Composer : Shri Shyamasundara dasaru
ನೋಡಿದೆ ವೆಂಕಟರಮಣನ | ದ್ವಾರ
ವಾಡ ಗ್ರಾಮದಿ ನಿಂತ ದೇವನ ||ಪ||
ರೂಢಿಪ ದಾಸರಿಗೆ ನೀಡಲು ದರುಶನ
ಗೂಢ ಪಾದಾದ್ರಿಯಿಂ ಬಂದ ಮಹಾತ್ಮನ ||ಅ.ಪ||
ಈತನೆ ವೈಕುಂಟನಾಥನು ನಿಜ |
ಶಾತಕುಂಭೋದರ ತಾತನು
ಮಾತಂಗ ವರದಾತ ಶ್ವೇತವಾಹನ ಸೂತ
ಜಾತರಹಿತ ದನುಜಾತ ಕುಲಾಂತಕ ||೧||
ತೋಂಡಮಾನಗೊಲಿದಾತನ್ನ | ತನ್ನ
ತೋಡ ಜನಕೆ ಸುಖದಾತನ |
ಅಂಡಜಾತ ಪ್ರಕಾಂಡ ವರೂಥ ಬ್ರ
ಹ್ಮಾಂಡ ನಾಯಕನಾದ ಪಾಂಡವ ಪಾಲನ ||೨||
ಇಂದು ಧರಾಮರ ವಂದ್ಯನ ಶಾಮ
ಸುಂದರ ವಿಠಲನ ಮುಕುಂದನ
ಸಂದರುಶನ ಮಾತ್ರದಿ ಹಿಂದೆ ಮಾಡಿದ ದೋಷ
ವೃಂದವೆಲ್ಲವು ಇಂದು ಬೆಂದು ಪೋದವು ಘನ||೩||
nODide veMkaTaramaNana | dvAra
vADa grAmadi niMta dEvana ||pa||
rUDhipa dAsarige nIDalu daruSana
gUDha pAdAdriyiM baMda mahAtmana ||a.pa||
Itane vaikuMTanAthanu nija |
SAtakuMBOdara tAtanu
mAtaMga varadAta SvEtavAhana sUta
jAtarahita danujAta kulAMtaka ||1||
tOMDamAnagolidAtanna | tanna
tODa janake suKadAtana |
aMDajAta prakAMDa varUtha bra
hmAMDa nAyakanAda pAMDava pAlana ||2||
iMdu dharAmara vaMdyana SAma
suMdara viThalana mukuMdana
saMdaruSana mAtradi hiMde mADida dOSha
vRuMdavellavu iMdu beMdu pOdavu Gana||3||
Leave a Reply