Sambalakittukollo

Composer : Shri Venugopala dasaru

By Smt.Shubhalakshmi Rao

ಸಂಬಳಕಿಟ್ಟುಕೊಳ್ಳೊ ಕೃಷ್ಣ ಕೃಪಾಳೋ | ಪ |
ಸಂಬಳಕಿಟ್ಟುಕೋ ನಿನ್ನ ಹಂಬಲದಲ್ಲಿರ
ಬೇಕೆಂಬುದೇ ಎನಗೆ ತುಂಬಿ ತುಳುಕುತಿದೆ || ಅ . ಪ ||

ಆರೆಕವಡಿ ಒಲ್ಲೆ ಸಂಬಳ | ನಿನ್ನ
ಹೆಸರ್ಹೇಳಿ ಮಾಡುವೆ ಗೋಪಾಳ |
ಪರಟಿ ತಂಬೂರಿ ಹಿಡಿದು ತಿರಿದುಂಡು ಕೊಂಡು ಬಂದು |
ಕರೆದಾ ಕೆಲಸಕ್ಕೆ ಸಿದ್ಧನಾಗುವೆ ಈ ಕ್ಷಣ || ೧ ||

ಮಧ್ವರಾಯರ ಮನೆಯೋಳು ಅನುಗಾಲ
ಇದ್ದೆ ಕೆಳಿಕೊ ಗುಣಗಳ |
ಪ್ರದ್ಯುಮ್ನ ಇವು ನಿನ್ನ ಬುದ್ಧಿಗೆ ಬಂದರೆ |
ಇದ್ದಾರೆ ಇರಲಿ ಎಂಬೋದಿದ್ದರೆ ಈ ಕ್ಷಣ || ೨ ||

ಬಲುಮಂದಿನಾ ನೋಡಿದೆ ನಿನ್ನಂಥವರ
ಎಲ್ಲಿ ನಾ ನೋಡಲಿಲ್ಲ |
ಲೋಲ ಶ್ರೀವೇಣುಗೋಪಾಲ ವಿಠ್ಠಲ ನಿನ್ನ |
ಕೂಲಿ ಬಂದಾಗ್ಯೂ ರಾಜ್ಯವಾಳಿದಂತೆ || ೩ ||


saMbaLakiTTukoLLo kRuShNa kRupALO | pa |
saMbaLakiTTukO ninna haMbaladallira
bEkeMbudE enage tuMbi tuLukutide || a . pa ||

ArekavaDi olle saMbaLa | ninna
hesarhELi mADuve gOpALa |
paraTi taMbUri hiDidu tiriduMDu koMDu baMdu |
karedA kelasakke siddhanAguve I kShaNa || 1 ||

madhvarAyara maneyOLu anugAla
idde keLiko guNagaLa |
pradyumna ivu ninna buddhige baMdare |
iddAre irali eMbOdiddare I kShaNa || 2 ||

balumaMdinA nODide ninnaMthavara
elli nA nODalilla |
lOla SrIvENugOpAla viThThala ninna |
kUli baMdAgyU rAjyavALidaMte || 3 ||

Leave a Reply

Your email address will not be published. Required fields are marked *

You might also like

error: Content is protected !!