Composer : Shri Vijayadasaru
ಶಂಕರನಾರಾಯಣ ಸಲಹೊ ಎನ್ನ |
ಪಂಕಜ ಪಾರ್ವತಿ ಪ್ರಿಯಾ |
ಕಿಂಕರನ ಮೊರೆ ಕೇಳು [ಪ]
ಶಂಖ ಚಕ್ರಪಾಣಿ |
ಮೃಗಾಂಕ ಮೌಳಿ ಅಹಿಪರಿ-|
ಯಂಕ ರುಂಡಮಾಲಾ ಶ್ರೀ |
ವತ್ಸಾಂಕ ಭುಜಗಭೂಷಣ ವಿಷ್ಣು (೧)
ನಂದಿಗಮನ ಗರುಡಾರೂಢಾ |
ಅಂದ ಭಸ್ಮಧರ ಕಸ್ತೂರಿ |
ಗಂಧಲೇಪ ಭೂತನಾಥ
ಸಿಂಧುಶಯನ ತ್ರಿಪುರ ವೈರಿ (೨)
ಪೀತಾಂಬರಧರ ಕೃತ್ಯವಾಸಾ |
ಜಾತರಹಿತ ಜಾಹ್ನವಿಧರ | ವಿ-
ಧಾತ ಜನಕ ತ್ರಿಶೂಲಪಾಣಿ |
ವಾತನೋಡಿಯ ಶಿವ ಗೋವಿಂದ (೩)
ಕೈಲಾಸವಾಸ ವೈಕುಂಠ |
ಲೋಲ ಮಹಾಲಿಂಗ ರಂಗಾ |
ಜ್ವಾಲನೇತ್ರ ಕಮಲನಯನ |
ಕಾಲಾ ನೀಲವರ್ಣ ಕಪರ್ವಿ (೪)
ರಾಜನೊಬ್ಬ ಭೃತ್ಯನೊಬ್ಬ |
ಪೂಜ್ಯನೊಬ್ಬ ಮಾಳ್ಪನೊಬ್ಬ |
ಮೂಜ್ಜಗೇಶ ವಿಜಯವಿಠ್ಠಲ |
ರಾಜ ತಾತ ಈಶ ಮೊಮ್ಮಗ (೫)
SaMkaranArAyaNa salaho enna |
paMkaja pArvati priyA |
kiMkarana more kELu [pa]
SaMKa cakrapANi |
mRugAMka mauLi ahipari-|
yaMka ruMDamAlA SrI |
vatsAMka BujagaBUShaNa viShNu (1)
naMdigamana garuDArUDhA |
aMda Basmadhara kastUri |
gaMdhalEpa bhUtanAtha
siMdhushayana tripura vairi (2)
pItAMbaradhara kRutyavAsA |
jAtarahita jAhnavidhara | vi-
dhAta janaka triSUlapANi |
vAtanODiya Siva gOviMda (3)
kailAsavAsa vaikuMTha |
lOla mahAliMga raMgA |
jvAlanEtra kamalanayana |
kAlA nIlavarNa kaparvi (4)
rAjanobba BRutyanobba |
pUjyanobba mALpanobba |
mUjjagESa vijayaviThThala |
rAja tAta ISa mommaga (5)
Leave a Reply