Composer : Shri Tande Venkatesha Vittala
Shri Satyadhyana Tirtharu : 1872 – 1942
॥ आसेतोरातुषाराद्रेर्योदिशो जितवान् मुहुः।
सत्यध्यानगुरुः पातु यतीन्द्रैरपि पूजितः॥
ಅಸೇತೋರಾತುಷಾರಾದ್ರೇರ್ಯೋದಿಶೋ ಜಿತವಾನ್ಮುಹು: |
ಸತ್ಯಧ್ಯಾನಗುರು: ಪಾತು ಯತೀಂದ್ರೈರಪಿಪೂಜಿತ: |
Aradhana – Chaitra Shukla Ashtami
Vrundavana – Pandarapura
ಆನಮಿಪೆ ಶ್ರೀ ಸತ್ಯಧ್ಯಾನ ಯತಿಗಳಿಗೆ | ಪ |
ಹೀನೈಕ್ಯಕಾನನ ತನೂನಪಾತನಿಗೆ | ಅ.ಪ |
ಆಸೇತು ಹಿಮಗಿರಿ ಪ್ರವಾಸ ಕೈಕೊಂಡಖಿಳ
ವ್ಯಾಸಸೂತ್ರಾದಿ ಪ್ರಸ್ಥಾನ ತ್ರಯದಲೀ
ದೇಶಿಕರ ವಿದ್ವದ್ ಸಭಾ ಸಮ್ಮೇಳಾದೊಳನಿಲ
ಭಾಷ್ಯಾರ್ಥಗಳ ಪ್ರತಿಷ್ಟಾಪಿಸಿದನೆಂದು | ೧ |
ಸತ್ಯಜ್ಞಾನಾರ್ಣವ ಮಹತ್ತರೋಡುವ ಭಕ್ತ
ಹೃತ್ತಮಾಂತಕ ಭಾನು ಪ್ರತ್ಯರ್ಥಿಹ
ಮಿಥ್ಯವಿದ್ರಾವಣ ವಿಚಾರ ಸಾರಾದ್ಯಮಿತ
ತತ್ತ್ವ ಪ್ರಮೇಯ ಸರ್ವತ್ರ ಮೆರೆಸಿದನೆಂದು | ೨ |
ಜ್ಞಾನಾಯು ಭಕ್ತಿ ವೈರಾಗ್ಯಾನುಕೂಲದಲಿ
ದಾನಾನುಕಂಪ ವಿದ್ವತ್ ಪ್ರಭೆಯಲಿ
ಜಾನಕೀಪತಿ ವಿಠಲ ಕೃಷ್ಣ ವ್ಯಾಸಾರ್ಚನೆ ವ್-
ಚಾನದೊಳಗಭಿನವಾನಂದ ಮುನಿಯೆಂದು | ೩ |
ಈ ವಿಧ ಮಹಾ ಮಹಿಮರೀಭುವಿಲಿ ಜನಿಸುವುದೇ
ಪಾವಮಾನಿಗರ ಸದ್ಭಾಗ್ಯವೆನುತ |
ಭಾವದೊಳು ಇವರಂಘ್ರಿರೇಣಿನವರವನಾಗಿ
ಸೇವಿಸಲು ದುರ್ಮೋಹ ವ್ಯಾವರ್ತವೆಂದು | ೪ |
ಭೌಮವಾದ ವಸಂತ ಚೈತ್ರಾದಿ ಅಷ್ಟಮಿಯ
ಯಾಮ್ಯ ಯಾಮದೆ ಚಿತ್ರ ಭಾನುವಿನಲಿ
ಭೀಮರತೀ ತೀರ ತಂದೆ ವೆಂಕಟೇಶವಿಠ್ಠಲನ
ಧಾಮವೈದಿದ ಕರ್ಮ ದೇವರಿವರೆಂದು | ೫ |
Anamipe SrI satyadhyAna yatigaLige | pa |
hInaikyakAnana tanUnapAtanige | a.pa |
AsEtu himagiri pravAsa kaikoMDaKiLa
vyAsasUtrAdi prasthAna trayadalI
dESikara vidvad saBA sammELAdoLanila
BAShyArthagaLa pratiShTApisidaneMdu | 1 |
satyaj~jAnArNava mahattarODuva Bakta
hRuttamAMtaka BAnu pratyarthiha
mithyavidrAvaNa vicAra sArAdyamita
tattva pramEya sarvatra meresidaneMdu | 2 |
j~jAnAyu Bakti vairAgyAnukUladali
dAnAnukaMpa vidvat praBeyali
jAnakIpati viThala kRuShNa vyAsArcane v-
cAnadoLagaBinavAnaMda muniyeMdu | 3 |
I vidha mahA mahimarIBuvili janisuvudE
pAvamAnigara sadBAgyavenuta |
BAvadoLu ivaraMGrirENinavaravanAgi
sEvisalu durmOha vyAvartaveMdu | 4 |
BaumavAda vasaMta caitrAdi aShTamiya
yAmya yAmade citra BAnuvinali
BImaratI tIra taMde veMkaTESaviThThalana
dhAmavaidida karma dEvarivareMdu | 5 |
Leave a Reply