Nambide ninna pada

Composer : Shri Modalkal Sheshadasaru

By Smt.Shubhalakshmi Rao

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ || ಪ ||
ನಂಬಿದೆ ನಿನ್ನ ಪಾದ ಡಂಭವ ತೊಲಗಿಸಿ |
ಡಿಂಭದೊಳಗೆ ಹರಿಯ ಬಿಂಬ ಪೊಳೆ ವಂತೆ ಮಾಡೋ ||ಅ. ಪ. ||

ಇಪ್ಪತ್ತು ಒಂದು ಸಾವಿರ ಐದೊಂದು ನೂರು |
ಅಪ್ರತಿಮ ಹಂಸ ಮಂತರ |
ತಪ್ಪದೆ ದಿನ ದಿನ ಒಪ್ಪುವಂದದಿ ಜಪಿಸಿ |
ತಪ್ಪಿಸೋ ಭವವ ಸಮೀಪದ ಜೀವಕೆ |
ಅಪ್ಪನಂದಾದಿ ಪುಣ್ಯ ಬಪ್ಪಂತೆ ಕರುಣಿಸೋ |
ಕಪ್ಪು ವರ್ಣನ ಕೂಡ ಒಪ್ಪಿಸಿ ಪಾಲಿಸೋ || ೧ ||

ಹತ್ತೇಳು ಎರಡಾಯುತ ನಾಡಿ ಯೊಳು |
ಸುತ್ತಿ ಸುತ್ತುವ ಮಾರುತ |
ಉತ್ತರ ಲಾಲಿಸೊ ಉತ್ಕ್ರಮಣದಲ್ಲಿ |
ನೆತ್ತಿಯ ದ್ವಾರದಿಂದ ಎತ್ತ ಪೋಗಳಿಸದೆ |
ತಟ್ಟುವರೊಳು ಜೀವೋತ್ತಮನೆ |
ಸತ್ ಚಿತ್ತ ಎನಗೆ ಕೊಡುತ್ತರ ಲಾಲಿಸೊ || ೨ ||

ಅಂತರಂಗದ ಉಸುರ ಹೊರಗೆ ಬಿಟ್ಟು |
ಅಂತರಂಗಕ್ಕೆ ಸೇದುವ |
ಪಂಥದೊಳು ನೀನೇ ಕಂತು ಜನಕನಲ್ಲಿ |
ಮಂತ್ರೀಯೆನಿಸಿ ಸರ್ವಾರಂತರ್ಯಾಮಿಯಾಗಿ |
ನಿಂತು ನಾನಾ ಬಗೆ ತಂತು ನಡೆಸುವ |
ಹೊಂತಕಾರಿ ಗುಣವಂತ ಬಲಾಢ್ಯ || ೩ ||

ಪಂಚ ಪ್ರಾಣ ರೂಪನೆ ಸತ್ವ ಕಾಯ |
ಪಂಚೇಂದ್ರಿಯಗಳಪ್ಪನೆ |
ಮುಂಚಿನ ಪರಮೇಷ್ಠಿ ಸಂಚಿತಗಾಮಿ ಬಿಡಿಸಿ |
ಕೊಂಚ ಮಾಡೋ ಪ್ರಾರಬ್ಧ ವಂಚನೆ ಗೈಸದೇ |
ಅಂಚ ಅಂಚಿಗೆ ಪರಪಂಚಗೋಳೋಡಿಸಿ |
ಪಂಚ ವಕ್ತ್ರ ಹರಿ ಮಂಚದ ಗುರುವೆ || ೪ ||

ಯೋಗಾಸನದೊಳಿಪ್ಪ ಯಂತ್ರೋದ್ಧಾರ ಭಾಗವತರಪ್ಪ |
ಯೋಗಿಗಳಿಗೀಶ ವ್ಯಾಸಯೋಗಿಗೊಲಿದ ನ್ಯಾಸ |
ಶ್ರೀತುಂಗಭದ್ರ ನಿವಾಸ |
ಬಾಗುವೆ ಕೊಡು ಲೇಸ ಶ್ರೀಗುರುವಿಜಯವಿಠ್ಠಲನ ಪಾದಕೆ |
ಬಾಗಿದ ಭವದೂರ ಜಾಗರ ಮೂರುತಿ || ೫ ||


naMbide ninna pAda guru muKyaprANa || pa ||
naMbide ninna pAda DaMBava tolagisi |
DiMBadoLage hariya biMba poLe vaMte mADO ||a. pa. ||

ippattu oMdu sAvira aidoMdu nUru |
apratima haMsa maMtara |
tappade dina dina oppuvaMdadi japisi |
tappisO Bavava samIpada jIvake |
appanaMdAdi puNya bappaMte karuNisO |
kappu varNana kUDa oppisi pAlisO || 1 ||

hattELu eraDAyuta nADi yoLu |
sutti suttuva mAruta |
uttara lAliso utkramaNadalli |
nettiya dvAradiMda etta pOgaLisade |
taTTuvaroLu jIvOttamane |
sat citta enage koDuttara lAliso || 2 ||

aMtaraMgada usura horage biTTu |
aMtaraMgakke sEduva |
paMthadoLu nInE kaMtu janakanalli |
maMtrIyenisi sarvAraMtaryAmiyAgi |
niMtu nAnA bage taMtu naDesuva |
hoMtakAri guNavaMta balADhya || 3 ||

paMca prANa rUpane satva kAya |
paMcEMdriyagaLappane |
muMcina paramEShThi saMcitagAmi biDisi |
koMca mADO prArabdha vaMcane gaisadE |
aMca aMcige parapaMcagOLODisi |
paMcha vaktra hari maMchada guruve || 4 ||

yOgAsanadoLippa yaMtrOddhAra BAgavatarappa |
yOgigaLigISa vyAsayOgigolida nyAsa |
SrItuMgaBadra nivAsa |
bAguve koDu lEsa SrIguruvijayaviThThalana pAdake |
bAgida BavadUra jAgara mUruti || 5 ||

Leave a Reply

Your email address will not be published. Required fields are marked *

You might also like

error: Content is protected !!