Srinivasa Kalyana – Jaya Jaya Jaya

Composer : Shri Prasanna Srinivasa dasaru

Smt.Shubhalakshmi Rao

ಜಯ ಜಯ ಜಯ ಶ್ರೀನಿವಾಸ
ಜಯಾ ಶಾಂತಿ ಕೃತಿ ಮಾಯಾ ಶ್ರೀಶ
ಭಯ ಬಂಧ ಮೋಚಕ ಜೀಯ ಆಹ
ಸುಂದರ ಚಿನ್ಮಯಾನಂದ ಜ್ಞಾನಾತ್ಮನೆ
ಮಂದಜಭವ ಸುರವೃಂದ ಸಂಸೇವ್ಯ ಶ್ರೀನಿವಾಸ ||ಪ||

ಸುರಸರಿತ ತೀರದಿಂದ
ಸುರಮುನಿ ಭೃಗು ಬಂದು ನಿನ್ನ
ಪರಸಮರಹಿತನೆಂದರಿತ ಆಹ
ಸಿರಿಯು ನಿನ ಭಾವವನುಸರಿಸಿ ಬೇಗ
ಕರವೀರ ಪುರ ಪೋಗೆ ಗಿರಿಪೊತ್ತು ಪೊಕ್ಕೆಯೊ ||೧||

ಮೇರುಸುತನೆ ಹಾಟಕಾದ್ರಿ
ವೀರ ಭಕುತ ವೃಷಭಾದ್ರಿ
ಕೀರುತಿ ಇತ್ತಿ ತಂಜನೆಗೆ ಆಹ
ಸರೀಸೃಪಾವರಿಸಿದ ಸೌರಭ್ಯಗಿರಿಯಿದು
ವರವೇಂಕಟಾದ್ರಿಯು ಹರಿತು ವಿಪ್ರನ ಪಾಪ ||೨||

ನೀನಿದ್ದ ಸ್ಥಳವೇ ವೈಕುಂಠ
ನಿನಗಾರು ಸರಿಯುಂಟೊ ಶ್ರೀಶ
ದೀನ ಸುಜನರಿಗೆ ನೆಂಟ ಆಹ
ಧೇನು ಪಾಲ್ಗರೆಯಲು ಪಾಲಕ ಹೊಡೆಯಲು
ದೀನರಕ್ಷಕ ನೀನು ಶಿರಸಿತ್ತು ಪೊರೆದೆ ||೩||

ಏಳು ತಾಳದ ಉದ್ದ ರಕ್ತ
ತಾಳಲಾರದೆ ಬಿದ್ದ ಗೋಪ
ಚೋಳರಾಯಗೆ ಕೊಟ್ಟ ಶಾಪ ಆಹ
ಪೇಳಬಲ್ಲೆನೆ ನಿನ್ನ ಅತಿಶಯ ಲೀಲೆಯ
ಶೀಲ ಸುರರ ಗುರು ಚಿಕಿತ್ಸೆಯನೈದಿದೆ ||೪||

ಸ್ವಗತ ಭೇದವಿಲ್ಲದಂಥ
ಸ್ವಚ್ಛ ಚಿತ್ಸುಖಮಯನಂತ
ಸ್ವಾನಿರ್ವಾಹಕ ವಿಶೇಷ ಆಹ
ಶ್ವೇತವರಾಹನ ಸಂವಾದದಿಂದಲಿ
ಸ್ವೀಕರಿಸಿದೀ ಸ್ಥಳ ಮೊದಲ ಪೂಜೆಯ ಕೊಟ್ಟು ||೫||

ಸರಸ್ವತೀ ಸ್ವಾಮಿ ಪುಷ್ಕರಣಿ
ಸುರಮುನಿನರರಿಗೆ ಸ್ನಾನ
ಪರಸುಖಮಾರ್ಗ ಸೋಪಾನ ಆಹ
ಸುರತಟಿ ಮೊದಲಾದ ತೀರ್ಥಗಳೆಲ್ಲವು
ಸರಿತವಾಗಿರುತಿರೆ ಈ ಸ್ವಾಮಿ ತೀರ್ಥದಿ ||೬||

ಆದಿಕಾರಣ ನಿನ್ನ ಲೀಲಾ
ಮೋದಸಂಭ್ರಮವನ್ನು ನೋಡೆ
ಕಾದುಕೊಂಡಿಹರು ಕೋವಿದರು ಆಹ
ಸಾಧು ಸಂಭಾವಿತ ಬಕುಳಾದೇವಿಯುಗೈದ
ಸ್ವಾದ ಭೋಜ್ಯವನುಂಬ ನಿತ್ಯ ಸಂತೃಪ್ತ|| ೭||

ಮಂಗಳ ಚಿನ್ಮಯ ರಂಗಾ
ನಂಗನಯ್ಯನೆ ಮೋಹನಾಂಗ
ತುಂಗ ಮಹಿಮನೆ ಶುಭಾಂಗ ಆಹ
ಬಂಗಾರ ಕುದುರೆ ಮೇಲಂಗನೇರಲಿ ಬಂದೆ
ಶೃಂಗಾರವೇನೆಂಬೆ ಎಂದಿಗೂ ಸ್ವರಮಣ||೮||

ತೋಂಡಮಾನ ರಾಯನಣ್ಣ
ಚಂಡಭೂಪನು ಆಕಾಶ
ಕಂಡನು ಕಮಲದೊಳ್ ಶಿಶುವ ಆಹ
ಅಂಡ ಅಖಿಳ ಕೋಟಿ ಅಸಮ ಈ ಶಿಶುವನ್ನ
ಹೆಂಡತಿ ಧರಣಿಯು ಕೊಂಡಳು ಮಗಳಾಗಿ ||೯||

ಮೂಲೇಶ ನಿನ್ನಯ ರಾಣಿ
ಮೂಲಪ್ರಕೃತಿ ಗುಣಮಾನಿ
ಕೀಲಾಲಭವ ಭವ ತಾಯಿ ಆಹ
ಶೀಲ ಭೂಪಾಲನ ಸುತೆ ಪದ್ಮಾವತಿಯೆಂದು
ಬಾಲೇರು ಸಹ ಪುಷ್ಪವನಕೆ ಬಂದಿಹಳೊ ||೧೦||

ಮಹಿದೇವಿ ಕಮಲವಾಸಿನಿಯು
ಬಹಿನೋಟಕ್ಕೆ ರಾಜಸುತೆಯು
ಬಹು ಚಿತ್ರ ಪುಷ್ಪವ ಕೊಯ್ಯೆ ಆಹ
ಮಹತಿಪಾಣಿಯು ವಯೋರೂಪದಲಿ ಬಂದು
ಅಹಿತಲ್ಪ ಶ್ರೀಶನೆ ಪತಿಯೆಂದು ನುಡಿದ ||೧೧||

ಹಾಟಕಗಿರಿಯಿಂದ ನೀನು
ಬೇಟೆಯಾಡುವ ರೂಪ ತಾಳಿ
ಘೋಟಕವೇರಿ ಸಂಭ್ರಮದಿ ಆಹ
ಆಟವಾಡುವ ಬಾಲೆ ಬಳಿಯಲ್ಲಿ ಬಂದು ನೀ
ನಾಟಕವಾಡಿದ್ದು ಪಾಡಲರಿಯೆನೊ ||೧೨||

ನಿತ್ಯನಿರ್ಮಲ ಅವಿಕಾರ
ಮತ್ರ್ಯರವೋಲ್ ನೀ ನಟಿಸೋ
ಕೃತ್ಯಗಳರಿವರು ಯಾರೋ ಆಹ
ಭೃತ್ಯವತ್ಸಲ ನೀನು ಬಕುಳೆಯ ಬಳಿ ಪೇಳಿ
ಸಂತ್ಯಸಂಕಲ್ಪ ನಿನ್ನ ಸಂದೇಶ ಕಳುಹಿದೆ ||೧೩||

ಪೊಂದಿದೆ ಫುಲ್ಕಸೀ ರೂಪ
ಮಂಧಜಭವ ಶಿಶುವಾಗೆ
ನಂದಿನಿಧರ ಯಷ್ಟಿಯಾಗೆ ಆಹ
ಮಂದಜಭವಾಂಡ ಗುಣಗುಲ್ಮ ಮಾಡಿ ನೀ
ಕಂಧರದಲಿ ಗುಂಜ ಕಂಬುಸರವ ತೊಟ್ಟೆ ||೧೪||

ನಾರಾಯಣಪುರಿಯಲ್ಲಿ
ಮಾರನಯ್ಯ ನಿನ್ನ ಸುಗುಣ
ವಾರಿಧಿ ಪೊಕ್ಕಳು ಪದುಮೆ ಆಹ
ಪುರಿದಿ ಧರಣೀದೇವೀ ಪುತ್ರಿಗೆ ಜ್ವರವೆಂದು
ಪರಿಪರಿ ಪರಿಹಾರ ಪೊರೆದು ನೋಡಿದರಾಗ ||೧೫||

ಶುದ್ಧ ಸುಂದರ ಸುಖಕಾಯ
ವೃದ್ಧ ಫುಲ್ಕಸೀ ವೇಷಧಾರಿ
ಬದ್ಧ ತೋಕರ ಬಳಿ ಪೋದೆ ಆಹ
ಇದ್ದ ಸುದ್ದಿಯ ಅಪದ್ಧವಿಲ್ಲದೆ ಪೇಳಿ
ಮುದ್ದು ಪದ್ಮೆಗೆ ಅನಿರುದ್ಧನೆ ಪತಿಯೆಂದೆ ||೧೬||

ವಹಿಸಿ ನಿನಾಶ್ವಾಸನ ಬಕುಳ
ಮಹದೇವನಾಲಯದಿಂದ
ಮಹಿಳೆಯರ ಸಹ ಕೂಡಿ ಆಹ
ಮಹಿದೇವಿಯಲಿ ಪೋಗಿ ವಿಹಿತ ಮಾತುಗಳಾಡಿ
ಬಹು ಶುಭವಾರ್ತೆಯ ತಂದು ಪೇಳಿದಳೊ ||೧೭||

ಶುಕಮುನಿ ಕರಪ್ರದವಾದ
ಆಕಾಶ ನೃಪ ಲಗ್ನಪತ್ರ
ಸ್ವೀಕರಿಸಿದೆ ಬಹು ಹಿತದಿ ಆಹ
ವಾಗೀಶ ಶಶಿಧರ ನಾಗೇಶ ಸೌಪರ್ಣಿ
ನಾಕೇಶ ಮೊದಲಾದ ಸುರರನು ಕರೆದೆ ||೧೮||

ಶಿಷ್ಟ ಸನ್ಮುನಿಜನ ಕೂಟ
ತುಷ್ಟ ಸುಮನಸ ಸಮೂಹ
ಶ್ರೇಷ್ಠ ಸುಗಂಧಿ ಆಗಮನ ಆಹ
ಸೃಷ್ಟ್ಯಾದಿಕರ್ತ ನಿನ್ನ ಸುಮಹೋತ್ಸವ ನೋಡಿ
ಇಷ್ಟಾರ್ಥ ಪಡೆವರು ಎಷ್ಟೆಂಬೆ ವಿಭುವೆ ||೧೯||

ಮಾಯ ಜಯೇಶ ಶ್ರೀವತ್ಸ
ಛಾಯೇಶಗುಪಾಯ ಪೇಳಿ
ತೋಮಜೆಯನು ಕರೆತಂದೆ ಆಹ
ಮಾಯಾ ಜಯಾ ಸಿರಿ ಕೃತಿ ಶಾಂತಿ ನಿನ್ನಿಂದ
ವಿಯೋಗರಹಿತಳು ಎಂದೂ ಎಲ್ಲೆಲ್ಲೂ ||೨೦||

ಬೃಹದಣುವಿಗೆ ಸತ್ತಾಪ್ರದನೆ
ಸುಹೃದ ಸಂತೃಪ್ತ ಸುಖಾಬ್ಧೇ
ದೃಢವ್ರತ ಶುಕಮುನಿಗೊಲಿದೆ ಆಹ
ಬೃಹತೀ ಫಲಾನ್ನವನುಂಡು ಊತ್ಕಾರದಿ
ಗೃಹ ಬಹಿರದಿ ಇದ್ದ ಜನರ ತೃಪ್ತಿಸಿದೆ ||೨೧||

ಸುಜನರಿಗಾನಂದ ದಾತ
ದ್ವಿಜರೂಢ ಜಗದೀಶ ನೀನು
ಅಜಸುರರೊಡಗೂಡಿ ಬರೆ ಆಹ
ಅಜಿತ ಚಿನ್ಮಯ ನಿನ್ನ ಆಕಾಶ ನೃಪ ನೋಡಿ
ನಿಜವಾಗಿ ಕೃತಕೃತ್ಯ ಧನ್ಯ ತಾನೆಂದ ||೨೨||

ಅಜರಮರ ಮಂದಿರವೋಲ್ ಮನೆಯು
ಪ್ರಭುವಲಿಸುವ ದಿವ್ಯ ಸಭೆಯು
ನಿಜಭಕ್ತ ಜನಪರ ಗುಂಪು ಆಹ
ದ್ವಿಜರ ವೇದಗಾನ ವಾದ್ಯ ಘೋಷಿಸಲಾಗ
ನಿಜಸತಿ ಪದ್ಮೆಗೆ ಮಾಂಗಲ್ಯ ಧರಿಸಿದೆ ||೨೩||

ಸುರಮುನಿಜನ ಮೂರು ವಿಧಕೆ
ತರತಮ ಯೋಗ್ಯತೆಯ ಅರಿತು
ಪರಿಪರಿ ಸಾಧನವಿತ್ತೆ ಆಹ
ನೀರರುಹಜಾಂಡವು ನಿನ್ನ ಅಧೀನವು
ಸಿರಿಭೂಧರೆಯು ಶ್ರೀನಿವಾಸ ದಯಾನಿಧೆ ||೨೪||

ನೀ ನಿಂತು ನುಡಿಸಿದ ನುಡಿಯು
ನಿನ್ನಡಿಗಳಿಗೆ ಅರ್ಪಣೆಯು
ಚೆನ್ನಮಾರುತ ಮನೋಗತನೆ ಆಹ
ವನರುಹಾಸನ ಗುರು ಪ್ರಸನ್ನ ಶ್ರೀನಿವಾಸ
ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ ||೨೫||

ಜಯ ಜಯ ಜಯ ಶ್ರೀನಿವಾಸ
ಜಯಾ ಶಾಂತಿ ಕೃತಿ ಮಾಯಾ ಶ್ರೀಶ
ಭಯ ಬಂಧ ಮೋಚಕ ಜೀಯ ಆಹ
ಸುಂದರ ಚಿನ್ಮಯಾನಂದ ಜ್ಞಾನಾತ್ಮನೆ
ಮಂದಜಭವ ಸುರವೃಂದ ಸಂಸೇವ್ಯ ಶ್ರೀನಿವಾಸ ||


jaya jaya jaya SrInivAsa
jayA SAMti kRuti mAyA SrISa
Baya baMdha mOcaka jIya Aha
suMdara cinmayAnaMda j~jAnAtmane
maMdajaBava suravRuMda saMsEvya SrInivAsa ||pa||

surasarita tIradiMda
suramuni BRugu baMdu ninna
parasamarahitaneMdarita Aha
siriyu nina BAvavanusarisi bEga
karavIra pura pOge giripottu pokkeyo ||1||

mErusutane hATakAdri
vIra Bakuta vRuShaBAdri
kIruti itti taMjanege Aha
sarIsRupAvarisida sauraByagiriyidu
varavEMkaTAdriyu haritu viprana pApa ||2||

nInidda sthaLavE vaikuMTha
ninagAru sariyuMTo SrISa
dIna sujanarige neMTa Aha
dhEnu pAlgareyalu pAlaka hoDeyalu
dInarakShaka nInu Sirasittu porede ||3||

ELu tALada udda rakta
tALalArade bidda gOpa
cOLarAyage koTTa SApa Aha
pELaballene ninna atiSaya lIleya
SIla surara guru cikitseyanaidide ||4||

svagata BEdavilladaMtha
svacCa citsuKamayanaMta
svAnirvAhaka viSESha Aha
SvEtavarAhana saMvAdadiMdali
svIkarisidI sthaLa modala pUjeya koTTu ||5||

sarasvatI svAmi puShkaraNi
suramuninararige snAna
parasuKamArga sOpAna Aha
surataTi modalAda tIrthagaLellavu
saritavAgirutire I svAmi tIrthadi ||6||

AdikAraNa ninna lIlA
mOdasaMBramavannu nODe
kAdukoMDiharu kOvidaru Aha
sAdhu saMBAvita bakuLAdEviyugaida
svAda BOjyavanuMba nitya saMtRupta|| 7||

maMgaLa cinmaya raMgA –
naMganayyane mOhanAMga
tuMga mahimane SuBAMga Aha
baMgAra kudure mElaMganErali baMde
SRuMgAravEneMbe eMdigU svaramaNa||8||

tOMDamAna rAyanaNNa
caMDaBUpanu AkASa
kaMDanu kamaladoL SiSuva Aha
aMDa aKiLa kOTi asama I SiSuvanna
heMDati dharaNiyu koMDaLu magaLAgi ||9||

mUlESa ninnaya rANi
mUlaprakRuti guNamAni
kIlAlaBava Bava tAyi Aha
SIla BUpAlana sute padmAvatiyeMdu
bAlEru saha puShpavanake baMdihaLo ||10||

mahidEvi kamalavAsiniyu
bahinOTakke rAjasuteyu
bahu citra puShpava koyye Aha
mahatipANiyu vayOrUpadali baMdu
ahitalpa SrISane patiyeMdu nuDida ||11||

hATakagiriyiMda nInu
bETeyADuva rUpa tALi
GOTakavEri saMBramadi Aha
ATavADuva bAle baLiyalli baMdu nI
nATakavADiddu pADalariyeno ||12||

nityanirmala avikAra
matryaravOl nI naTisO
kRutyagaLarivaru yArO Aha
BRutyavatsala nInu bakuLeya baLi pELi
saMtyasaMkalpa ninna saMdESa kaLuhide ||13||

poMdide PulkasI rUpa
maMdhajaBava SiSuvAge
naMdinidhara yaShTiyAge Aha
maMdajaBavAMDa guNagulma mADi nI
kaMdharadali guMja kaMbusarava toTTe ||14||

nArAyaNapuriyalli
mAranayya ninna suguNa
vAridhi pokkaLu padume Aha
puridi dharaNIdEvI putrige jvaraveMdu
paripari parihAra poredu nODidarAga ||15||

Suddha suMdara suKakAya
vRuddha PulkasI vEShadhAri
baddha tOkara baLi pOde Aha
idda suddiya apaddhavillade pELi
muddu padmege aniruddhane patiyeMde ||16||

vahisi ninASvAsana bakuLa
mahadEvanAlayadiMda
mahiLeyara saha kUDi Aha
mahidEviyali pOgi vihita mAtugaLADi
bahu SuBavArteya taMdu pELidaLo ||17||

Sukamuni karapradavAda
AkASa nRupa lagnapatra
svIkariside bahu hitadi Aha
vAgISa SaSidhara nAgESa sauparNi
nAkESa modalAda suraranu karede ||18||

SiShTa sanmunijana kUTa
tuShTa sumanasa samUha
SrEShTha sugaMdhi Agamana Aha
sRuShTyAdikarta ninna sumahOtsava nODi
iShTArtha paDevaru eShTeMbe viBuve ||19||

mAya jayESa SrIvatsa
CAyESagupAya pELi
tOmajeyanu karetaMde Aha
mAyA jayA siri kRuti shAMti ninniMda
viyOgarahitaLu eMdU ellellU ||20||

bRuhadaNuvige sattApradane
suhRuda saMtRupta suKAbdhE
dRuDhavrata Sukamunigolide Aha
bRuhatI PalAnnavanuMDu UtkAradi
gRuha bahiradi idda janara tRuptiside ||21||

sujanarigAnaMda dAta
dvijarUDha jagadISa nInu
ajasuraroDagUDi bare Aha
ajita cinmaya ninna AkAsha nRupa nODi
nijavAgi kRutakRutya dhanya tAneMda ||22||

ajaramara maMdiravOl maneyu
prabhuvalisuva divya saBeyu
nijaBakta janapara guMpu Aha
dvijara vEdagAna vAdya GOShisalAga
nijasati padmege mAMgalya dhariside ||23||

suramunijana mUru vidhake
taratama yOgyateya aritu
paripari sAdhanavitte Aha
nIraruhajAMDavu ninna adhInavu
siriBUdhareyu SrInivAsa dayAnidhe ||24||

nI niMtu nuDisida nuDiyu
ninnaDigaLige arpaNeyu
cennamAruta manOgatane Aha
vanaruhAsana guru prasanna SrInivAsa
ninage prItiyAgalo suhRuda saMtRupta ||25||

jaya jaya jaya SrInivAsa
jayA SAMti kRuti mAyA SrISa
Baya baMdha mOcaka jIya Aha
suMdara cinmayAnaMda j~jAnAtmane
maMdajaBava suravRuMda saMsEvya SrInivAsa ||

Leave a Reply

Your email address will not be published. Required fields are marked *

You might also like

error: Content is protected !!