Bhalire Vageesha teerthakhya

Composer : Shri Vishwendra Tirtharu

By Smt.Shubhalakshmi Rao

Shri Vagisha Tirtharu – Sode MaTha – Shri Vadirajara GurugaLu
Brindavana pravesha : Chaitra Bahula Dvitiya – 1518 A.D.

ಶ್ರೀ ವಿಶ್ವೇಂದ್ರತೀರ್ಥ ರಚಿಸಿದ ಪದ
ಶ್ರೀ ವಾಗೀಶತೀರ್ಥರು – ಶ್ರೀ ವಾದಿರಾಜರ ಗುರುಗಳು


ಭಳಿರೆ ವಾಗೀಶ ತೀರ್ಥಾಖ್ಯ ಮುನಿವರ್ಯ
ಇಳೆಯೊಳು ನಿನಗೆಣೆ ಕಾಣೆ ನಾ ಯತಿವರ್ಯ ||ಪ||

ಜಗದೊಳು ದುರ್ವಾದಿ ಮತವ ಖಂಡಿಸಿದ
ಜಗದೀಶ ಹರಿಯೆ ಸರ್ವೋತ್ತಮನೆಂದು
ನಿಗಮಾರ್ಥವನು ಜಗದಿ ಸಾರಿದಾ ಕುಜನೇಭ
ಮೃಗರಾಜ ವಾದಿರಾಜರಿಗೆ ಗುರುವೆನಿಸಿದೆ ||೧||

ಭಾವೀ ಸಮೀರ ಶ್ರೀವಾದಿರಾಜರ ಜನ್ಮೋ-
ತ್ಸವ ಕಾಲವರಿತಾಗ ಸುಮಪುರಕೆ ನೀನು
ತವಕದಿಂದಲಿ ಪೋಗಿ ಬಾಲಕನ ರಕ್ಷಿಸಿ
ಅವನನೆ ಯತಿರಾಜ ಪಟ್ಟದೊಳಿರಿಸಿದಿರಿ ||೨||

ಗುರು ಮಧ್ವರಂತೆ ನೀ ಸರ್ವ ಶಾಸ್ತ್ರವ ಮಾಡಿ
ಧರಣಿಯೊಳು ರಾಜೇಶ ಹಯಮುಖನ ಚರಣ
ಸ್ಮರಿಸಿ ನೂರಿಪ್ಪತ್ತು ವತ್ಸರದ ಕಾಲದಲಿ
ಇರುವಿರೆನುತಲಿ ಅವರ ಹರಸಿದಿರಿ ದೊರೆಯೆ ||೩||


BaLire vAgISa tIrthAKya munivarya
iLeyoLu ninageNe kANe nA yativarya ||pa||

jagadoLu durvAdi matava KaMDisida
jagadISa hariye sarvOttamaneMdu
nigamArthavanu jagadi sAridA kujanEBa
mRugarAja vAdirAjarige guruveniside ||1||

BAvI samIra SrIvAdirAjara janmO-
tsava kAlavaritAga sumapurake nInu
tavakadiMdali pOgi bAlakana rakShisi
avanane yatirAja paTTadoLirisidiri ||2||

guru madhvaraMte nI sarva SAstrava mADi
dharaNiyoLu rAjESa hayamuKana caraNa
smarisi nUrippattu vatsarada kAladali
iruvirenutali avara harasidiri doreye ||3||

Leave a Reply

Your email address will not be published. Required fields are marked *

You might also like

error: Content is protected !!