Ella leele

Composer : Shri Vadirajaru

By Smt.Shubhalakshmi Rao

ಎಲ್ಲ ಲೀಲೆ ಇದೆಲ್ಲ ಲೀಲೆ
ಎಲ್ಲ ಲೀಲೆ ರಂಗಗೆಲ್ಲ ಲೀಲೆ [ಪ]

ಪುಟ್ಟಿಸುವುದು ಮನವಿಟ್ಟು ಕಾವುದು
ದುಷ್ಟರ ಶಿಕ್ಷೆ ಅಲ್ಲಿ ವಿಶಿಷ್ಟರ ರಕ್ಷೆ (೧)

ನೀರೊಳುಲ್ಲಾಸ ಮತ್ತಾರಣ್ಯವಾಸ
ಹಾರುವರಾಟ ತನ್ನ ನಾರಿಯ ಬೇಟ (೨)

ಗೊಲ್ಲರಾಕೃತಿ ಬತ್ತಲೆಯ ಸ್ಥಿತಿ
ಬಲ್ಲಿದ ದೈವ ಕಲಿಯ ಗೆಲ್ಲುವ ಭಾಗ (೩)

ವರನಿಪ್ಪುದು ಕರೆದರೆ ಬಪ್ಪುದು
ಧರೆಯಜಮ ಪರಿಪರಿಯ ಕರ್ಮ (೪)

ಹೆಂಗಳ ಕೂಟ ಅಪಾಂಗದ ನೋಟ
ಹಾಸ್ಯದಂಗದಿಂದೂಟ ರಣರಂಗದಿಂದೋಟ (೫)

ಅಂಬಿನ ವೇಧ ನಿನ ತುಂಬಿದ ಕ್ರೋಧ
ತ್ರಿ-ಯಂಬಕ ಪೂಜೆ ತ್ರಿವಿಡಂಬನವೋಜೆ (೬)

ಕರ್ತುಮಾಕರ್ತು ಮತ್ತನ್ಯಥಾ ಕರ್ತು ಎಂಬ
ಶಕ್ತಿ ದೇವಗೆ ಬಲುಯುಕ್ತಿ ಇವಗೆ (೭)

ನಾವೆ ಕರ್ತವ್ಯಂ ಸುಪ್ರವೆ ವಕ್ತವ್ಯಂ
ಏಸು ಮಹಿಮೆಗೆ ಕೃತಕೃತ್ಯ ನಮಗೆ (೮)

ಪ್ರಿಯಮೋದನ ದೈತ್ಯೇಯಭೇದನ
ಹಯವದನ ನಿನ್ನರ್ಥಿ ಕಾಯಿದನ (೯)


ella lIle idella lIle
ella lIle raMgagella lIle [pa]

puTTisuvudu manaviTTu kAvudu
duShTara SikShe alli viSiShTara rakShe (1)

nIroLullAsa mattAraNyavAsa
hAruvarATa tanna nAriya bETa (2)

gollarAkRuti battaleya sthiti
ballida daiva kaliya gelluva BAga (3)

varanippudu karedare bappudu
dhareyajama paripariya karma (4)

heMgaLa kUTa apAMgada nOTa
hAsyadaMgadiMdUTa raNaraMgadiMdOTa (5)

aMbina vEdha nina tuMbida krOdha
tri-yaMbaka pUje triviDaMbanavOje (6)

kartumAkartu mattanyathA kartu eMba
Sakti dEvage baluyukti ivage (7)

nAve kartavyaM suprave vaktavyaM
Esu mahimege kRutakRutya namage (8)

priyamOdana daityEyaBEdana
hayavadana ninnarthi kAyidana (9)

Leave a Reply

Your email address will not be published. Required fields are marked *

You might also like

error: Content is protected !!