Composer : Shri Gurugovinda dasaru on Tande muddumohana dasaru
Shri Tande Muddu Mohana dasaru : 1865-1940
place: Karigiri (Devarayanadurga)
Aradhane : Chaitra Shudda Navami
GurugaLu: Shri Muddu Mohana Vittala Dasaru
ಕಾಯೋ ಕಾಯೋ ಗುರುವರ್ಯ ಕಾಯೋ ಕಾಯೋ
ಗುರುವರ್ಯ | ಕಾಯೋ ಕಾಯೋ | ಪ |
ಕಾಯೋ ಕಾಯೋ ಗುರುವರ್ಯ ಪರಮಪ್ರಿಯ
ಜೀಯ ನಿನ್ನಯ ಪಾದಕೆರಗುವೆನಯ್ಯಾ | ಅ.ಪ |
ಒಂದರಿತವನಲ್ಲ ಕುಂದನು ಎಣಿಸದೆ
ಬಂದು ಸಲಹೋ ತಂದೆ ಮುದ್ದುಮೋಹನ್ನ (೧)
ಹಿಂದಿನ ಸುಕೃತದಿ ಬಂದು ಜನಿಸಿದೆ
ನಂದ ಮುನಿಯ ಮತ ಸಿಂಧುವಿನಲ್ಲಿ (೨)
ಇಂದಾದರು ತವ ದ್ವಂದ್ವಪದವ ಮನ
ಮಂದಿರದಲಿ ತೋರಿ ದುಂದುಗ ಬಿಡಿಸೋ (೩)
ಎಂದಾಗ್ವುದೊ ತಂದೆ ಇಂದಿರೇಶ ಪದ
ದ್ವಂದ್ವ ಸಂದರ್ಶನ ಸಂಧಿಸೊ ಬೇಗನೆ (೪)
ತಂದೆ ನಿನ್ನಲಿ ಗುರುಗೋ | ವಿಂದ ವಿಠಲನ
ಅಂದ ಮೂರುತಿಯನು ಛಂದದಿ ತೋರೋ (೫)
kAyO kAyO guruvarya kAyO kAyO
guruvarya | kAyO kAyO | pa |
kAyO kAyO guruvarya paramapriya
jIya ninnaya pAdakeraguvenayyA | a.pa |
oMdaritavanalla kuMdanu eNisade
baMdu salahO taMde muddumOhanna (1)
hiMdina sukRutadi baMdu janiside
naMda muniya mata siMdhuvinalli (2)
iMdAdaru tava dvaMdvapadava mana
maMdiradali tOri duMduga biDisO (3)
eMdAgvudo taMde iMdirESa pada
dvaMdva saMdarSana saMdhiso bEgane (4)
taMde ninnali gurugO | viMda viThalana
aMda mUrutiyanu CaMdadi tOrO (5)
Leave a Reply