaMDanu padmAvatiya kAmita vanadalli ||
chOLanu mADida ghAyakke ouShadava
nODi baruveneMdu yOchisidanu hariyu ||
aruNa udayakkeddu alaMkAra mADikoMDu
ashvarUDhanAgi horaTTanu vEMkTEsha ||
kariyanaTTisi koMDu hariyu taan baralu
allitaa kaMDanu aMganE maNigaLa ||
niMtu nODida shreesha maMdagamaneraMthavara
heegeMdu manadalli prEmisida padmAvatiya ||
shreesha prasan vEMkaTEshanu haruShadali
avaralli baruvadu aritaLu padmAvatiyu ||4||
——————————————————-
6. bAre sakhi nODe illi yAre baruvanu
bAre ivanu yAre anya puruShanu baruvanu ||
aMda mAtu kELi muddu mukhada bAleyu
hariya eduralli niMtu yArenuta kELidaru ||
yArayya neevu rAvutare illi baMdiri
illi baMdu nilluvadakke Enu kAraNavEnu ||
arasana magaLu iruva rahasya sthaLadali
anya puruSharu neevu baruvudu uchitavalla ||
aMda mAtu kELi hariyu Aga pELuva
bAre sakhi ninna arasi yAru enage tOreMdanu ||
aMda mAtu kELi muddu mukhada bAleyu
baMdu niMtu mAtADuvaL prasanna vEMkaTEshanalli ||5||
——————————————————–
7. etta pOguviri neevu itta baMdennoDane
mAtugaLaDuvudu nyAyava ||
mAtanADuvavanu alla nimma kulada vivaravella
tiLisu nimma kulavu enage pElvenu enna vivarava ||
AkAsha rAyana magaLu nAnu enna hesaru padmAvatiyu
tiLisu nimma kulavu enage pELvenu enna vivarava ||
yAdava kulavu nAnu enna hesaru vEMkaTEsha
taMde vasudEva tAyi dEvaki dEvi
enna vivarava tiLiduko ||
nimma kulavE namma kulavu iMdige sarihoMditu
enna neenu maduveyannu mADikoLLE eMdanu ||
aMda mAtu kELi muddu mukhada bAleyarellaru
bahaLa bhayadi prasanna vEMkaTEshana harisuvaru ||6||
———————————————————
8. En hELali nAnu aMgane maNigaLige
baMda kOpAveShava ||
hariyeMdu ariyad hAMge aMganeyarellaru
kallugaLeeDADidaru keLage kudure bidditu ||
ashvavu bidda kShaNadi hariyu mAyavAdane
aMgane maNiyaru sEridaraMtapurava ||
hariya shOka suLivu kaMDu bakuLe bahaLa preetiyali
yAkO malagidiyO prasanna vEMkaTEsha pELelO ||8||
——————————————————-
9. yAkO iShTu malagidiyO
ELO enna svAmiyE nee
yAva vanakkE pOdiyO nee
yAra kaMDu mOhisidiyO ||
kADu huliyu karaDi mRugavu
bETeyADi baLaLidiyO
bisilu ghaaLiyiMda neenu
bedari malagidiyO ||
aruNa udayakkeddu neenu
yaava vanakke pOdiyO
yaava nAri ghaaLi sOki
yaara kaMDu mOhisidiyO ||
bahaLa preeti baNNisuva
bakuLe pAdakkeragida
kELu tAyi pELveneMda
prasanna vEMkaTEsha tAnu ||
—————————————-
10. kaMDEnA kAminiyA kAnanadi ||
aruNa udayakkeddu nAnu oushadakke hOdenu
alli kaMDe oMdu kanyA ratnavanu ||
aMganE maNi tanna saMgAtaroDa kUDi
puShpa vanadalli puShpava koydiralu ||
avaLa aMdavanu varNisalArenA
hEge pELuveneMda prasanna vEMkaTa viThala ||10||
——————————————————–
11. kaMDEnE kAnanadi kAmini maNi souMdarya
avaLa taMdu enage nee maduve mADisabEku ||
nArAyaNapura dore AkAsharAyanaMte
avana magaLu padmAvatiya kaMDe nAnu ||
padmadaludisida padmAvatiya nAnu nODi
baruvudakke oMdu upAya hELuve nAnu ||
Enu pELUve nAnu avaLa cheluvikeya
hELItharavalla veMda prasanna vEMkaTa viThala ||
—————————————–
12. kELamma pELuvenu manada abhipraayava
AkAsharAyana magaLu padmAvatiyu
avaLa taMdu enage maduve mADiseMdanu ||
ninna horetu enage anyarobbarillave
ninniMdalAgabEku eekAryavu eMdanu ||
itta bAreMbo jana sutti nODidarilla
anAthanu nAnu enna AdariseMdanU ||
ashvavannu tarisida mAtege koDisida
eegale pOgi neenu bEga baa eMdanu ||
aMda mAtanu kELi bakuLe tAn pOdaLu
Aga prasanna vEMkaTEsha tAnu yOchisida ||
——————————————————–
13. pOgi baruve nAnu nArAyaNa purakkE
pOgi baruve nAnu tAmasa mADadE
padmAvatiya eega nODi baruvudakke ||
brahmana barahELi shishuvAgi AgeMdu
AlOchaneya mADi tanna abhiprAya hELi ||
mAyA vEShadi pOgi mAnini manasannu tiLidu
baruvEneMda prasanna vEMkaTEsha viThala ||
———————————————-
14. koravi vEShava koMDanAga, kOmaLAMga vEMkaTEsha
muddu padmAvatiya maduve mADikoLLa bEkunuta ||
paTavALi seereyanuTTu, koore chOLiyanne toTTu
havaLa sarava koraLal hAki , karadi buTTi kOla koMDu ||
brahma dEvara shishu mADi , naguta vEMkaTEsha tAnu
benninoLage kaTTi koMDu, naDeda nArAyaNa purakke ||
AkAshana maneya muMde , alli illi titugutali kUge
koravi kUguva dhvani kELi, dharaNi baMdu nODe ||
bArE koravi bhAgyavatiyE, bArE enna maMdirakke
baMdu enna magaLa nODi , vyAdhi guriya tiLuhisamma ||
aMda mAtana kELi koravi prasanna vEMkaTEsha
naguta baMdu
dharaNi dEvi maMdiradalli kuLita
shree prasanna vEMkaTEsha ||14||
———————————————————
15. karedu tArele dharaNi ninnaya magaLa
karedu tArele dharaNi ninna magaLa karava nODi
rEkhe gurigaLiMda pELuve nijamunna ||
taTTeyoLage ANimuttu ratna taMdiDe
enna kaMdage kSheera annava nee koDise ||
ninna magaLa karedu taMdu ennedurali
kuLLiriseMda prasanna vEMkaTa viThala ||15||
—————————————————
16. kELe dharaNi ninna magaLige pELve kuriyannu
taMdu neeDE enagE neenu kANikeyannu ||
oMdu divasa ninna magaLu hoovina vanadalli iralu
hariyu baralu kaMDu Aga kAMte bhayadali ||
hariyeMdariyade ninna magaLu kallumaLe suridaLu
kudure keLage beeLalavanu mAyavAdanu ||
aMdu modalu ivaLu heege kRuShavu AdaLE
idu nijavEnO eMdu kELE ninna magaLaneegale ||
avanu sheShagiriyavAsa lakShmI priyanE
ivaLa kOri baruva nALe ninage aLiyanAguva ||
husiyallave koravi mAtu satya kELele
prasanna vEMkaTEshagivaLu satiyu AvaLu ||16||
—————————————————-
17. sariyEne naa pELvadu souMdarya maNisAralE
kamaladal udisida kAminiyE ninna
karada rEkhEgaLannu nODuvene
aMdina dinadalli hoovina vanadalli
niMtiddu nijavallave padmAvati ||
unnata puruShanu tEjinEri
ninnali baralu nee bhayadiMdali
kalmaLe suriyalu kudureyu keLage
biddiddu nijavallave padmAvati ||
Atana mEle nee preetiyiMda
eethara klEShavAgi biddiruvi
Atanu ninageega patiyAguvanu
husiyalla enna mAtu souMdaryamaNi ||
Atanu ninna mEl AsheyiMda
ninnannu kOri baruvaneegA
yOchisa bEDa koravi hElida mAtu
nijaveMdu naMbu neenu padmAvati ||
koraviya mAtannu kELidaLu
koravige vaMdane mADidaLu
prasanna vEMkaTa viThalana tAnu
manadali dhyAnisuvaLu padmAvati ||17||
—————————————————-
18. vEMkaTEsha sariyAru padmini kELE
ee jagadalli inyArannu nAkANe ||
dEvaki vasudEvara kaMda
rAmachaMdra nAmada sarvEsha
baMdanu bETe mArgadiMda
ninna kaMDanu kAmita vanadalli ||
aMdu modalu ninna mElE bahaLa
AsheyiMda iruvanu kELE
mOsa vallave enna mAtu
nijaveMdu naMbu neenu ||
sheShAdri giriyoLage vAsa
tanna naMbida baktarigava dAsa
bEDida varava koDuva shreesha
beTTadoDeya prasanna vEMkaTESha ||18||
———————————————————
19. pOgi baruve nAnu padmAvatiyE
pOgi baruve nAnu
pOgi bEgane shEShagiriya sEri harige ninna
suddiyanella tiLidu pELuvenalli ||
aMganemaNi ninna manadalli iruvaMtha
aMtaraMgada rahasya tiLidu pEliddakkAgi
ninna koraLalliruva chaMdra hArava koTTu
kaLuhisu hottAyitu yOchisa bEDa neenu ||
ninna mogada sogasu nODe kaLyANa vELe
kooDi baMdiruvaMte tOruvadenagIga
eraDane shukravAra dashamiyu ninage lagna
vAgOdu kELE husiyalla enna mAtu ||
nanna kaMdana ANe enuta bhAShyava koTTu
prasanna vEMkaTaviThala shEShagirige horaTA ||19||
—————————————————-
20. pOgi baruve dharaNi appaNe koDu tAyE
pOgi baruve nAnu hELida kuriyella
nijaveMdu tiLidukoLLe
innoMdu rahasya pELuve ||
hoTTeyiMdali ee bAlE
huTTi baMdavaLu alla
sRuShTi mEle dorakidaLe ||
ivaLa harigarpisi aMdu baMda kEshavage
magaLa koDadiddare
ivaLa prANa uLiyalAradu ||
eMdenuta hELi prasanna vEMkaTa viThala sEridanu
shEShagirige Asamayadali ||
———————————————————
21. baMdaLu bakuLeyu AkAsha rAjana maMdirakke
kaMDaLu dharaNi dEvi baNNisi karevaLu ||
kuMdaNada peeThavanirisi kuLLirisidaLu
kushala prashnegaLiMda
kELvaLu dharaNiyu yAvUru yAvadEsha
Enu kAryavu illi ||
bahaLa paravashadiMda baMdiri eMdaLu
aMda mAtanu kELi bakuLe tA
haruShadali avaLa kula gOtravella
vivarisi hELidaLu ||
bakuLe mAtannu kELi dharaNi tA
haruShadiMda prasanna vEMkaTEsha viThalana charitreya kELvaLu ||21||
—————————————————
22. pELuvenu kELE dharaNi vivarisi nAnu
taMde vasudEvanaMte tAyi dEvakiyaMte
baMdu pAMDavaraMte bhagini
subadre balarAmanaMte ||
yAdava kuladavanu gOtra vashiShTavaMte
hattu mUrlOkavannu udaradoLiTTu rakShisuvanu ||
avana hRudayadalli shreelakShmI vAsavaMte
prasanna vEMkaTa viThalanna ninna sute oppidaLu ||22||
—————————————————-
23. aMda mAtanu kELi maMdagamane dharaNI
pati gaganarAyanige pELvaLu ||
aMdu koravi baMdu hELida kuriyella
iMdige nijavAyitu kELirenna mAtanu
muddu padmAvati kAnanadali kaMDa
kaliyuga puruShanige magaLa koDabEkeMdu ||
Atana tAyi baMdiruvaLu nAta varuSha ippattaidu
gOtravu vashiShTavaMte siridEvi arasanaMte
hesaru prasanna vEMkaTanaMte taMde vasudEvanaMte
tAyi dEvakiyaMte yAdava kulavaMte ||
vAsa shEShagiriyaMte padmAvatiya vara
oppidanaMte nAta ||
————————————————–
24. mAnini mAtanu kELida – AkAsharAya ||
mAnini mAtanu kELi manadi saMtOShadi
magaLabhiprAyavA tiLidu pELuveneMdA ||
muddu padmAvayatiyanetti toDeyaliTTu
kAMtAmaNi ninage yAru patiyAga bEkeMdu kELida ||
eerELu lOkava hRudayadoLage iTTu
Adarisuva hari ninna apEkShisiruvanaMte ||
muddu koosamma ninnanu sRuShTigoDEyanige
kanyAdAnava mADi dhanyanAguveneMda ||
muddu padmAvatiyu taMde mAtanu kELi
prasanna vEMkaTEshanige arpita mADisEMdaLu ||24||
————————————————–
25. bEga karisida gurugaLa AkAsharAya ||
bEga karisi gurugaLa lagna patrikeyanu barisi
bakuLe kaiyali koDisi upacharisi kaLuhisida ||
koTTa patrike koMDu bakuLe tA bEga horaTu
shEShagirige baMdu harige samarpisidaLu ||
bakuLe taMda patrikeya nODi Odi koMDa hariyu
prasanna vEMkaTaviThThala AgatAnu yOchisidanu ||25||
—————————————————
26. mAteyoDane hari preetiyiMdali kuLitu
Alochaneya mADida
ammA kELe ennoDalanubbusava
usuruvadakke enage obbarillavE mAte ||
kaiyalli kAsilla sAla koDuvarilla
anAtha nAnenuta Adarisuvarilla
preetiya lakShmIyu enna mElE kOpadi
kolhApurakke tA pOgiruvaLamma ||
gagana rAyana magaLa madiveyu naDeyuvadu
bahaLa kaShTavu kELE
muMdoMdu yOchane mADade nAnIga
hEsigeyAyitu baduku yOchisi phalavEnu ||
bahaLa chiMteyiMda mAtanADidanAga
bahaLa chiMteyiMda mAtanADidanAga
kolhApurak hOgi lakShmiya karetaMdare
saphalavAguvadeMda prasanna vEMkaTa viThala ||26||
—————————————————
27. sAri baMdanu haranu patrike nODi
hAri baMdanu brahmanu ||
bareda patrikeya nODi brahma rudraru
haruShadiMda aShTa dikkiLulla janarA
visiShTa bAMdhavara karedu koMDu ||
hiMDu hiMDAgi janaru
baruvadu kaMDu haritA
haruShadiMda baMdavara
edurukoMDu upacharisidanu ||
biNNANa mAtugaLiMda kELirenna abhiprAya
pELuveneMda hariyu
enna mElE kOpadi lakShmI
kolhApurakke pOdaLammA
pOgi shAMta mADi karedu
taruvar yArillavE ||
gagana rAyana magaLa mElE preetiyiMdali
lagna iccheyanu koMDe nAnu
kaiyalli kAsilla saala koDuvarilla
anAtha nAneMdu Adarisuvarilla ||
aMda matanne kELi brahma rudra dEvaru
ella Agale pELvaru
eShTu jAlagAranu eShTu biNNANanu
kapaTa nATaka svAmi prasanna vEMkaTa viThala ||27||
—————————————————-
28. En hELali innu AnaMda rUpa nADida mAtige
hadinAlku lOkavannu ALuvaMtha dEva
anAthaneMbuvadu Enu Ashcharyavo
kukShiyoLage jagava bacchiTTava neenu
anAthaneMbuvadu kELalAscharyavo
bhAnuvannu kaLuhisi lakShmiya karetaMdu
prasanna vEMkaTEsha tAnu payaNavAdanu ||28||
——————————————-
29. baMdAnu shree hariyu nArAyaNa purakke
baMdAnu shree hariyu
baMdAnu shree hari iMdire sahitavAgi
brahma rudraru soorya chaMdrariMdoDagUDi
baMda hariyu kaMDu gagana rAyanu bEga
dharaNi dEviya sahita baMdu eduru goMDA
tALa mELava divya nAdasvaragaLiMDa – pAda
pUjeya mADI manege karedu taMda ||
hoLeva siMhAsanadi hariya kuLLirisi
haridrA kuMkuma gaMdhadiMda pUjisuvanu
mANikya makuTavu ratnada AbharaNavu shAlagrAmada sara
harige samarpisida vara pUjeyannu mADi
parama saMtOShadi padmavatiya kanyA dAnava mADuveneMda ||
————————————————
30. bEga horaTA yOgi vEShadiMda shrI hari
kAshiyAtreyannu mADi baruveneMdanu shrI hari ||
kAvi vastra uTTu karadi kOla piDidanE
karNa kuMDala hoLeva pAda rakShe dharisidA
aDigaDige biDimallige uduri beeLuttA
naDedanu nArAyaNa purada rAjabIdiyali ||
kaMDu gaganarAya dharaNidEvi sahitali
baMdu hariya pAdakkeragi bEDikoMDarU
muddu padmAvatiya koTTu maduve naDisuve
karedu taMdarAga prasanna vEMkaTEshananu ||30||
———————————————–
31. naguta naguta vEMkaTEsha padmAvatige
mAMgalyava kaTTidanE ||
naguta naguta vEMkaTEsha mAMgalyava kaTTidane
vEMkaTEsha padmAvatige hAsyadiMda hELuvanu ||
muddu padmAvatiyE neenu sakhiyaroDane kUDikoMDu
kAnanadalli nanna kaMDu kallu bacchiTTu baDidiyallE ||
kallu bIsi ninna karavu bahaLa noMditEne eMda
kallu peTTu tiMda kaLLa ninna karadi kaMkaNa kaTTide ||
bahaLa chAturyadi neenu baMdavana kOridi
mAya koravi mAta kELi mOsa hOdiyalle neenu ||
rAyana magaLu eMbO garvadiMda neenu enna
vivartaneyannu mADi enna ashvava taDadiyalle
bEDa eMdu aDDabiddaru muMde nAnu
baMdu ninage mAMgalyava kaTTideneMda
prasanna vEMkaTEsha naguta ||
———————————————–
32. bEDa svAmi enna mElE bahaLa kOpavu
nA mADida tappugaLanu manniseMdaLu ||
maccha kUrma varaha siMha mahime ariyade
tuccha buddhiyiMda nAnu hucchaLAdenu
varahanAgi dharaNiyannu taMda hariyE nA
ariyad hAMge mADiddannu kShamisu eMdaLu ||
kaMda kariye kaMbadiMda baMdu salahidi
baliya vaMchisi dAna bEDi pAtALakotti nee
pitana vAkya kELi mAte shirava taridiyO
nAri chOrana koMdu jagadi prakhyAti paDadiyO ||
mAninIya moreya kELi mAna kAydiyO
uttamAMganEya vratava bhaMga mADdiyO
kalki karuNa salahabEku ninna naMbide
enna poreyabEku prasanna vEMkaTEshanE ||
——————————————–
33. Enu dhanyaLE nAnu eShTu puNya nA mADidE
sRuShTigoDeya vEMkaTEsha enage aLiyanAdanE ||
magaLallave ivaLu mahAlakShmI dEviyE enna
kulavanu ivaLu pavitra mADidalamma ||
eShTu tapas mADidaru hariya darushana dorakadu
namma sudatigOskaradiMda sulabhadiMdali namagolida ||
muddu padmAvatigU prasanna vEMkaTEshanigU
muttinArati etti jaya jaya eMdu pADidaru ||
—————————————————-
34. jaya jaya jaya vEMkaTEsha jayatu padmAvatige
olidaMtha shree harige nitya jaya maMgaLam ||
kaMteya karadalli kallu peTTu tiMdavage
lajje illadavage mUrjagadoDeya shree harige ||
sRuShTigoDeya vEMkaTEshage siridEvi arasage
kaLyANa mUrutige nitya jaya maMgaLam ||
kaliyugadali dharaNi kanye kAMtege olidavage
prakhyAtivaMtege prasanna vEMkaTEShanige ||
——————————————–
Leave a Reply