Composer : Shri Kamalesha vittala
ಭಾಗ್ಯವ ಕೊಡೆ ಗರತಿ ಭಾಗೀರಥೀ |ಪ|
ಹರಿಪಾದ ನಖದಿಂದ ಹರಿದು ಬಂದಳೆ ಗಂಗಾ
ಪರಮ ಭಕ್ತರ ಸಂಗ ವರವನ್ನೆ ಕೊಡು ತುಂಗಾ |೧|
ಕಾಶಿ ಪಟ್ಟಣದಲ್ಲಿ ವಾಸವಾಗಿರುತಿ
ಈಶಾದ್ಯರಿಗೆ ಮಹಾ ವರವನ್ನೆ ಕೊಡುತಿ |೨|
ಕಮಲೇಶ ವಿಠಲನ ಮಮತೆಯ ಮಗಳೇ
ಉತ್ತಮ ಗರತಿಯೆಂದು ಭ್ರಮಿಸಿ ಬಂದಳು ತಾಯೆ |೩|
bhaagyava koDe garati bhaagIrathI |pa|
haripAda nakhadiMda haridu baMdaLe gaMgA
parama bhaktara saMga varavanne koDu tuMgA |1|
kAshi paTTaNadalli vAsavAgiruti
IshAdyarige mahA varavanne koDuti |2|
kamalEsha viThalana mamateya magaLE
uttama garatiyeMdu bhramisi baMdaLu tAye |3|
Leave a Reply