Krishnana nodide

Composer : Shri Venugopala dasaru

By Smt.Shubhalakshmi Rao

ಕೃಷ್ಣನ ನೋಡಿದೇ ಸರ್ವೋತ್ಕೃಷ್ಟನ ಪಾಡಿದೆ ||ಪ ||
ಕೃಷ್ಣನ ನೋಡಿ ಸಾಷ್ಟಾಂಗವ ಮಾಡಿದೆ ಕಷ್ಟವ ಪರಿಹರಿಸೀಷ್ಟವ ನೀವನ ||ಅ.ಪ||

ಶಿಷ್ಯನ ನೋಡಿದೆ – ವರ ನಿರ್ದುಷ್ಟನ ನೋಡಿದೆ |
ಹೃಷ್ಟ ಪುಷ್ಟ ಸಂತುಷ್ಟನ ಶ್ರೇಷ್ಠನ
ಶಿಷ್ಟರ ಕಷ್ಟ ನಿವಿಷ್ಟನ – ದೇವನ (೧)

ರಂಗನ ನೋಡಿದೆ – ದೇವೋತ್ತುಂಗನ ನೋಡಿದೆ |
ಅಂಗಸಿಂಗ ಕಾಳಿಂಗ ಮರ್ದನನ
ಮಂಗಳಾಂಗ ಭವ ಭಂಗನ ನೋಡಿದೆ (೨)

ದೇವನ ನೋಡಿದೆ ಮುಕುತಿಯೀವನ ನೋಡಿದೆ |
ಗೋವ ಕಾವ ಭೂದೇವ ವಂದಿತ ಬಲ-ದೇವಾನುಜ
ಹಯಗ್ರೀವನ ನೋಡಿದೆ (೩)

ಧೀರನ ನೋಡಿದೆ- ಜಗದ ಉದ್ಧಾರನ ನೋಡಿದೆ |
ವೀರ ಶೂರ ಪರಾತ್ಪರ ತಾನ-ಕ್ರೂರ
ವರದ ಸಿರಿಧಾರನ ನೋಡಿದೆ (೪)

ಶ್ಯಾಮನ ನೋಡಿದೆ – ಬಲು ನಿಸ್ಸೀಮನ ನೋಡಿದೆ |
ವಾಮನ ರಾಮನ ಕಾಮನಯ್ಯನ
ಸಾಮನ ಸೀಮನ ಸೋಮನ ನೋಡಿದೆ (೫)

ಬಾಲನ ನೋಡಿದೆ – ಲಕುಮೀ ವಿಲೋಲನ ನೋಡಿದೆ |
ಶೀಲ ಶೂಲಧರ ಪಾಲ ಲೀಲ ಶಿಶು-ಪಾಲ
ಕಾಲ ವನಮಾಲನ ನೋಡಿದೆ (೬)

ಜಾಣನ ನೋಡಿದೆ – ಬಲು ವಿನೋದನ ನೋಡಿದೆ |
ಗುಣಗಣ ಅಗಣಿತ ಪ್ರಾಣರ ಪ್ರಾಣನ
ವೇಣುಗೋಪಾಲ ವಿಠಲ ಕಲ್ಯಾಣನ (೭)


kRuShNana nODidE sarvOtkRuShTana pADide ||pa ||
kRuShNana nODi sAShTAMgava mADide kaShTava pariharisIShTava nIvana ||a.pa||

SiShyana nODide – vara nirduShTana nODide |
hRuShTa puShTa saMtuShTana SrEShThana
SiShTara kaShTa niviShTana – dEvana (1)

raMgana nODide – dEvOttuMgana nODide |
aMgasiMga kALiMga mardanana
maMgaLAMga Bava BaMgana nODide (2)

dEvana nODide mukutiyIvana nODide |
gOva kAva BUdEva vaMdita bala-dEvAnuja
hayagrIvana nODide (3)

dhIrana nODide- jagada uddhArana nODide |
vIra SUra parAtpara tAna-krUra
varada siridhArana nODide (4)

SyAmana nODide – balu nissImana nODide |
vAmana rAmana kAmanayyana
sAmana sImana sOmana nODide (5)

bAlana nODide – lakumI vilOlana nODide |
SIla SUladhara pAla lIla SiSu-pAla
kAla vanamAlana nODide (6)

jANana nODide – balu vinOdana nODide |
guNagaNa agaNita prANara prANana
vENugOpAla viThala kalyANana (7)

Leave a Reply

Your email address will not be published. Required fields are marked *

You might also like

error: Content is protected !!