Composer : Shri Gurugovinda dasaru
ಶರಣು ಭಾರ್ಗವರಾಮ | ಶರಣು ಭಕುತ ಪ್ರೇಮ
ಶರಣು ಭವ ಭಯ ಪರಿಹರಾ ||ಪ||
ಸನಕಾದಿ ಮುನಿವಂದ್ಯ |
ಕನಕ ಗರ್ಭಜ ಜನಕ ಅನುನಯದಿ ಗೀತೆ ಫ |
ಲ್ಗುಣಗೆ ಭೋಧಿಸಿದೇ
ಎಣೆಯೆ ತವ ಕರುಣ |
ಘನವರ್ಷಣಕೆ ಹರಿ ಅನಘ ನಿನ್ನಡಿ ನೆಳಲ |
ನಾಶ್ರಯಿಪೆ ಎಂದೆಂದೂ (೧)
ಭುವನ ಮೋಹನ ದೇವ |
ಭವಗು ಮೋಹಿಪ ಭಾವ
ದಿವಿ ಭವರು ತವರೂಪ |
ಯವಗಳಿಕ್ಕದಲೇ |
ಸವನ ತ್ರಯದಲಿ ಕಂಡು |
ಪವನಾಂತರಾತ್ಮ ಮಾಧವನೆ ಹಿಗ್ಗುತಲಿ |
ಹವಿಷನರ್ಪಿಪರೋ (೨)
ಸರ್ವ ಶಬ್ದಾಭಿಧನೆ |
ಸರ್ವ ದೇವೋತ್ತಮನೆ ಪರ್ವ ಪರ್ವದಿ ಇದ್ದು |
ಪರ್ವ ವಾಚ್ಯಾ |ದರ್ವಿಯಂದದಲಿಪ್ಪ |
ಜೀವನ್ನ ಪೊರೆಯುವ ಸರ್ವ ಭಾರವು ನಿನ್ನದೊ |
ಶರ್ವನೊಡೆಯಾ (೩)
ಬಿಂಬನೆಂದೆನಿಸಿ ಪ್ರತಿ |
ಬಿಂಬರುಗಳ ಜ್ಞಾನದ್ ಹಂಬಲವ ಕೊಡಿಸುತ್ತ |
ಇಂಬು ನಿನ್ನಡಿ ಕಮಲದಿ | ಕಂಬು ಅರಿ ಗದಧರನೆ |
ತುಂಬಿ ಎನ್ನೊಳು ನೀನುಸಂಭ್ರಮದಿ ಕಾಯುವುದು |
ಕುಂಭಿಣಿಯ ರಮಣಾ (೪)
ವಿಶ್ವರೂಪಿಯೆ ನಿನ್ನ |
ನಿಶ್ವಸನ ವೇದಗಳು ಸ್ವಸ್ವ ರೂಪದಿ ಮುಖ್ಯ |
ತವ ಮಹಿಮೆ ಪ್ರತಿಪಾದ್ಯವೂ |
ವಿಶ್ವ ತೈಜಸ ಪ್ರಾಜ್ಞ |
ತ್ರೈಯವಸ್ಥೆ ಪ್ರವರ್ತಕನೆ ವಿಶ್ವ ವ್ಯಾಪಿಯೆ ಗುರು |
ಗೋವಿಂದ ವಿಠಲಾ (೫)
SaraNu BArgavarAma | SaraNu Bakuta prEma
SaraNu Bava Baya pariharA ||pa||
sanakAdi munivaMdya |
kanaka garBaja janaka anunayadi gIte Pa |
lguNage BOdhisidE
eNeye tava karuNa |
GanavarShaNake hari anaGa ninnaDi neLala |
nASrayipe eMdeMdU (1)
Buvana mOhana dEva |
Bavagu mOhipa BAva
divi Bavaru tavarUpa |
yavagaLikkadalE |
savana trayadali kaMDu |
pavanAMtarAtma mAdhavane higgutali |
haviShanarpiparO (2)
sarva SabdABidhane |
sarva dEvOttamane parva parvadi iddu |
parva vAcyA |darviyaMdadalippa |
jIvanna poreyuva sarva BAravu ninnado |
SarvanoDeyA (3)
biMbaneMdenisi prati |
biMbarugaLa j~jAnad haMbalava koDisutta |
iMbu ninnaDi kamaladi | kaMbu ari gadadharane |
tuMbi ennoLu nInusaMBramadi kAyuvudu |
kuMBiNiya ramaNA (4)
viSvarUpiye ninna |
niSvasana vEdagaLu svasva rUpadi muKya |
tava mahime pratipAdyavU |
viSva taijasa prAj~ja |
traiyavasthe pravartakane viSva vyApiye guru |
gOviMda viThalA (5)
Leave a Reply