Composer : Shri Guru Rama vittala
ರಾಮನಾಮ ಕೀರ್ತನೆ ಮಾಡೊ ಮುದಗೊಡೊ [ಪ]
ಹೃತ್ತಾಮರಸದಿ ನೋಡೋ ಕೊಂಡಾಡೊ [ಅ.ಪ]
ಮರಮರ ಎಂದಾ ವಾಲ್ಮೀಕನ
ವರ ಋಷಿ ಎನ್ನಿಸಿದಾತನ
ಧರಣಿಸುತೆಯಳ ಸಮೇತನ
ಮರುತಾತ್ಮಜಾದಿ ನುತನ ಸುಚರಿತನ [೧]
ದಶರಥಗೆ ಮಗನಾದನ
ಪಶುಪತಿ ಚಾಪವ ಮುರಿದನ
ಅಸುರರನೆಲ್ಲ ಸಂಹರಿಸಿದನ
ಬ್ರಹ್ಮಾದಿದೇವ ವಂದ್ಯನಾ ರಾಜೇಂದ್ರನಾ [೨]
ಭರತ ಶತೃಘ್ನ ಲಕ್ಷ್ಮಣ ಸೇವ್ಯನ
ಸರಸಿಜಗಾಪ್ತಜ ಭಾವ್ಯನ
ಪರಮಾತ್ಮ ಗುರುರಾಮವಿಠ್ಠಲನ
ನೃಪಾಗ್ರಗಣ್ಯನಾದನ ವಿನೋದನಾ [೩]
rAmanAma kIrtane mADo mudagoDo [pa]
hRuttAmarasadi nODO koMDADo [a.pa]
maramara eMdA vAlmIkana
vara RuShi ennisidAtana
dharaNisuteyaLa samEtana
marutAtmajAdi nutana sucaritana [1]
daSarathage maganAdana
paSupati cApava muridana
asuraranella saMharisidana
brahmAdidEva vaMdyanA rAjEMdranA [2]
Barata SatRuGna lakShmaNa sEvyana
sarasijagAptaja BAvyana
paramAtma gururAmaviThThalana
nRupAgragaNyanAdana vinOdanA [3]
Leave a Reply