Composer : Shri Harapanahalli Bheemavva on Modalkal Sheshadasaru
ಸ್ಮರಿಸಿ ಬದುಕಿರೊ ಸರ್ವಾನಂದ ಗುರುಗಳ
ನಿರುತದಿಂದ ಇಷ್ಠ ಫಲವ ನೀಡೋ ವರಗಳ ಬೇಡಿ ||ಪ||
ಆದಿಕಲ್ಲಿನಲ್ಲಿ ಮಹಾದೇವ ಕರೆಯೆ ಬಂದು ನಿಂತ
ಶ್ರೀದೇವಿ ರಮಣನ್ನ ಮುದ್ದು ಪಾದಾಂಬುಜವ ಪೂಜಿಸುವರ ||೧||
ಉತ್ತಮವಾಗಿದ್ದ ದಿವ್ಯ ಛತ್ರ ವಿಜಯ ತೀರ್ಥ ನಿರ್ಮಿಸಿ
ನಿತ್ಯಾದಲಿ ಮೃಷ್ಠಾನ್ನ ದಾನ ವಿಸ್ತಾರವನೆ ಪೇಳಲೊಶವೆ ||೨||
ಕುಷ್ಠ ರೋಗ ವ್ಯಾಧಿ ಜ್ವರ ಚತುರ್ಥಿ ಭಯ ಭೀತಿಗಳನೆಲ್ಲ
ಬಿಟ್ಟೋಡಿಸೆ ತೀರ್ಥ ಅಂಗಾರದಲಿ ಸಮಸ್ತರ ಮಹಿಮೆಯ ನೋಡಿ ||೩||
ಸಂತಾನ ಸಹಿತದ ಫಲವು ನಿಂತು ಕೊಡುತ ಮಂತ್ರಾಕ್ಷತೆಯ
ಗ್ರಂಥ ಪದ ಸುಳಾದಿಯ ಲಕ್ಷ್ಮಿಕಾಂತಗೆ ಮಾಡರ್ಪಿಸುವರ ||೪||
ಹರಿಯ ದಿವ್ಹ್ಯಾಸಿಕೆಯ ನಾಮ ಗುರು ವಿಜಯರಾಯರ ಪ್ರೇಮ ಪಡೆದು
ಭೀಮೇಶಕೃಷ್ಣ ನಂಘ್ರಿ ಬಿಡದೆ ಭಜನೆ ಮಾಡುವವರ ||೫||
smarisi badukiro sarvAnaMda gurugaLa
nirutadiMda iShTha Palava nIDO varagaLa bEDi ||pa||
Adikallinalli mahAdEva kareye baMdu niMta
SrIdEvi ramaNanna muddu pAdAMbujava pUjisuvara ||1||
uttamavAgidda divya Catra vijaya tIrtha nirmisi
nityAdali mRuShThAnna dAna vistAravane pELaloSave ||2||
kuShTha rOga vyAdhi jvara caturthi Baya BItigaLanella
biTTODise tIrtha aMgAradali samastara mahimeya nODi ||3||
saMtAna sahitada Palavu niMtu koDuta maMtrAkShateya
graMtha pada suLAdiya lakShmikAMtage mADarpisuvara ||4||
hariya divhyAsikeya nAma guru vijayarAyara prEma paDedu
BImESakRuShNa naMGri biDade Bajane mADuvavara ||5||
Leave a Reply