Composer : Shri Jayatirtharu
ಶ್ರೀ ಜಯತೀರ್ಥರು ” ಜಯರಾಮ ” ಯೆಂಬ ಹರಿಪ್ರಸಾದಾಂಕಿತದಲ್ಲಿ ತಮ್ಮ ಇಷ್ಟ ದೈವವಾದ ಶ್ರೀ ಜಯರಾಮದೇವರ ಕುರಿತು ಮನತುಂಬಿ ಸ್ತೋತ್ರ ಮಾಡುವುದರೊಂದಿಗೆ ವ್ಯಾಸ ಸಾಹಿತ್ಯದ ಜೊತೆಗೆ ಹರಿದಾಸ ಸಾಹಿತ್ಯ ಕ್ಷೇತ್ರವನ್ನೂ ಶ್ರೀಮಂತಗೊಳಿಸಿದ್ದಾರೆ.
ಕೃಪೆ: ಶ್ರೀ ನಾಗರಾಜು ಹಾವೇರಿ :
ನೀಲಮೇಘ ಶ್ಯಾಮನ ಕೋಮಲಾಂಗನ ಕಂಡೆ ನಾ || ಪ ||
ತರುಣ ತರುಣಿಯ ತೇಜವ ಪೋಲುವ |
ಸಿರಿ ಮುಕುಟವ ಫಾಲದಿಂ ಮೃಗನಾಭಿ |
ತಿಲಕವು ಶೋಭಿಪ ಕೊರಳಾಲಿಯ || ಅ. ಪ ||
ಭ್ರೂಯುಗಳ ಕಂಗಳು ಸುನಾಸಿಕ |
ಮಕರ ಕುಂಡಲ ಕರ್ಣದ |
ಫಾಲದಿಂ ಥಳ ಥಲಿಪ ಕಪೋಲದ |
ಕಾಂತಿಯನು ಕಡು ರಂಜಿಸುವ ||
ಬಿಂಬಧರೋಷ್ಯದ ಮಂದಹಾಸದ |
ಚಂದ್ರ ಕಿರಣಗಳ |
ಸೋಲಿಸುವ ಸುಲಿಪಲ್ಲ ಕಂಧರ |
ಮಾಲಿಯ ಕಂಬುಗ್ರೀವನ || ೧ ||
ಕರಿಕರದ ವಾಲ ಪೋಲುವ |
ಚತುರ್ಭುಜದ ಕಂಕಣ ಮುದ್ರೆಯ |
ಪೇರುರದಲೋಪ್ಪುವ ವೈಜಯಂತೀ |
ಮಾಲೆ ಶೋಭಿಪನಾ ||
ಸಿರಿಯು ಶೃಂಗರಿಸುವ ವಕ್ಷದ |
ಸರಸಿಜಾಸನ ಜನಿತ ನಾಭಿಯ |
ವರ ಕಟಿಯ ಮ್ಯಾಲೆಸೆವ |
ಪೀತಾಂಬರ ವಿರಾಜಿತನ || ೨ ||
ಧರೆಯ ಈರಡಿ ಮಾಡಿ | ದನು |
ಜರ ಸದೆದು ದಿವಿಜರ |ಪೊರೆವ ಭಾಪುರೆ |
ವರ ರತುನ ಕಂಕಣ ನ್ಯಾವಳ |
ತೊಡರಿನಿಂದೆಸೆವ | ಚರಣವ |
ನರುಹ ಜಯಜಯಾಕ್ಷೋಭ್ಯತೀರ್ಥ |
ಶ್ರೀ ಜಯರಾಮನ ನೀಲಮೇಘ ಶ್ಯಾಮನ || ೩ ||
SrI jayatIrtharu ” jayarAma ” yeMba hariprasAdAMkitadalli tamma iShTa daivavAda SrI jayarAmadEvara kuritu manatuMbi stOtra mADuvudaroMdige vyAsa sAhityada jotege haridAsa sAhitya kShEtravannU SrImaMtagoLisiddAre.
kRupe: shrI nAgarAju hAvEri :
nIlamEGa SyAmana kOmalAMgana kaMDe nA || pa ||
taruNa taruNiya tEjava pOluva |
siri mukuTava PAladiM mRuganABi |
tilakavu SOBipa koraLAliya || a. pa ||
BrUyugaLa kaMgaLu sunAsika |
makara kuMDala karNada |
PAladiM thaLa thalipa kapOlada |
kAMtiyanu kaDu raMjisuva ||
biMbadharOShyada maMdahAsada |
caMdra kiraNagaLa |
sOlisuva sulipalla kaMdhara |
mAliya kaMbugrIvana || 1 ||
karikarada vAla pOluva |
caturBujada kaMkaNa mudreya |
pEruradalOppuva vaijayaMtI |
mAle SOBipanA ||
siriyu SRuMgarisuva vakShada |
sarasijAsana janita nABiya |
vara kaTiya myAleseva |
pItAMbara virAjitana || 2 ||
dhareya IraDi mADi | danu |
jara sadedu divijara |poreva BApure |
vara ratuna kaMkaNa nyAvaLa |
toDariniMdeseva | caraNava |
naruha jayajayAkShOByatIrtha |
SrI jayarAmana nIlamEGa SyAmana || 3 ||
Leave a Reply