Tarammayya raghukula

Composer : Shri Mohana dasaru

By Smt.Shubhalakshmi Rao

ತಾರಮ್ಮಯ್ಯಾ ರಘುಕುಲ ರಾಮಚಂದಿರನ [ಪ]
ಈರೇಳು ವರುಷವು ಮೀರಿ ಪೋಗುತಲಿದೆ
ಸೇರದನ್ನೋದಕ ಮಾರಪಿತನ ಕರೆ [ಅ.ಪ]

ಪರ್ಣ ಶಾಲೆಯಂತೆ ಅಲ್ಲಿ ಸು-
ವರ್ಣದ ಮೃಗವಂತೆ ||
ಕನ್ಯೆ ಸೀತಾಂಗನೆ ಬಯಸಿದಳಂತೆ
ಸ್ವರ್ಣಾಂಬರ ಬೆನ್ಹತ್ತಿ ಪೋದನಂತೇ (೧)

ಲಕ್ಷ್ಮಣ ಅಲ್ಲಿಂದ ಪೋಗಲು
ತಕ್ಷಣ ಖಳ ಬಂದ ||
ಲಕ್ಷ್ಮಿಯಾಕೃತಿಯ ಕೊಂಡು ಪೋಗೆ ಕಮ-
ಲೇಕ್ಷಣ ಪೊರಟನು ತೀಕ್ಷಣವಲ್ಲಿಗೆ (೨)

ಅಂಜನೆ ಸುತ ಬಂದ ಹರಿಪದ
ಕಂಜಕೆರಗಿ ನಿಂದಾ ||
ಕುಂಜರಗಮನೆಯ ಕುರುಹು ಪೇಳೆನೆ ನಿ-
ರಂಜನ ಮೂರ್ತಿಗೆ ಅಂಜದೆ ಬೆಸಸಿದ (೩)

ಶರಧಿಯನೇ ಹಾರಿ ಉಂಗುರ
ಧರಣಿಸುತೆಗೆ ತೋರೀ ||
ತರು ಪುರ ಗೋಪುರ ಉರುಹಿ ಚೂಡಾಮಣಿ
ಹರಿಗೆ ಸಮರ್ಪಿಸಿ ಹರುಷದಲಿಹನಂತೆ (೪)

ಸೇತುವಿಯನೆ ಕಟ್ಟಿ ಖಳಕುಲ
ನಾಥನ ತರಿದೊಟ್ಟೀ ||
ಸೀತೆ ಸಹಿತ ಮೋಹನ್ನ ವಿಠ್ಠಲ ಜಗ-
ನ್ನಾಥ ಹೊರಟನಂತೇ ಕಾಂತೇ (೫)


tArammayyA raGukula rAmacaMdirana [pa]
IrELu varuShavu mIri pOgutalide
sEradannOdaka mArapitana kare [a.pa]

parNa SAleyaMte alli su-
varNada mRugavaMte ||
kanye sItAMgane bayasidaLaMte
svarNAMbara benhatti pOdanaMtE (1)

lakShmaNa alliMda pOgalu
takShaNa KaLa baMda ||
lakShmiyAkRutiya koMDu pOge kama-
lEkShaNa poraTanu tIkShaNavallige (2)

aMjane suta baMda haripada
kaMjakeragi niMdA ||
kuMjaragamaneya kuruhu pELene ni-
raMjana mUrtige aMjade besasida (3)

SaradhiyanE hAri uMgura
dharaNisutege tOrI ||
taru pura gOpura uruhi cUDAmaNi
harige samarpisi haruShadalihanaMte (4)

sEtuviyane kaTTi KaLakula
nAthana taridoTTI ||
sIte sahita mOhanna viThThala jaga-
nnAtha horaTanaMtE kAMtE (5)

Leave a Reply

Your email address will not be published. Required fields are marked *

You might also like

error: Content is protected !!