Composer : Shri Gurugovinda dasaru
Sri Vedavyasa Tirtharu : 1595 – 1619
Aradhane – Chaitra Shudda Dwiteeya
Vrundavana – Penugonda
na dagdhaM yasya kaupInaM agnau dattamapi sphuTam |
vedavyAsaguruM naumi shrIvedeshanamaskR^itam |
न दग्धं यस्य कौपीनं अग्नौ दत्तमपि स्फुटम् ।
वेदव्यासगुरुं नौमि श्रीवेदेशनमस्कृतम्॥
Ashrama Gurugalu – Sri Raghottama Thirtharu
Ashrama Shishyaru – Sri Vidyadheesha Thirtharu
ನಮಿಸುವೆನು ನಮಿಸುವೆನು ಮುನಿವರ್ಯರೇ ( ಪ)
ಅಮಮ ನಿಮ್ಮಯ ಮಹಿಮೆಯ ಪೊಗಳಲೆನ್ನಳವೇ (ಅ.ಪ.)
ಭಾವ ಬೋಧಾರ್ಯ ವಿಮಲ ಸತ್ಕರಜಾತ
ಭಾವಿ ಬೊಮ್ಮನ ಮತದಿ ಪೂರ್ಣ ವಿಖ್ಯಾತ |
ಧಾವಿಸಿ ನಿಮ್ಮಡಿಗೆ ಓವಿ ನಮಿಪರ ತ್ರಾತ
ಕಾವುದೆಮ್ಮನು ಬಿಡದೆ ಪಾವಮಾನಿಯ ಪ್ರೀತ (೧)
ಇಂದ್ರಗ ವರಜನಾಮ ಮಂದವಾಹಿನಿ ತಟದಿ
ಚೆಂದುಳ್ಳ ಮಹತೆನಿಪ ವೃಂದಾವನದೊಳು |
ಇಂದಿರೇ ರಮಣ ಶಿರಿ ರಾಮಚಂದ್ರನ ಮನದಿ
ಛಂದಾಗಿ ಧ್ಯಾನಿಸುತ ನಿಂದ ಯತಿವರ್ಯಾ (೨)
ಮೋದ ಮುನಿ ಸದ್ಭಾವ ಬೋಧಿಸುತ ಶಿಷ್ಯರಿಗೆ
ವೇದ ವ್ಯಾಸರ ಪ್ರೀತಿ ಆದರದಿ ಗಳಿಸೀ |
ಮೋದ ದಾಯಕನೆನಿಸಿ ಸಾಧುಗಳ ಸಲಹುತ್ತ
ಸಾಧಿಸಿದೆ ಸತ್ಕೀರ್ತಿ ರಾಜ ಸನ್ಮಾನ್ಯ (೩)
ಜೀಮೂತ ಸತ್ ಕ್ಷೇತ್ರ ಶೋಭಿಸುವ ವಿಖ್ಯಾತ
ಆ ಮಾಯಿ ಮತ ತಿಮಿರ ಹರಿಚಕ್ಷು ಜಾತ |
ಪಾಮರನು ನಾ ನಿಮ್ಮ ಚರಣಂಗಳಭಿನಮಿಪೆ
ಶ್ರೀ ಮನೋಹರ ಪಾದ ನೀ ತೋರೊ ಮುನಿಪ (೪)
ಬ್ರಹ್ಮಚರ್ಯಾಖ್ಯ ಮಹ ಮಹಿಮೆ ಪರಿಕಿಸಲು
ಸನ್ಮನದಿ ನೃಪನೆನ್ನ ನಿಮ್ಮ ಕೌಪೀನವಾ |
ಒಮ್ಮನದಿ ಅಗ್ನಿಗಿಡೆ ದಹಿಸಲಾರದೆ ಪೋದ
ಸನ್ಮಹಿಮ ವೇದೇಶ ಸನ್ನುತನೆ ಪೊರೆಯೋ (೫)
ಹರಿಭಕ್ತ ಸುರತರುವೆ ವರ ಸುಚಿಂತಾಮಣಿಯೆ
ಪರಮ ಸೇವಾಸಕ್ತ ಶರಣ ಸುರಧೇನು |
ಹರಿಯ ಸರ್ವೋತ್ತಮತೆ ಸ್ಥಿರ ಪಡಿಸೆ ಸಂಚರಿಸಿ
ಮೆರೆದ ವೇದವ್ಯಾಸ ತೀರ್ಥ ಸದ್ದಭಿಧಾ (೬)
ಘನಗಿರಿ ನರಹರಿಯ ಪದವನುಜ ಸಂಜಾತ
ಮಿನುಗುತಿಹ ವಾಮನಾ ನದಿಯ ಸಂಗಮದಿ
ಗುಣಪೂರ್ಣನಾದ ಗುರು ಗೋವಿಂದ ವಿಠ್ಠಲನ |
ಮನದಿ ಧ್ಯಾನಾಸಕ್ತ ಪೊರೆಮಹ ವಿರಕ್ತ (೭)
namisuvenu namisuvenu munivaryarE ( pa)
amama nimmaya mahimeya pogaLalennaLavE (a.pa.)
BAva bOdhArya vimala satkarajAta
BAvi bommana matadi pUrNa viKyAta |
dhAvisi nimmaDige Ovi namipara trAta
kAvudemmanu biDade pAvamAniya prIta (1)
iMdraga varajanAma maMdavAhini taTadi
ceMduLLa mahatenipa vRuMdAvanadoLu |
iMdirE ramaNa Siri rAmacaMdrana manadi
CaMdAgi dhyAnisuta niMda yativaryA (2)
mOda muni sadBAva bOdhisuta SiShyarige
vEda vyAsara prIti Adaradi gaLisI |
mOda dAyakanenisi sAdhugaLa salahutta
sAdhiside satkIrti rAja sanmAnya (3)
jImUta sat kShEtra SOBisuva viKyAta
A mAyi mata timira haricakShu jAta |
pAmaranu nA nimma caraNaMgaLaBinamipe
SrI manOhara pAda nI tOro munipa (4)
brahmacaryAKya maha mahime parikisalu
sanmanadi nRupanenna nimma kaupInavA |
ommanadi agnigiDe dahisalArade pOda
sanmahima vEdESa sannutane poreyO (5)
hariBakta surataruve vara suciMtAmaNiye
parama sEvAsakta SaraNa suradhEnu |
hariya sarvOttamate sthira paDise saMcarisi
mereda vEdavyAsa tIrtha saddaBidhA (6)
Ganagiri narahariya padavanuja saMjAta
minugutiha vAmanA nadiya saMgamadi
guNapUrNanAda guru gOviMda viThThalana |
manadi dhyAnAsakta poremaha virakta (7)
Leave a Reply