Composer : Shri Harapanahalli Bheemavva
ಗಂಗೆ ಭಾಗೀರಥೀ ಮಂಗಳಾಂಗಿ
ಅಳಕನಂದನಳೆ ನೀ ಮಹಾ ಸುಂದರಾಂಗಿ
ಸಿಂಧುರಾಜನ ರಾಣಿ ಸಿರಿ ಸಂಪತ್ತು ಕೊಟ್ಟು
ಕಂಗಳಿಂದಲಿ ನೋಡಿ ಕರುಣಿಸೆಮ್ಮನು ತಾಯೆ [ಪ]
ಕಾಶಿ ಪಟ್ಟಣದಲಿ ವಾಸವಾಗಿ
ಸರಸ್ವತಿಯ ಕೂಡಿ ನೀ ಸರಸವಾಗಿ
ಸೋಸಿಲಿಂದ ಸೂರ್ಯಪುತ್ರಿ ಯಮುನೆಯ ಕೂಡಿ ಉ-
ಲ್ಲಾಸದಿಂದ್ಹರಿದೆ ವಾರ್ಣಾಸಿಗ್ಹೋಗಿ (೧)
ಹಾಲಿನಂತೆ ಹರಿವೊ ಗಂಗೆ ನೀನು
ನೀಲದಂತಿದ್ದ ಯಮುನೆಯ ಕೂಡಿ
ಲೀಲೆಯಿಂದಲಿ ಸರಸ್ವತಿಯನ್ನು ಕೂಡಿ
ಒಯ್ಯಾರದಿಂದ್ ಹರಿದೆ ಪ್ರಯಾಗದಲ್ಲಿ (೨)
ಭಗೀರಥನ ಹಿಂದೆ ನೀ ಬಂದೆ ಓಡಿ
ಸಗರನ ಸುತರ ಉದ್ಧಾರ ಮಾಡಿ
ಜಗವ ಪಾವನ ಮಾಡೋ ಜಾಹ್ನವಿಯೆ ನೀ ಎನ್ನ
ಮಗುವೆಂದು ಮುಂದಕ್ಕೆ ಕರಿಯೆ ತಾಯೆ (೩)
ಬಿಂದುಮಾಧವ ವೇಣಿಮಾಧವ ಆ-
ನಂದದಿಂದ ಕಾಳ ಭೈರವ
ಚಂದದಿಂದ್ ವಿಶ್ವನಾಥನ್ನ ಗುಡಿಮುಂದೆ
ಹೊಂದಿ ಹರಿದೆ ಹನುಮಂತನ ಘಾಟಿನ್ಹಿಂದೆ (೪)
ಧಡಧಡನೆ ಬಂದು ದಡಗಳನೆ ಕೊರೆದು
ಪೊಡವಿ ಮೇಲಿಂಥ ಸಡಗರದಿ ಹರಿದು
ಕಡಲ ಶಯನನ್ನ ಕಾಲುಂಗುಷ್ಠದ ಮಗಳೆ
ಕಡಲರಾಣಿಯೆ ಕಯ್ಯ ಪಿಡಿಯೆ ಬೇಗ (೫)
ಮೊರದ ಬಾಗಿಣ ಕುಂಕುಮ ಅರಿಷಿಣವು ಗಂಧ
ಪರಿಪರಿಯಲಿ ಪೂಜೆ ಗೊಂಬುವಿ ಚಂದ
ಸ್ಥಿರವಾದ ಮುತ್ತೈದೆತನ ಜನುಮ ಜನುಮಕ್ಕು
ವರವ ಕೊಟ್ಟು ವೈಕುಂಠವ ತೋರಿಸೆ (೬)
ಮಧ್ಯಾಹ್ನದಲ್ಲಿ ಮಣಿಕರ್ಣಿಕೆಯ ಸ್ನಾನ
ಶುದ್ಧವಾದ ಪಂಚ ಗಂಗೆಯಲಿ
ಅದ್ದಿದ ದೇಹ ಪವಿತ್ರ ಮಾಡಿ ಭವ ಸ-
ಮುದ್ರ ದಾಟಿಸೆ ಭಾಗೀರಥಿ (೭)
ಎಷ್ಟು ಜನ್ಮದ ಪುಣ್ಯ ಒದಗಿತಿಂದು ಗಂಗೆ
ಭೆಟ್ಟಿಯಾಗೊ ಪುಣ್ಯ ಬಂದಿತಿಂದು
ಚಕ್ರತೀರ್ಥದ ಸ್ನಾನ ಸಂಕಲ್ಪದ ಫಲ ಕೊಟ್ಟು
ರಕ್ಷಿಸೆನ್ನನು ತಾಯೆ ತರಂಗಿಣಿ (೮)
ಸಾಸಿರ ಮುಖದಿಂದ ಶರಧಿಯನು ಕೂಡಿ
ಹೋಗಿ ಬಾ ಊರಿಗೆ ಭಕ್ತಿಯ ನೀಡಿ
ನೀನು ಭೀಮೇಶ ಕೃಷ್ಣನಲ್ಲಿ ಹುಟ್ಟಿದ್ದ
ಪಾದವನ್ನು ತೋರಿ ಪೊರೆಯಬೇಕಮ್ಮ (೯)
gaMge BAgIrathI maMgaLAMgi
aLakanaMdanaLe nI mahA suMdarAMgi
siMdhurAjana rANi siri saMpattu koTTu
kaMgaLiMdali nODi karuNisemmanu tAye [pa]
kASi paTTaNadali vAsavAgi
sarasvatiya kUDi nI sarasavAgi
sOsiliMda sUryaputri yamuneya kUDi u-
llAsadiMd~haride vArNAsig~hOgi (1)
hAlinaMte harivo gaMge nInu
nIladaMtidda yamuneya kUDi
lIleyiMdali sarasvatiyannu kUDi
oyyAradiMd haride prayAgadalli (2)
BagIrathana hiMde nI baMde ODi
sagarana sutara uddhAra mADi
jagava pAvana mADO jAhnaviye nI enna
maguveMdu muMdakke kariye tAye (3)
biMdumAdhava vENimAdhava A-
naMdadiMda kALa Bairava
caMdadiMd viSvanAthanna guDimuMde
hoMdi haride hanumaMtana GATinhiMde (4)
dhaDadhaDane baMdu daDagaLane koredu
poDavi mEliMtha saDagaradi haridu
kaDala Sayananna kAluMguShThada magaLe
kaDalarANiye kayya piDiye bEga (5)
morada bAgiNa kuMkuma ariShiNavu gaMdha
paripariyali pUje goMbuvi chaMda
sthiravAda muttaidetana januma janumakku
varava koTTu vaikuMThava tOrise (6)
madhyAhnadalli maNikarNikeya snAna
SuddhavAda paMca gaMgeyali
addida dEha pavitra mADi Bava sa-
mudra dATise BAgIrathi (7)
eShTu janmada puNya odagitiMdu gaMge
BeTTiyAgo puNya baMditiMdu
cakratIrthada snAna saMkalpada Pala koTTu
rakShisennanu tAye taraMgiNi (8)
sAsira muKadiMda Saradhiyanu kUDi
hOgi bA Urige Baktiya nIDi
nInu BImESa kRuShNanalli huTTidda
pAdavannu tOri poreyabEkamma (9)
Leave a Reply