Composer : Shri Vijayadasaru
ಸತ್ಯವತಿಸೂನು ವೇದವ್ಯಾಸ ಲಕುಮಿಶಾ |
ನಿತ್ಯ ನಿನ್ನ ನೆನೆಸುವ ಭೃತ್ಯರೊಡನೆ ಪೊಂದಿಸು ದೇವ ||ಪ||
ಮೊದಲು ಸರ್ಪ ವಾಸುಕಿ ಇಲ್ಲಿ ಮದನಾರಿಯ ವಲಿಸಿ | ತನ್ನ
ಬದುಕುವಗೋಸುಗ ಉಪಾಯದಲಿ ನಿಂದರೆ |
ಅದರ ತರುವಾಯ ಸ್ಕಂದ ತ್ರಿದಶ ವೈರಿ ತಾರಕನ್ನ ಸದೆದು |
ಇಂದ್ರಾದ್ಯರ ಕೂಡ ಮುದದಿಂದ ಸ್ಥಿರವಾಗಿ ಮೆರೆದ (೧)
ಷಣ್ಮೊಗನು ಸತತ ತಾನು ಅನ್ನದಾನ ಮಾಡುತ ಹಾ |
ವನ್ನನಾಗುದಕ್ಕೆ ಪ್ರಸನ್ನ ಮೋದದಲಿ |
ನಿನ್ನ ಪೊಲಿಸಿಲ್ಲಿಗೆ ಬಾಹಾ | ದೆನ್ನ ಭಕುತಿಗೆ ಮೆಚ್ಚಿ |
ಮುನ್ನಿನಾಗಮವನ್ನೆ ಹೇಳಿದ ವಾಸುದೇವ (೨)
ಕಲಿಯುಗದೊಳಗೆ ವಿಪ್ರಕುಲದಲಿ ಮಾರುತಿ ಎನಿಸಿ |
ಬಲು ಮಾಯಿಗಳ ಮೋಹನ ಶಾಸ್ತ್ರವಳಿದು ಬದರಿಯ |
ಬಳಿಗೆ ಬಂದು ಶಿಲಾಪ್ರತಿಮೆಗಳನೆ ಪಡೆದು ತಂದು |
ಇಲ್ಲಿ ನೆಲೆ ಮಾಡುವ ಸುಜನರಿಗೆ
ಪೊಳೆವಂದದಲಿ ಇಳೆಯೊಳಗೆನಲು (೩)
ಅಂದಿನಾರಭ್ಯ ಪಾರ್ವತಿನಂದನ ಕುಕ್ಕೆಪುರದಲ್ಲಿ |
ನಿಂದು ಸರ್ವರಿಂದ ಪೂಜೆ ಚಂದದಿ ಕೊಳುತಾ |
ಮಂದ ಕುಷ್ಟರೋಗಗಳ ಹಿಂದುಮಾಡಿ ಓಡಿಸಿ | ಗೋ
ವಿಂದ ನಿನ್ನ ಪಾದ ಧ್ಯಾನದಿಂದ ಲೋಲಾಡುತಲಿರೆ (೪)
ಮರುತದೇವ ಸಂಪುಟಾಕಾರವಾದ ನೀನದರೊಳು |
ಚಾರು ಸಿಲೆ ರೂಪವಾದ ಪಾರಾಶರ ಋಷಿ |
ಧಾರುಣಿಗೆ ರಹಸ್ಯವ ತೋರಿಕೊಳುತಲಿ |
ಕುಮಾರಧಾರಿವಾಸವಾದ ಕು |
ಮಾರ ಗೊಲಿದ ವಿಜಯವಿಠ್ಠಲಾ (೫)
satyavatisUnu vEdavyAsa lakumiSA |
nitya ninna nenesuva BRutyaroDane poMdisu dEva ||pa||
modalu sarpa vAsuki illi madanAriya valisi | tanna
badukuvagOsuga upAyadali niMdare |
adara taruvAya skaMda tridaSa vairi tArakanna sadedu |
iMdrAdyara kUDa mudadiMda sthiravAgi mereda (1)
ShaNmoganu satata tAnu annadAna mADuta hA |
vannanAgudakke prasanna mOdadali |
ninna polisillige bAhA | denna Bakutige mecci |
munninAgamavanne hELida vAsudEva (2)
kaliyugadoLage viprakuladali mAruti enisi |
balu mAyigaLa mOhana SAstravaLidu badariya |
baLige baMdu SilApratimegaLane paDedu taMdu |
illi nele mADuva sujanarige
poLevaMdadali iLeyoLagenalu (3)
aMdinAraBya pArvatinaMdana kukkepuradalli |
niMdu sarvariMda pUje caMdadi koLutA |
maMda kuShTarOgagaLa hiMdumADi ODisi | gO
viMda ninna pAda dhyAnadiMda lOlADutalire (4)
marutadEva saMpuTAkAravAda nInadaroLu |
cAru sile rUpavAda pArASara RuShi |
dhAruNige rahasyava tOrikoLutali |
kumAradhArivAsavAda ku |
mAra golida vijayaviThThalA (5)
Leave a Reply