Bhageerathiye bhava nashi

Composer : Shri Gopaladasaru

By Smt.Shubhalakshmi Rao

ಭಾಗೀರಥಿಯೆ ಭವನಾಶಿ ಸಾಗರನಾ ಅರಸಿ |
ಭಾಗವತ ಜನ ಪೋಷಿ |
ಬಾಗುವೆ ನಿನ್ನ ಚರಣಗಳಿಗೆನ್ನಭವ |
ರೋಗ ನೀಗೋದಕೂಪಾಯೋಗವ ತೋರಿಸು | ಪ |

ಲೋಕ ಪಾವನಿ ಕಲ್ಯಾಣಿ ಶಾಂತನ್ನ ರಾಣಿ |
ಕೋಕಿಲವಾಣಿ ಶುಭಗುಣಿ |
ಶ್ರೀಕಂಠನ್ನ ಶಿರದ ಮನಿ ವಾಸಮಾಡಿದ್ದು |
ಹೇ ಕರುಣಿ ಭೀಷ್ಮನ್ನ ಜನನಿ |
ನಾಕೆರಡೊಸುಗಳ ಸಾಕಿ ನೀ ಗರ್ಭಾದಿ |
ಹಾಕಾದೆ ಪುನಹ ಲೌಕಿಕದೊಳಗಿನ್ನು |
ಆಕಾರ ತೋರದೆ ಯೇಕಾಂತದಿ ಪತಿಯ |
ಕೂಡಿ ಆಡಿದಾ ಲೋಕ ವಿಲಕ್ಷಣಿ | ೧ |

ವಾಲಿ ಸುಸುಖ ಮುಡಿಯವೊಪ್ಪುವ ಬೈ |
ತಲಿಯನಿಟ್ಟುಳ್ಳ ಬಾಲಿಯಾ |
ತಿಲಕ ಕಸ್ತೂರಿ ಫಣಿಯಾ ಪುಬ್ಬುಗಳಾತಿ |
ಚೆಲವಾ ಕೆಂಗೆಲ್ಲಾ ಭಾಳಿಪ್ಪಾ |
ಚಲಿಸುವ ಕರನ ಕುಂಡಲಾ ವದನಾದಿ |
ಸುಲಿ ಪಲ್ಲುಗಳು ಶೋಭಿಪ ಸುಂದಾರ ಕೊ |
ರಳಾ ಪದಕ ಪಚ್ಚಾ ನೀಲಿಯ ಶೀರಿಯಾನುಟ್ಟು |
ಜಾಲಾದೋಳು ಮೆಲ್ಲಾ ಮೆಲ್ಲಾನೆ ಪಾದಾಯಿಡುವ | ೨ |

ನೋಡಿದಾ ಮಾತ್ರ ನಿನ್ನನು ಮನದ ಅಘವೆಲ್ಲ |
ವೋಡಿತು ಯಿರಾದಲೆ ತಾನು |
ಮಾಡೆ ನಿನ್ನಲಿ ಸ್ನಾನಾವನು ಅವನ ಪುಣ್ಯಕ್ಕೆ |
ಈಡೆಲ್ಲಿ ಫಲವಾಗಾಣೆನು |
ನೋಡಿಲ್ಲ ಪಾವನಾ ಮಾಡೊ ವಿಷಯವಾಗಿ |
ನೋಡು ನಿನ್ನವತಾರ ಮಾಡಿ ಮತ್ತೊಂದಿಲ್ಲಿ |
ರೂಢಿ ಗೋಪಾಲ ವಿಠಲಾನೂ |
ಮಾಡಿ ನಿನ್ನಲ್ಲಿ ವಾಸಾ ಮಾಡಿಪಾ ಸಾಧನಾ | ೩ |


bhAgIrathiye bhavanAshi sAgaranA arasi |
bhAgavata jana pOShi |
bAguve ninna caraNagaLigennabhava |
rOga nIgOdakUpAyOgava tOrisu | pa |

lOka pAvani kalyANi SAMtanna rANi |
kOkilavANi SubhaguNi |
SrIkaMThanna Sirada mani vAsamADiddu |
hE karuNi bhIShmanna janani |
nAkeraDosugaLa sAki nI garbhAdi |
hAkAde punaha laukikadoLaginnu |
AkAra tOrade yEkAMtadi patiya |
kUDi ADidA lOka vilakShaNi | 1 |

vAli susuKa muDiyavoppuva bai |
taliyaniTTuLLa bAliyA |
tilaka kastUri phaNiyA pubbugaLAti |
celavA keMgellA bhALippA |
calisuva karana kuMDalA vadanAdi |
suli pallugaLu SObhipa suMdAra ko |
raLA padaka pacchA nIliya shIriyAnuTTu |
jAlAdOLu mellA mellAne pAdAyiDuva | 2 |

nODidA mAtra ninnanu manada aGavella |
vODitu yirAdale tAnu |
mADe ninnali snAnAvanu avana puNyakke |
IDelli phalavAgANenu |
nODilla pAvanA mADo viShayavAgi |
nODu ninnavatAra mADi mattoMdilli |
rUDhi gOpAla viThalAnU |
mADi ninnalli vAsA mADipA sAdhanA | 3 |

Leave a Reply

Your email address will not be published. Required fields are marked *

You might also like

error: Content is protected !!