Composer : Shri Jagannatha dasaru
ಶ್ರೀಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿ
ಶ್ರೀ ಮಹದೇವರ ಸ್ತುತಿ
ಚಂದ್ರಶೇಖರ ಸುಮನಸೇಂದ್ರಪೂಜಿತ ಚರಣಾ-
ಹೀಂದ್ರ ಪದಯೋಗ್ಯ ವೈರಾಗ್ಯ | ವೈರಾಗ್ಯ ಪಾಲಿಸಮ –
ರೇಂದ್ರ ನಿನ್ನಡಿಗೆ ಶರಣೆಂಬೆ || ೧ ||
ನಂದಿವಾಹನ ವಿಮಲ ಮಂದಾಕಿನೀಧರನೆ
ವೃಂದಾರಕೇಂದ್ರ ಗುಣಸಾಂದ್ರ | ಗುಣಸಾಂದ್ರ ಎನ್ನ ಮನ-
ಮಂದಿರದಿ ನೆಲೆಸಿ ಸುಖವೀಯೊ || ೨ ||
ಕೃತ್ತಿವಾಸನೆ ನಿನ್ನ ಭೃತ್ಯಾನುಭೃತ್ಯ ಎ –
ನ್ನತ್ತ ನೋಡಯ್ಯ ಶುಭಕಾಯ | ಶುಭಕಾಯ ಭಕ್ತರಪ –
ಮೃತ್ಯು ಪರಿಹರಿಸಿ ಸಲಹಯ್ಯ || ೩ ||
ನೀಲಕಂಧರ ರುಂಡಮಾಲಿ ಮೃಗವರಪಾಣಿ
ಶೈಲಜಾರಮಣ ಶಿವರೂಪಿ | ಶಿವರೂಪಿ ನೀ ಎನ್ನವರ
ಪಾಲಿಸೊ ನಿತ್ಯ ಪರಮಾಪ್ತ || ೪ ||
ತ್ರಿಪುರಾರಿ ನಿತ್ಯ ಎನ್ನಪರಾಧಗಳ ನೋಡಿ
ಕುಪಿತನಾಗದಲೆ ಸಲಹಯ್ಯ | ಸಲಹಯ್ಯ ಬಿನ್ನೈಪೆ
ಕೃಪಣವತ್ಸಲನೆ ಕೃಪೆಯಿಂದ || ೫ ||
ಪಂಚಾಸ್ಯ ಮನ್ಮನದ ಚಂಚಲವ ಪರಿಹರಿಸಿ
ಸಂಚಿತಾಗಾಮಿಪ್ರಾರಬ್ಧ | ಪ್ರಾರಬ್ಧ ದಾಟಿಸು ವಿ –
ರಿಂಚಿಸಂಭವನೆ ಕೃತಯೋಗ || ೬ ||
ಮಾನುಷಾನ್ನವನುಂಡು ಜ್ಞಾನ ಶೂನ್ಯನು ಆದೆ
ಏನು ಗತಿ ಎನಗೆ ಅನುದಿನ | ಅನುದಿನದಿ ನಿನ್ನ –
ಧೀನದವನಯ್ಯ ಪ್ರಮಥೇಶ || ೭ ||
ಅಷ್ಟಮೂರ್ತ್ಯಾತ್ಮಕನೆ ವೃಷ್ಣಿವರ್ಯನ ಹೃದಯ-
ಧಿಷ್ಠಾನದಲ್ಲಿ ಇರದೋರು | ಇರದೋರು ನೀ ದಯಾ –
ದೃಷ್ಟಿಯಲಿ ನೋಡೊ ಮಹದೇವ || ೮ ||
ಮೃಡದೇವ ಎನ್ನ ಕೈಪಿಡಿಯೊ ನಿನ್ನವನೆಂದು
ಬಡವ ನಿನ್ನಡಿಗೆ ಬಿನ್ನೈಪೆ | ಬಿನ್ನೈಪೆನ್ನ ಮನ-
ದೃಢವಾಗಿ ಇರಲಿ ಹರಿಯಲ್ಲಿ || ೯ ||
ಉಗ್ರತಪ ನಾ ನಿನ್ನನುಗ್ರಹದಿ ಜನಿಸಿದೆ ಪ –
ರಿಗ್ರಹಿಸಿ ಎನ್ನ ಸಂತೈಸು | ಸಂತೈಸು ಇಂದ್ರಿಯವ
ನಿಗ್ರಹಿಪ ಶಕ್ತಿ ಕರುಣೀಸೋ ||೧೦ ||
ಭಾಗೀರಥೀಧರನೆ ಭಾಗವತಜನರ ಹೃ –
ದ್ರೋಗ ಪರಿಹರಿಸಿ ನಿನ್ನಲ್ಲಿ | ನಿನ್ನಲ್ಲಿ ಭಕ್ತಿ ಚೆ –
ನ್ನಾಗಿ ಕೊಡು ಎನಗೆ ಮರೆಯದೆ || ೧೧ ||
ವ್ಯೋಮಕೇಶನೆ ತ್ರಿಗುಣನಾಮ ದೇವೋತ್ತಮ ಉ –
ಮಾಮನೋಹರನೆ ವಿರುಪಾಕ್ಷ | ವಿರುಪಾಕ್ಷ ಮಮ ಗುರು
ಸ್ವಾಮಿ ಎನಗೆ ದಯವಾಗೊ || ೧೨ ||
ಲೋಚನತ್ರಯ ನಿನ್ನ ಯಾಚಿಸುವೆ ಸಂತತವು
ಖೇಚರೇಶನ ವಹನ ಗುಣರೂಪ | ಗುಣರೂಪ ಕ್ರಿಯೆಗಳಾ –
ಲೋಚನೆಯ ಕೊಟ್ಟು ಸಲಹಯ್ಯ || ೧೩ ||
ಮಾತಂಗಷಣ್ಮುಖರ ತಾತ ಸಂತತ ಜಗ –
ನ್ನಾಥವಿಠ್ಠಲನ ಮಹಿಮೆಯ | ಮಹಿಮೆಯನು ತಿಳಿಸು ಸಂ –
ಪ್ರೀತಿಯಿಂದಲೆಮಗೆ ಅಮರೇಶ || ೧೪ ||
ಪಾರ್ವತಿ ರಮಣ ಶುಕ ದೂರ್ವಾಸ ರೂಪದಲ್ಲಿ
ಊರ್ವಿಯೊಳಗುಳ್ಳ ಭಕುತರ | ಭಕುತರ ಸಲಹು
ಸುರ ಸಾರ್ವಭೌಮತ್ವ ವೈದಿದೆ ||೧೫||
ಚಂದ್ರಶೇಖರ ಸುಮನಸೇಂದ್ರ ವಂದಿತ ಪಾದ-
ಹೀಂದ್ರ ಪದಯೋಗ್ಯ ವೈರಾಗ್ಯ | ವೈರಾಗ್ಯ ಭಾಗ್ಯ ಗುಣ
ಸಾಂದ್ರನೆ ಎಮಗೆ ದಯಮಾದೊ || ೧೬ ||
ಅಷ್ಟಪ್ರಕೃತಿಗನೆ ಸರ್ವೇಷ್ಟ ದಾಯಕ ಪರಮೇಷ್ಠಿ
ಸಂಭವನೆ ಪರಮಾಪ್ತ | ಪರಮಾಪ್ತ ಎನ್ನ ದಯ
ದೃಷ್ಟಿಯಿಂದ ನೋಡಿ ಸಲಹಯ್ಯ ||೧೭||
ಪಂಚಾಸ್ಯ ದೈತ್ಯಕುಲ ವಂಚಕನೆ ಭಾವಿ ವಿರಿಂಚಿ
ವಾಯುವಲಿ ಜನಿಸೀದೆ | ಜನಿಸೀದೆ ಲೋಕತ್ರಯದಿ
ಸಂಚಾರ ಮಾಳ್ಪೆ ಸಲಹಯ್ಯ ||೧೮||
ಭೂತನಾಥನ ಗುಣ ಪ್ರಭಾತ ಕಾಲದಲೆದ್ದು
ಪ್ರೀತಿಪೂರ್ವಕದಿ ಪಠಿಸುವ | ಪಠಿಸುವವರ ಜಗ –
ನ್ನಾಥವಿಟ್ಠಲನು ಸಲಹುವ || ೧೯ ||
ನೀಲಕಂಧರ ರಜತ ಶೈಲ ಮಂದಿರ ಚರ್ಮ ಚೈಲ
ಸಿತಗಾತ್ರ ಸುಚರಿತ್ರ | ಸುಚರಿತ್ರ ಮನ್ಮನೊ
ಮೈಲಿಗೆಯ ಬಿಡಿಸಿ ಮುದವೀಯೊ ||೨೦||
caMdraSEKara sumanasEMdrapUjita caraNA-
hIMdra padayOgya vairAgya | vairAgya pAlisama –
rEMdra ninnaDige SaraNeMbe || 1 ||
naMdivAhana vimala maMdAkinIdharane
vRuMdArakEMdra guNasAMdra | guNasAMdra enna mana-
maMdiradi nelesi suKavIyo || 2 ||
kRuttivAsane ninna BRutyAnuBRutya e –
nnatta nODayya SuBakAya | SuBakAya Baktarapa –
mRutyu pariharisi salahayya || 3 ||
nIlakaMdhara ruMDamAli mRugavarapANi
SailajAramaNa SivarUpi | SivarUpi nI ennavara
pAliso nitya paramApta || 4 ||
tripurAri nitya ennaparAdhagaLa nODi
kupitanAgadale salahayya | salahayya binnaipe
kRupaNavatsalane kRupeyiMda || 5 ||
paMcAsya manmanada caMcalava pariharisi
saMcitAgAmiprArabdha | prArabdha dATisu vi –
riMcisaMBavane kRutayOga || 6 ||
mAnuShAnnavanuMDu j~jAna SUnyanu Ade
Enu gati enage anudina | anudinadi ninna –
dhInadavanayya pramathESa || 7 ||
aShTamUrtyAtmakane vRuShNivaryana hRudaya-
dhiShThAnadalli iradOru | iradOru nI dayA –
dRuShTiyali nODo mahadEva || 8 ||
mRuDadEva enna kaipiDiyo ninnavaneMdu
baDava ninnaDige binnaipe | binnaipenna mana-
dRuDhavAgi irali hariyalli || 9 ||
ugratapa nA ninnanugrahadi janiside pa –
rigrahisi enna saMtaisu | saMtaisu iMdriyava
nigrahipa Sakti karuNIsO ||10 ||
BAgIrathIdharane BAgavatajanara hRu –
drOga pariharisi ninnalli | ninnalli Bakti ce –
nnAgi koDu enage mareyade || 11 ||
vyOmakESane triguNanAma dEvOttama u –
mAmanOharane virupAkSha | virupAkSha mama guru
svAmi enage dayavAgo || 12 ||
lOcanatraya ninna yAcisuve saMtatavu
KEcarESana vahana guNarUpa | guNarUpa kriyegaLA –
lOcaneya koTTu salahayya || 13 ||
mAtaMgaShaNmuKara tAta saMtata jaga –
nnAthaviThThalana mahimeya | mahimeyanu tiLisu saM –
prItiyiMdalemage amarESa || 14 ||
pArvati ramaNa shuka dUrvAsa rUpadalli
UrviyoLaguLLa bhakutara | bhakutara salahu
sura sArvabhoumatva vaidide ||15||
caMdraSEKara sumanasEMdra vaMdita pAda-
hIMdra padayOgya vairAgya | vairAgya bhAgya guNa
sAMdrane emage dayamAdo || 16 ||
aShTaprakRutigane sarvEShTa dAyaka paramEShThi
saMbhavane paramApta | paramApta enna daya
dRuShTiyiMda nODi salahayya ||17||
paMchAsya daityakula vaMchakane bhAvi viriMchi
vAyuvali janisIde | janisIde lOkatrayadi
saMchAra mALpe salahayya ||18||
BUtanAthana guNa praBAta kAladaleddu
prItipUrvakadi paThisuva | paThisuvavara jaga –
nnAthaviTThalanu salahuva || 19 ||
nIlakaMdhara rajata shaila maMdira charma chaila
sitagaatra sucharitra | sucharitra manmano
mailigeya biDisi mudavIyo ||20||
Leave a Reply