Composer : Shri Vijayaramachandra vittala dasaru
ಬಿಟ್ಟಿರಲಾರೆ ಬಾ ಗೋವಿಂದಾ ಸೃಷ್ಟಿಶಾನಂದ [ಪ]
ಬಿಟ್ಟಿರಲಾರೆ ಮನಮುಟ್ಟಿ ಭಜಿಪೆನಯ್ಯ
ಅಷ್ಟ ಮಹಿಷೇರ ಸಹಿತ ನಾಟ್ಯವಾಡುತ ಬೇಗ ಬಾ [ಅ.ಪ]
ಗೊಲ್ಲರ ಮನೆ ಪೊಕ್ಕು ಪಾಲ್ಬೆಣ್ಣೆಗಳ ಮೆದ್ದು
ಚೆಲ್ವ ಲಲನೇರ ಗಲ್ಲ ಮುದ್ದಾಡುತ ಬೇಗ (೧)
ಮಂದಗಮನೆಯರ ಮಂದಹಾಸದಿ ಅಪ್ಪಿ
ದ್ವಂದ್ವ ಕುಚದಲ್ಲಿಟ್ಟ ನಂದಜ ಕರಗಳಿಂದ (೨)
ಮಿರಿಮಿರಿ ಮಿಂಚುವ ಕಿರೀಟ ಕುಂಡಲ
ಧರಿಸಿ ವಾರೆ ನೋಟದಿ ನಾರೇರ ಮನ ಸೆಳೆವ (೩)
ಸುಮನಸರೊಂದಿತ ಯಮುನಾ ಪುಳಿನದಿ
ವಿಮಲ ವೇಣುಸ್ವರದಿ ಕಮಲಾಕ್ಷಿಯರೊಲಿಸಿದ (೪)
ಶ್ರೀವತ್ಸ ಕೌತ್ಸುಭ ಪವಳ ಮುತ್ತಿನಹಾರ
ನ್ಯಾವಳ ಸರಿಗಿಟ್ಟು ಗೋವಳರೊಡಗೂಡಿ (೫)
ತುತ್ತೂರಿ ಝಾಂಗಟೆ ಒತ್ತಿ ಪಿಡಿದಿಹ ಕಹಳೆ
ಬತ್ತೀಸ ರಾಗದಿ ತತ್ಥೈವಾದ್ಯದೀ (೬)
ಎತ್ತಿ ಪಿಡಿದಿಹ ಛತ್ರಿ ಸುತ್ತು ಮಾಗಧ ಮಂದಿ
ಸ್ತೋತ್ರವ ಮಾಡೆ ನೇತ್ರೋತ್ಸವ ತೋರುತ (೭)
ದಿನಪನ ಸೋಲಿಪ ನವ ಪೀತಾಂಬರ ಧರಿಸಿ
ಭುವನವ ಮೋಹಿಪ ನವ ಸುವಿಶೇಷನೆ (೮)
ವಿಜಯ ರಾಮಚಂದ್ರವಿಠಲರಾಯನೆ
ನಿಜ ಪರಿವಾರದಿಂ ಭಜಕರ ಪಾಲಿಪ (೯)
biTTiralAre bA gOviMdA sRuShTiSAnaMda [pa]
biTTiralAre manamuTTi Bajipenayya
aShTa mahiShEra sahita nATyavADuta bEga bA [a.pa]
gollara mane pokku pAlbeNNegaLa meddu
celva lalanEra galla muddADuta bEga (1)
maMdagamaneyara maMdahAsadi appi
dvaMdva kucadalliTTa naMdaja karagaLiMda (2)
mirimiri miMcuva kirITa kuMDala
dharisi vAre nOTadi nArEra mana seLeva (3)
sumanasaroMdita yamunA puLinadi
vimala vENusvaradi kamalAkShiyarolisida (4)
SrIvatsa kautsuBa pavaLa muttinahAra
nyAvaLa sarigiTTu gOvaLaroDagUDi (5)
tuttUri JAMgaTe otti piDidiha kahaLe
battIsa rAgadi tatthaivAdyadI (6)
etti piDidiha Catri suttu mAgadha maMdi
stOtrava mADe nEtrOtsava tOruta (7)
dinapana sOlipa nava pItAMbara dharisi
Buvanava mOhipa nava suviSEShane (8)
vijaya rAmacaMdraviThalarAyane
nija parivAradiM Bajakara pAlipa (9)
Leave a Reply