Composer : Shri Vijayaramachandra vittala dasaru
ನಂಬಿದೆ ನಾನಿನ್ನ ಚರಣವನಂಬಿಗ
ಅಂಬೆಗಳ ಸುತನೆ ಕೋ ಬ್ಯಾಗಂಬಿಗ [ಪ]
ಇಂಬಾಗಿ ದಡ ಸೇರಿಸೆನ್ನನೇನಂಬಿಗ
ತುಂಬಿ ನದಿ ಸೂಸುತಲಿದೆ ನೋಡಂಬಿಗ [ಅ.ಪ.]
ಕರ್ಮವೆಂಬ ಪ್ರವಾಹವ ನೀ ನೋಡಂಬಿಗ
ಚರ್ಮದಿಂದೇಳು ಹೊದ್ದಿಕಿ ಅಂಬಿಗ
ಮರ್ಮ ಒಂಭತ್ತು ರಂಧ್ರ ಉಂಟಂಬಿಗ
ಶರ್ಮವಿದಕೆ ಕಾಯದ್ಹರಿಗೋಲಂಬಿಗ (೧)
ಆಳ ಬಹಳ ಗೊತ್ತಾಗದಂಬಿಗ
ಶೆಳವು ಘನ ಉಳ್ಳುಹುದು ನೋಡಂಬಿಗ
ಸುಳಿಗಾಳಿಗೆ ಸಿಗಿಸದಿರೊ ಅಂಬಿಗ
ಬಳಸಿ ಕೊಂಡೊಯ್ಯೋದು ಒಳ್ಳೇದೆ ಅಂಬಿಗ (೨)
ಸಂಚಿತಾಪ್ತಿ ಇವರೊಳುಂಟಂಬಿಗ
ಮಿಂಚಿ ಭಾರ ಜಡಿಯೋದು ನೀ ನೋಡಂಬಿಗ
ವಂಚಕ ಮಾತು ರಾಗವು ಹೆಚ್ಚಂಬಿಗ
ಚಂಚಲಗೊಂಡು ಭ್ರಮಿಸೋದು ಕಾಣಂಬಿಗ (೩)
ಆಶಾಜಲ ಮೇಲೆ ಮೇಲೆ ಬರುವುದಂಬಿಗ
ಮೋಸ ಮಾಡುವುದೇನೊ ಕೊನೆಗೆ ಅಂಬಿಗ
ಪೊಸ ಪೊಸ ಕಾಮತೆರೆ ತುಂಬಾಯಿತಂಬಿಗ
ಲೇಶವಾದರು ಬತ್ತದು ನೋಡಂಬಿಗ (೪)
ಅಷ್ಟ ಆನೇ ಒಳಗಿಟ್ಟು ಕೊಂಡಿಹುದಂಬಿಗ
ಹುಟ್ಟು ಹಾಕೋದು ಬಿಟ್ಟು ಜಲ್ಲೆ ಕೊಳ್ಳಂಬಿಗ
ಬೆಟ್ಟ ಆರಕ್ಕೆ ಸಿಕ್ಕಿಸದೆ ನೋಡಂಬಿಗ
ನೆಟ್ಟ ನಡುವಿನ ಪಥಕೆ ಒಯ್ಯೋ ಅಂಬಿಗ (೫)
ಸುತ್ತು ಕಾರ್ಮುಗಿಲು ಬಂತಲ್ಲೊ ಅಂಬಿಗ
ಹತ್ತು ಹನಿಗಳು ಬಿತ್ತು ನೋಡಂಬಿಗ
ಎತ್ತಿ ನಡೆಸೋದು ಶಕ್ತಿ ನಿನ್ನದು ಕಾಣಂಬಿಗ
ಹತ್ತಿಸೊ ಭಕ್ತಿ ದಡಕಿನ್ನಂಬಿಗ (೬)
ಮರಕಟಿ ಸೇರಿಹದಿದರೊಳಗಂಬಿಗ
ಕರೆಕರೆಗೆ ಗುರಿ ಮಾಡೊದಿದೆ ಅಂಬಿಗ
ಸರಿಯಾಗಿ ನಡೆಸೊ ಇನ್ನಾದರಂಬಿಗ
ವರದವಿಜಯ ರಾಮಚಂದ್ರವಿಠಲ ನೀನಂಬಿಗ (೭)
naMbide nAninna caraNavanaMbiga
aMbegaLa sutane kO byAgaMbiga [pa]
iMbAgi daDa sErisennanEnaMbiga
tuMbi nadi sUsutalide nODaMbiga [a.pa.]
karmaveMba pravAhava nI nODaMbiga
carmadiMdELu hoddiki aMbiga
marma oMBattu raMdhra uMTaMbiga
Sarmavidake kAyad~harigOlaMbiga (1)
ALa bahaLa gottAgadaMbiga
SeLavu Gana uLLuhudu nODaMbiga
suLigALige sigisadiro aMbiga
baLasi koMDoyyOdu oLLEde aMbiga (2)
saMcitApti ivaroLuMTaMbiga
miMci BAra jaDiyOdu nI nODaMbiga
vaMcaka mAtu rAgavu heccaMbiga
caMcalagoMDu BramisOdu kANaMbiga (3)
ASAjala mEle mEle baruvudaMbiga
mOsa mADuvudEno konege aMbiga
posa posa kAmatere tuMbAyitaMbiga
lESavAdaru battadu nODaMbiga (4)
aShTa AnE oLagiTTu koMDihudaMbiga
huTTu hAkOdu biTTu jalle koLLaMbiga
beTTa Arakke sikkisade nODaMbiga
neTTa naDuvina pathake oyyO aMbiga (5)
suttu kArmugilu baMtallo aMbiga
hattu hanigaLu bittu nODaMbiga
etti naDesOdu Sakti ninnadu kANaMbiga
hattiso Bakti daDakinnaMbiga (6)
marakaTi sErihadidaroLagaMbiga
karekarege guri mADodide aMbiga
sariyAgi naDeso innAdaraMbiga
varadavijaya rAmacaMdraviThala nInaMbiga (7)
Leave a Reply